ಸುಂದರವಾಗಿದ್ದರೂ ಕಾಂತಿಯುತ ತ್ವಚೆ ಇಲ್ಲವೆಂದು ಬೇಸರಪಡುತ್ತಿದ್ದೀರಾ. ಹಾಗಾದ್ರೆ ಇನ್ನು ಮುಂದೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ನೀವು ನಿಮ್ಮ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡಬಹುದು. ಹೇಗೆ ಮಾಡಬೇಕು ಎನ್ನುವುದಕ್ಕೆ ಇಲ್ಲಿ ಟಿಪ್ಸ್ ನೀಡಲಾಗಿದೆ.
ವಿಧಾನ 1
* ಒನ್ ಸ್ಪೂನ್ ಆಲ್ಮಂಡ್ ಆಯಿಲ್
* ಒನ್ ಸ್ಪೂನ್ ಮಿಲ್ಕ್
* ಒನ್ ಸ್ಪೂನ್ ಲೆಮೆನ್ ಜೂಸ್
ಈ ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.
ವಿಧಾನ 2
* ಎರಡು ಕಪ್ ಮೊಸರು
* ಎರಡು ಚಮಚ ಹನಿ
ಈ ಎರಡು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.
ವಿಧಾನ 3
* ಎರಡು ಚಮಚ ಅರಿಶಿನ ಪುಡಿ
* ಎರಡು ಚಮಚ ಹಾಲು
* ಎರಡು ಚಮಚ ಕಡಲೆ ಹಿಟ್ಟು
ಈ ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.
