ಕರ್ನಾಟಕ

ಬೆಂಗಳೂರಿನಲ್ಲಿ ಚಲಿಸುತ್ತಿದ್ದ ವಾಹನದಲ್ಲಿ BPO ಯುವತಿ ಗ್ಯಾಂಗ್ ರೇಪ್:

Pinterest LinkedIn Tumblr

rapeಬೆಂಗಳೂರು ಮತ್ತೆ ಬೆಚ್ಚಿ ಬಿದ್ದಿದೆ. ದೆಹಲಿಯಲ್ಲಾದ ನಿರ್ಭಯ ಕೇಸ್ ಬೆಂಗಳೂರಲ್ಲೇ ಸದ್ದಿಲ್ಲದೇ ನಡೆದು ಹೋಗಿದೆ. ದೊಮ್ಮಲೂರಿನ ಬಿಪಿಓದಲ್ಲಿ ಕೆಲ್ಸ ಮಾಡ್ತಿದ್ದ ಮಧ್ಯಪ್ರದೇಶ ಮೂಲದ 22 ವರ್ಷದ ಹುಡ್ಗಿ ಮೇಲೆ ಗ್ಯಾಂಗ್ ರೇಪ್ ಆಗಿದೆ.
ಶನಿವಾರ ರಾತ್ರಿ ದೊಮ್ಮಲೂರಿನಿಂದ ಬಂದು ಮಡಿವಾಳದ ಅಯ್ಯಪ್ಪ ದೇವಸ್ಥಾನದಲ್ಲಿ ನಿಂತಿದ್ದ ಹುಡ್ಗಿ ಮನೆ ಕಡೆ ಹೋಗಲು ಕಾಯ್ತಾ ಇದ್ಲು. ಆಗ ಪ್ರಯಾಣಿಕರನ್ನಾ ಡ್ರಾಪ್ ಮಾಡೋ ನೆಪದಲ್ಲಿ ಬಂದ ಟಿ.ಟಿಯನ್ನಾ ಹುಡ್ಗಿ ಏರಿದ್ದಾಳೆ.
ಅಷ್ಟೆ ಹುಡ್ಗಿ ಟಿ.ಟಿ ಹತ್ತಿತ್ತದ್ದಂತೆ, ಒಳಗಿದ್ದವನೊಬ್ಬ ಚಾಕು ತೋರಿಸಿ, ಹಿಂದಿನ ಸೀಟ್ ಗೆ ಎಳೆದೋಯ್ದಿದ್ದಾನೆ. ಕಿರುಚಿದಾಗ ಚಾಕು ತಗೊಂಡು ಕುತ್ತಿಗೆಗೆ ಇಟ್ಟಿದ್ದಾನೆ. ನಂತರ ಟಿ.ಟಿಯನ್ನಾ ದೊಮ್ಮಲೂರಿನ ನಿರ್ಜನ ಪ್ರದೇಶಕ್ಕೆ ಎಳೆದೋಯ್ದಿದ್ದಾರೆ.
ಟಿ.ಟಿ ಗಾಡಿ ಮೂವ್ ಆಗುವಾಗ್ಲೇ ರಸ್ತೆ ಮಧ್ಯೆದಲ್ಲೇ ಹುಡ್ಗಿ ಮೇಲೆ ಇಬ್ಬರು ಹುಡುಗರು ರೇಪ್ ಮಾಡಿದ್ರೆ…ಮತ್ತೊಬ್ಬ ಹುಡ್ಗ ದೊಮ್ಮಲೂರಿನಲ್ಲಿ ಅತ್ಯಾಚಾರ ಮಾಡಿದ್ದಾನೆ. ನಂತರ ಹುಡ್ಗಿಯನ್ನಾ ವಾಪಸ್ಸು ಟಿ.ಟಿಯಲ್ಲಿ ಸುತ್ತಾಡಿಸಿ ಕರ್ಕೊಂಡು ಬಂದು ಅಯ್ಯಪ್ಪ ಟೆಂಪಲ್ ಬಳಿ ಡ್ರಾಪ್ ಮಾಡಿದ್ದಾರೆ.
ತಕ್ಷಣ ಮಡಿವಾಳ ಸ್ಟೇಷನ್ ಗೆ ಬಂದಾಗ ಪೊಲೀಸ್ರೇ ಸೈಂಟ್ ಜಾನ್ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಡ್ಮಿಟ್ ಮಾಡಿದ್ದಾರೆ. ಗ್ಯಾಂಗ್ ರೇಪ್ ಗೆ ಒಳಗಾದ ಹುಡ್ಗಿ ಇವತ್ತು ಬೆಳಿಗ್ಗೆ ಡಿಸ್ಟ್ಚಾರ್ಜ್ ಆಗಿದ್ದಾಳೆ. ಈಗ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ರೇಪಿಸ್ಟ್ ಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Write A Comment