ಕರ್ನಾಟಕ

ಡಾ.ಎಂ.ಎಂ.ಕಲಬುರ್ಗಿಗೆ ಮರಣೋತ್ತರ ‘ಬಸವಶ್ರೀ’

Pinterest LinkedIn Tumblr

kalburgiಚಿತ್ರದುರ್ಗ, ಅ.7: ಮುರುಘಾ ಮಠದ ವತಿಯಿಂದ ಪ್ರತಿವರ್ಷ ನೀಡಲಾಗುವ ‘ಬಸವಶ್ರೀ’ ಪ್ರಶಸ್ತಿಯನ್ನು, 2015ನೆ ಸಾಲಿನಲ್ಲಿ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯವರ ಬದುಕು, ಸಂಶೋಧನೆಗಳು, ಹೋರಾಟಗಳನ್ನು ಗುರುತಿಸಿ ಇಂದಿನ ಪ್ರಕ್ಷುಬ್ಧಗಳ ವಿರುದ್ಧ ಚಳವಳಿಗೆ ಚೈತನ್ಯವನ್ನು ನೀಡಿ ಹೋರಾಟಗಾರರಿಗೆ ಪ್ರೇರಣೆ ತುಂಬುವ ಆಶಯದಿಂದ ಕಲಬುರ್ಗಿಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಪ್ರಶಸ್ತಿಯನ್ನು 1997ರಿಂದ ನೀಡುತ್ತಾ ಬಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ 5ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು.

Write A Comment