ಕನ್ನಡ ವಾರ್ತೆಗಳು

ನ.19,20 : ದ.ಕ. ಮತ್ತು ಉಡುಪಿ ಉದ್ಯೋಗಾಕಾಂಕ್ಷಿಗಳಿಗಾಗಿ ಬೃಹತ್ “ಮಂಗಳೂರು ಉದ್ಯೋಗ ಮೇಳ”

Pinterest LinkedIn Tumblr

Job_Mela_Logo_1

ಮಂಗಳೂರು, ಅ.6: ರಾಜ್ಯ ಮಟ್ಟದ ಬೃಹತ್ ‘ಮಂಗಳೂರು ಉದ್ಯೋಗ ಮೇಳ’ವನ್ನು ಬಂಟ್ವಾಳದ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 19 ಮತ್ತು 20ರಂದು ಎರಡು ದಿನಗಳ ಕಾಲ ಅಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಮೇಳದ ಲಾಂಛನವನ್ನು ಬಿಡುಗಡೆಗೊಳಿಸಿದ ಅವರು ಮೇಳದ ಪೂರ್ವತಯಾರಿ ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಅವರು ಚರ್ಚಿಸಿದರು. ಮೇಳದಲ್ಲಿ ದ.ಕ. ಮತ್ತು ಉಡುಪಿಯ ಉದ್ಯೋ ಗಾಕಾಂಕ್ಷಿಗಳಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಹೇಳಿದ ಅವರು, ವಿಭಿನ್ನ ಉದ್ಯೋಗ ಮೇಳವನ್ನಾಗಿಸಬೇಕೆಂದು ಅಧಿಕಾರಿಗಳಿಗೆ ರೈ ಸಲಹೆ ನೀಡಿದರು.

ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ಕುರಿತಂತೆ ಕಾಳಜಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಉದ್ಯೋಗ ದಾತ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸುವಂತೆ ಮಾಡಲು ಬೆಂಗಳೂರು ಮತ್ತು ದುಬೈ ಯಲ್ಲಿ ಕಂಪೆನಿಗಳ ಆಡಳಿತ ನಿರ್ದೇಶಕರು ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆಯನ್ನು ನಡೆಸಲಾ ಗುವುದು. ಅ.14ರಂದು ಬೆಂಗಳೂರಿನಲ್ಲಿ ಈ ಸಭೆ ನಡೆಯಲಿದೆ ಎಂದು ಸಚಿವ ರೈ ತಿಳಿಸಿದರು.

ಮೇಳದ ಸಂಯೋಜಕ ವಿವೇಕ್ ಆಳ್ವ ಮಾಹಿತಿ ನೀಡುತ್ತಾ, ಉದ್ಯೋಗದಾತ ಕಂಪೆನಿಗಳು ಹಾಗೂ ಅಭ್ಯರ್ಥಿಗಳ ಆನ್‌ಲೈನ್ ನೋಂದಣಿಗೆ ಹೆಚ್ಚಿನ ಮಹತ್ವವನ್ನು ಮೇಳದಲ್ಲಿ ನೀಡಲಾಗುತ್ತದೆ. ಮೇಳದಂದು ಸಂಬಂಧಪಟ್ಟ ವಿಷಯಗಳಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ಕಲರ್ ಕೋಡು ನೀಡುವ ಮೂಲಕ ಉದ್ಯೋಗಾಂಕ್ಷಿಗಳ ಗುರುತು ಹಾಗೂ ಕಂಪೆನಿಯ ನಡುವೆ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಸಮಾಲೋಚಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಒದಗಿಸಲಾಗು ವುದು ಎಂದು ವಿವರಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಡಾ.ಇಫ್ತಿಕಾರ್ ಅಲಿ, ಮೇಳಕ್ಕೆ ಮೊದಲು ಉದ್ಯೋಗದಾತ ಕಂಪೆನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವುದು ಮತ್ತು ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ಖಾತರಿಗಾಗಿ ಎಲ್ಲ ಕಂಪೆನಿಗಳ ಮುಖ್ಯಸ್ಥರ ಸಭೆ ನಡೆಸುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಒದಗಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು. .

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಕಿಯೋನಿಕ್ಸ್ ನಿರ್ದೇಶಕ ಬಸವ ರಾಜೇಂದ್ರ, ಉದ್ಯೋಗ ತರಬೇತಿ ಇಲಾಖೆ ನಿರ್ದೇಶಕ ಕುಲಕರ್ಣಿ, ಐಸಿಟಿ ಕೌಶಲ್ಯ ಅಭಿವೃದ್ಧಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೌಲಿಶ್ರೀ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶಾಂತಪ್ಪ, ಜಿಪಂ ಸಿಇಒ ಶ್ರೀವಿದ್ಯಾ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ವಂದಿಸಿದರು.

Write A Comment