ಕರ್ನಾಟಕ

ಮೂವತ್ತೆಂಟು ವರ್ಷದ ಹೋರಾಟ, ಒಡೆಯರ್‍ಗೆ ಸಿಕ್ತು ಕೊನೆಗೂ ಜಯ: ಅರಮನೆ ಸುತ್ತಲಿನ ಖಾಲಿ ಜಾಗಕ್ಕೆ ವಿಧಿಸಿದ್ದ ತೆರಿಗೆ ವಿರುದ್ಧ ಹೋರಾಟ

Pinterest LinkedIn Tumblr

Bengaluru-palaceಬೆಂಗಳೂರು: ನಿಧನರಾಗಿ ಎರಡು ವರ್ಷಗಳ ಬಳಿಕ, ಮೈಸೂರು ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಾವು ಕಳೆದ ಮೂವತ್ತೆಂಟು ವರ್ಷಗಳಿಂದ ನಡೆಸುತ್ತಿದ್ದ  ನ್ಯಾಯಾಂಗ ಹೋರಾಟದಲ್ಲಿ ಜಯಗಳಿಸಿದ್ದಾರೆ.

ಹೌದು 1977 ಮತ್ತು 1986ರ ನಡುವಣ ಅವಧಿಯಲ್ಲಿ ಬೆಂಗಳೂರು ಅರಮನೆಯ ಸುತ್ತಲಿದ್ದ ಖಾಲಿ ಜಾಗಕ್ಕೆ ಹೇರಿದ್ದ ಆಸ್ತಿ ತೆರಿಗೆಯ ವಿರುದ್ಧದ ಹೋರಾಟದಲ್ಲಿ ಒಡೆಯರ್‍ಗೆ ಗೆಲುವು ಸಿಕ್ಕಿದೆ.  ಸೆ.21ರಂದು ತನ್ನ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ಅರಮನೆ ಸುತ್ತಲಿನ ಖಾಲಿ ಜಮೀನಿನ ಒಟ್ಟು ಮಾರ್ಕೆಟ್ ಮೌಲ್ಯ ರು.2 ಲಕ್ಷ ಎಂದು ಪರಿಗಣಿಸಿ 1976ರ ಯುಎಲ್ ಸಿಆರ್ ಕಾಯ್ದೆ  ಅನ್ವಯ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೂ ಇದನ್ನೇ ಗರಿಷ್ಠ ಪರಿಹಾರ ಮೊತ್ತವನ್ನಾಗಿ ತೆಗೆದುಕೊಳ್ಳಬೇಕು ಎಂದಿದೆ. ಆದರೆ ತೆರಿಗೆ ಅಧಿಕಾರಿಗಳು ಈ ಮೊದಲು ಇವುಗಳ ಮಾರ್ಕೆಟ್ ಮೌಲ್ಯವನ್ನು 1977 ರಿಂದ 1986 ತನಕ ರು.13ಕೋಟಿಯಿಂದ ರು.31 ಕೋಟಿಯೆಂದು ಪರಿಗಣಿಸಿ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಿದ್ದರು. ತೆರಿಗೆ ಅಧಿಕಾರಿಗಳ ಲೆಕ್ಕಾಚಾರ ಮತ್ತು 2005ರ ಹೈಕೋರ್ಟ್ ವ್ಯಾಲ್ಯುಯೇಶನ್ ಎರಡಕ್ಕೂ ಸುಪ್ರೀಂ ಕೋರ್ಟ್ ಅಸಮ್ಮತಿ ವ್ಯಕ್ತಪಡಿಸಿ ಈ ಮೌಲ್ಯವನ್ನು ನಿಗದಿಪಡಿಸಿದೆ.

ರೆಸಿಡೆನ್ಷಿಯಲ್  ಮತ್ತು ನಾನ್ ರೆಸಿಡೆನ್ಷಿಯಲ್  ಜಾಗಗಳ ಆಸ್ತಿ ತೆರಿಗೆ ಬಗ್ಗೆ ಯಾವುದೇ ತಕರಾರು ಎದ್ದಿರಲಿಲ್ಲ. ಇಲಾಖೆ ನಿರ್ಧರಿಸಿದ ಮೊತ್ತವನ್ನು ವಡೆಯರ್ ಪಾವತಿ ಮಾಡಿದ್ದರು. ಕೇವಲ ಖಾಲಿ  ಜಮೀನಿನ ಮೇಲಿನ ಆಸ್ತಿ ತೆರಿಗೆ ಬಗ್ಗೆ 38 ವರ್ಷದಿಂದ ಹೋರಾಟ ನಡೆದಿತ್ತು. ನ್ಯಾ.ಎ.ಕೆ. ಸಿಕ್ರಿ ಮತ್ತು ನ್ಯಾ.ರೋಹಿಂಟನ್ ಫಾಲಿ ನಾರಿಮನ್ ಹಾಗೂ ಇನ್ನಿತರರಿದ್ದ ಪೀಠ ಮಾರಾಟ ಬೆಲೆಯ  ಮೇಲೆ ವೆಲ್ತ್ ಟ್ಯಾಕ್ಸ್ ನಿಗದಿಪಡಿಸಿದ್ದಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿ ಯುಸಿಎಲ್ ಆರ್ ಕಾಯ್ದೆಯನ್ನು ಉಲ್ಲೇಖಿಸಿ ರು.2 ಲಕ್ಷಕ್ಕೆ ಮಿತಿಗೊಳಿಸಿತು.

Write A Comment