ಕರ್ನಾಟಕ

ಮಾರುಕಟ್ಟೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

Pinterest LinkedIn Tumblr

samಬೆಂಗಳೂರು,ಸೆ.30-ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.  ಬೆಂಗಳೂರಿನ ರಿಲಯನ್ಸ್ ಡಿಜಿಟಲ್‌ನಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಬಿಡುಗಡೆ ಮಾಡಿ ಮೊದಲೇ ಬುಕ್ ಮಾಡಿದ ಗ್ರಾಹಕರಿಗೆ ಅದನ್ನು ವಿತರಿಸಿ ಹೊಸ ವಿನ್ಯಾಸ ಹಾಗೂ ತಂತ್ರಜ್ಞನ ಸ್ಯಾಂಮ್‌ಸಾಂಗ್ ಗ್ಯಾಲಕ್ಸಿ ನೋಟ್ 5 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಕೋರಮಂಗಲ ದಲ್ಲಿ ನಡೆದ ಮತ್ತೊಂದು ಕಾರ್ಯ ಕ್ರಮದಲ್ಲಿ ಸ್ಯಾಂಮ್‌ಸಂಗ್ ಇಂಡಿಯ ಉಪಾಧ್ಯಕ್ಷ(ಮಾರ್ಕೆಟಿಂಗ್) ಅಸೀಮ್ ವರ್ಷಿ ಮತ್ತು ಇಜೋನ್ ಫ್ಯೂಚರ್ ಗ್ರೂಪ್‌ನ ಸಿಇಒ ರಾಜನ್ ಮಲ್ಹೋತ್ರ ಅವರು  ಸ್ಯಾಂಡಲ್‌ವುಡ್ ನಟಿ ಫರುಲ್ ಯಾದವ್ ಅವರ ಜೊತೆ ಸ್ಯಾಮ್‌ಸಾಂಗ್ ನೋಟ್ 5 ಬಿಡುಗಡೆ ಮಾಡಿ ಹೊಸ ತಂತ್ರಜ್ಞಾನ ಗ್ರಾಹಕರನ್ನು ಸೆಳೆಯಲಿದೆ ಎಂದು ತಿಳಿಸಿದರು.

ಸಾಮಾಜಿಕ ತಾಣಗಳನ್ನು ಬಳಸುವಾಗ ಅತ್ಯಂತ ವೇಗ ಮತ್ತು ಸಾಫ್ಟ್‌ವೇರ್‌ಗಳನ್ನು ಶೇಖರಿಸುವ ಅವಕಾಶ ಮತ್ತು ಗ್ರಾಫಿಕ್ ಗೇಮ್ಸ್‌ಗಳು, ವಿಡಿಯೋಗಳು ಕೂಡ ಆಕರ್ಷಣೀಯವಾಗಿದೆ ಎಂದು ಹೇಳಿದರು.

Write A Comment