ರಾಷ್ಟ್ರೀಯ

ಆಪ್ ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ಬಡವನಲ್ಲ, ಚುನಾವಣೆಗೂ ಸ್ಪರ್ಧಿಸಿದ್ದ

Pinterest LinkedIn Tumblr

ganendraನವದೆಹಲಿ: ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಾವಿರಾರು ಜನರೆದುರೇ ಜಂತರ್ – ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿ ವೇಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರಲಿಲ್ಲ ಎಂಬ ಆಘಾತಕಾರಿ ಮಾಹಿತಿ ಗುರುವಾರ ಹೊರ ಬಿದ್ದಿದೆ.

41 ವರ್ಷದ ಗಜೇಂದ್ರ ಸಿಂಗ್ ಅವರು ಆರ್ಥಿಕವಾಗಿ ಚೆನ್ನಾಗಿಯೇ ಇದ್ದರು ಮತ್ತು ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಇರಲಿಲ್ಲ ಎನ್ನಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಗಜೇಂದ್ರ ಸಿಂಗ್ ಅವರು ರಾಜಸ್ಥಾನದ ದೌಸಾದಲ್ಲಿ 2008 ಮತ್ತು 2013ರಲ್ಲಿ ಸಮಾಜವಾದಿ ಪಕ್ಷದಿಂದ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ನಂತರ ಆಮ್ ಆದ್ಮಿ ಪಕ್ಷ ಸೇರಿದ್ದರು.

ಗಜೇಂದ್ರ ಸಿಂಗ್ ಕುಟುಂಬ ಟೀಕ್ ಪ್ಲಾಂಟೇಷನ್ ಸೇರಿದಂತೆ ಒಟ್ಟು 10 ಎಕರೆ ಜಮೀನು ಹೊಂದಿದ್ದು, ಅವರು ಆರ್ಥಿಕ ಸಂಕಷ್ಟದಲ್ಲಿ ಇರಲಿಲ್ಲ. ಆದರೆ ರಾಜಕೀಯಕ್ಕೆ ಬಂದ ಮೇಲೆ ಗಜೇಂದ್ರ ಸಿಂಗ್ ಅವರು ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದರು ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಇನ್ನು ಅಕಾಲಿಕ ಮಳೆಯಿಂದಾಗಿ ಗಜೇಂದ್ರ ಸಿಂಗ್ ಅವರ ಜಮೀನನಲ್ಲಿ ತೀವ್ರತರವಾದ ಬೆಳೆ ಹಾನಿ ಸಂಭವಿಸಿರಲಿಲ್ಲ ಮತ್ತು ಆತ ಆರ್ಥಿಕ ಸಂಕಷ್ಟದಲ್ಲಿರಲಿಲ್ಲ ಎಂದು ಗ್ರಾಮಸ್ಥರು ಹೇಳಿರುವುದಾಗಿ ಟಿವಿ ವಾಹಿನಿ ವರದಿ ಮಾಡಿದೆ.

Write A Comment