ಅಂತರಾಷ್ಟ್ರೀಯ

ಜೀವಶಾಸ್ತ್ರದ ಟೀಚರ್ ಮಕ್ಕಳಿಗೆ ಬಟ್ಟೆ ಬಿಚ್ಚಿ ಪಾಠ ಮಾಡಿದ್ರು…! ಈಗ ಈ ಟೀಚರ್ ಸುದ್ದಿಯಲ್ಲಿದ್ದಾರೆ ….ಹೇಗೆ ಬಟ್ಟೆ ಕಳಚಿ ಪಾಠ ಮಾಡುತ್ತಾರೆ ನೀವೇ ನೋಡಿ…

Pinterest LinkedIn Tumblr

teacher

ಆಮ್‍ಸ್ಟರ್‍ಡ್ಯಾಮ್: ಸಾಧಾರಣವಾಗಿ ಜೀವಶಾಸ್ತ್ರದಲ್ಲಿ ಬರುವ ದೇಹದ ಭಾಗಗಳ ವಿಷಯವನ್ನು ಮಕ್ಕಳಿಗೆ ಶಿಕ್ಷಕರು ವಿವಿಧ ಚಿತ್ರಗಳನ್ನು ತೋರಿಸಿ ಪಾಠ ಮಾಡುತ್ತಾರೆ. ಆದರೆ ನೆದರ್‍ಲ್ಯಾಂಡ್‍ನಲ್ಲಿ ಶಿಕ್ಷಕಿಯೊಬ್ಬರು ತಮ್ಮ ಮೈಮೇಲೆ ಧರಿಸಿದ್ದ ಉಡುಪು ಕಳಚಿ ಮಕ್ಕಳಿಗೆ ಪಾಠ ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ವಿದೇಶದಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿಗಳನ್ನು ಹೆಚ್ಚು ನೀಡುತ್ತಾರೆ. ಆದರಂತೆ ಶಿಕ್ಷಕಿ ಡೆಬಿ ಹರ್ಕ್‍ನೆಸ್ ಎಂಬವರು ಮಕ್ಕಳಿಗೆ ದೇಹದ ಭಾಗಗಳ ಬಗ್ಗೆ ಪಾಠ ಮಾಡಲು ಬಂದಿದ್ದಾರೆ. ಆರಂಭದಲ್ಲಿ ಪ್ರೊಜೆಕ್ಟರ್ ಮೂಲಕ ವಿವರಿಸಿದ ಅವರು ನಂತರ ಕೆಲ ಕ್ಷಣಗಳಲ್ಲಿ ಮೇಜಿನ ಮೇಲೆ ಹತ್ತಿ ತಾವು ಧರಿಸಿದ ಉಡುಪನ್ನು ತೆಗೆದಿದ್ದಾರೆ.

ದೇಹದ ಮೇಲಿನ ಉಡುಪು ಮತ್ತು ಪ್ಯಾಂಟ್ ತೆಗೆದ ಕೂಡಲೇ ಅವರ ಧರಿಸಿದ್ದ ದೇಹದ ಭಾಗಗಳನ್ನು ತೋರಿಸುವ ಮತ್ತೊಂದು ಉಡುಪು ಕಾಣಿಸಿದೆ. ನಂತರ ಅವರು ಈ ಉಡುಪಿನಲ್ಲೇ ಮೇಜಿನ ಮೇಲೆ ನಿಂತುಕೊಂಡು ತಮ್ಮನ್ನು ಉದಾಹರಣೆಯಾಗಿಸಿ ಮನುಷ್ಯನ ವಿವಿಧ ಅಂಗಗಳು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.

ಇವರ ಈ ರೀತಿಯ ಮಾಡಿರುವ ಪಾಠ ನೆದರ್‍ಲ್ಯಾಂಡ್‍ನಲ್ಲಿ ಭಾರೀ ಸುದ್ದಿಯಾಗಿದ್ದು ಮಾಧ್ಯಮಗಳು ಇವರನ್ನು ಮಾತನಾಡಿಸಿವೆ. ಈ ವೇಳೆ, ಆರಂಭದಲ್ಲಿ ನಾನು ಬಟ್ಟೆ ತೆಗೆಯುವಾಗ ವಿದ್ಯಾರ್ಥಿಗಳು ಎಲ್ಲ ಕಕ್ಕಾಬಿಕ್ಕಿಯಾಗಿ ನಾನು ಏನು ಮಾಡುತ್ತೇನೆ ಎನ್ನುವುದನ್ನೇ ನೋಡುತ್ತಿದ್ದರು.ನಂತರ ಅವರಿಗೆ ಈ ಪಾಠ ಇಷ್ಟವಾಯಿತು. ಮಕ್ಕಳಿಗೆ ಈ ರೀತಿ ಪಾಠ ಹೇಳಿದರೆ ಬೇಗ ಅರ್ಥವಾಗುತ್ತದೆ ಎಂಬುದನ್ನು ತಿಳಿದು ಈ ಪ್ರಯೋಗ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇವರು ಈ ರೀತಿ ಮಾಡಿರುವ ಪಾಠದ ವಿಡಿಯೋ ಈಗ ವೈರಲ್ ಆಗಿದ್ದು, ಅಕ್ಟೋಬರ್ 7 ರಂದು ಅಪ್‍ಲೋಡ್ ಆಗಿರುವ ವಿಡಿಯೋವನ್ನು ಇದುವರೆಗೆ ಯೂ ಟ್ಯೂಬ್‍ನಲ್ಲಿ 19 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಶಿಕ್ಷಕಿಯ ಈ ರೀತಿಯ ವಿಶೇಷ ಪ್ರಾಯೋಗಿಕ ಪಾಠ ಶಾಲೆಯ ಆಡಳಿತ ಮಂಡಳಿಗೆ ಇಷ್ಟವಾಗಿದ್ದು ಅಭಿನಂದಿಸಿದೆ.

Write A Comment