ರಾಷ್ಟ್ರೀಯ

ಆಧಾರ್: ಸುಪ್ರೀಂಗೆ ಕೇಂದ್ರದ ಮನವಿ

Pinterest LinkedIn Tumblr

adharಹೊಸದಿಲ್ಲಿ, ಅ.7: ಆಧಾರ್‌ಕಾರ್ಡ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬನು, ತನ್ನ ಖಾಸಗಿತನದ ಹಕ್ಕನ್ನು ಸ್ವಯಂಪ್ರೇರಿತವಾಗಿ ತ್ಯಜಿಸಬಹುದೇ ಎಂಬ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಬುಧವಾರ ಸಾಂವಿಧಾನಿಕ ಪೀಠದ ಪರಿಶೀಲನೆಗೆ ಒಪ್ಪಿಸಿದೆ. ಪಡಿತರ ಹಾಗೂ ಎಲ್‌ಪಿಜಿ ಸಬ್ಸಿಡಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಸವಲತ್ತುಗಳನ್ನು ಪಡೆಯಲು ಆಧಾರ್‌ಕಾರ್ಡ್ ಐಚ್ಛಿಕವಾಗಿದೆಯೆಂದು 2015ರ ಆಗಸ್ಟ್ 11ರಂದು ತಾನು ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಜೆ.ಚಲಮೇಶ್ವರ್ ನೇತೃತ್ವದ ನ್ಯಾಯಪೀಠವು ನಿರಾಕರಿಸಿತು.

90 ಕೋಟಿ ನಾಗರಿಕರು ಪಡೆದಿರುವ ಆಧಾರ್ ಕಾರ್ಡ್‌ಗಳನ್ನು ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಸ್ವ ಇಚ್ಛೆಯ ಉಪಯೋಗಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರಕಾರವು ಮಂಗಳವಾರ ಅನೇಕ ಪ್ರಮುಖ ಸಂಘಟನೆಗಳೊಂದಿಗೆ ಸುಪ್ರೀಂ ಕೋರ್ಟ್‌ಗೆ ಕಳಕಳಿಯ ಮನವಿ ಮಾಡಿತ್ತು. ಆಧಾರ್ ಕಾರ್ಡನ್ನು ಕೇವಲ ಎಲ್ಪಿಜಿ ಸಬ್ಸಿಡಿ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪಡಿತರಕ್ಕಾಗಿ ಮಾತ್ರ ಉಪಯೋಗಿಸುವುದಕ್ಕೆ ಮಿತಿ ಹೇರಿದ್ದ ನ್ಯಾಯಾಲಯದ ಆ.11ರ ಮಧ್ಯಾಂತರ ಆದೇಶವನ್ನು ಬದಲಿಸುವಂತೆ ಅದು ಕೋರಿತ್ತು.

ಒಬ್ಬ ವ್ಯಕ್ತಿ ಬಡವ ಹಾಗೂ ಆತ ಹಸಿದಿದ್ದಾನೆ ಎಂಬ ಕಾರಣಕ್ಕಾಗಿ ಆತನಿಗೆ ಖಾಸಗಿತನದ ಹಕ್ಕಿನಿಂದ ವಂಚಿತಗೊಳಿಸಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್, ಎಸ್.ಎ.ಬೊಬ್ಡೆ ಹಾಗೂ ಸಿ.ನಾಗಪ್ಪನ್‌ರನ್ನೊಳಗೊಂಡ ಪೀಠವು ಇಂದು ನೀಡಿದ ಆದೇಶದಲ್ಲಿ ತಿಳಿಸಿತು.

Write A Comment