ನವದೆಹಲಿ (ಏಜೆನ್ಸೀಸ್): ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್‌ನ ಶಾಶ್ವತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಜಾಕ್ ಡೊರ್ಸಿ ನೇಮಕಗೊಂಡಿದ್ದಾರೆ.
ಟ್ವಿಟರ್ ಸಿಇಒ ಆಗಿದ್ದ ಡಿಕ್ ಕೋಸ್ಟಲೊ ಅವರು ಜುಲೈ 1ರಂದು ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಜಾಕ್ ತಾತ್ಕಾಲಿಕ ಸಿಇಒ ಹುದ್ದೆಗೆ ನೇಮಿಕಗೊಂಡಿದ್ದರು.
ಟ್ವಿಟರ್‌ನ ಸಹ ಸಂಸ್ಥಾಪಕರಲ್ಲೊಬ್ಬರಾದ ಜಾಕ್ ಮೂರು ತಿಂಗಳ ಕಾಲ ತಾತ್ಕಾಲಿಕ ಸಿಇಒ ಆಗಿ ಕಾರ್ಯನಿರ್ವಹಿಸಿದ ಬಳಿಕ ಇದೀಗ ಸಂಸ್ಥೆಯ ಶಾಶ್ವತ ಸಿಇಒ ಆಗಿ ನೇಮಕಗೊಂಡಿದ್ದಾರೆ.