ಕರ್ನಾಟಕ

ಸಂಪೂರ್ಣ ಗುಣಮುಖರಾದ ಶಿವರಾಜ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಚ್

Pinterest LinkedIn Tumblr

shiv

ಬೆಂಗಳೂರು: ಲಘು ಹೃದಯಾಘಾತದಿಂದ ಮಂಗಳವಾರ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಸಂಪೂರ್ಣ ಗುಣಮುಖರಾಗಿದ್ದು, ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

ಡಿಸ್ಚಾರ್ಜ್ ಆದ ಬಳಿಕ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಜಿಮ್ ಮಾಡಬೇಕಾದರೆ ಎದೆ ನೋವು ಕಾಣಿಸಿಕೊಂಡಿತು. ಪತ್ನಿ ಗೀತಾಗೆ ವಿಷಯ ತಿಳಿಸಿದೆ. ನಂತರ ಆಸ್ಪತ್ರೆಗೆ ದಾಖಲಾದೆ. ವೈದ್ಯರು ಆಂಜಿಯೋಗ್ರಾಂ ಪರೀಕ್ಷೆ ನಡೆಸಿದರು. ಅಲ್ಲದೆ ಕೆಲಸದ ಒತ್ತಡದಿಂದ ಈ ರೀತಿ ಆಗಿದೆ ಎಂದರು.

ಮಗಳ ಮದುವೆ ಹಾಗೂ ಸಿನಿಮಾ ಚಿತ್ರೀಕರಣದಿಂದಾಗಿ ಸ್ವಲ್ಪ ಒತ್ತಡವಿತ್ತು. ಆದರೂ ಶಿವಣ್ಣನ ಎನರ್ಜಿ ಕಡಿಮೆ ಆಗಲ್ಲ ಎಂದು ಸೆಂಚುರಿಸ ಸ್ಟಾರ್ ಹೇಳಿದರು.ಚಿಕಿತ್ಸೆ ನೀಡಿದ ಎಲ್ಲಾ ವೈದ್ಯರಿಗೂ ಧನ್ಯವಾದ ಹೇಳಿದ ಶಿವಣ್ಣ, ಅಭಿಮಾನಿಗಳ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ ಎಂದರು. ಆಸ್ಪತ್ರೆ ಬಳಿ ನೆರೆದಿದ್ದ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲೆ ಹೂವಿನ ಮಳೆಯೇ ಸುರಿಸಿ, ಸಂಭ್ರಮಿಸಿದರು.

Write A Comment