ಕರ್ನಾಟಕ

ಹೆಚ್ಚಿತ್ತಿದೆ ಇಂಗ್ಲಿಷ್ ವ್ಯಾಮೋಹ; 5 ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ದ್ವಿಗುಣ

Pinterest LinkedIn Tumblr

english

ನವದೆಹಲಿ, ಸೆ.28: ಕಳೆದ 5 ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ ಹಿಂದಿ ಮಾಧ್ಯಮ ಶಾಲೆಗಳಿಂದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಮಾತ್ರ ಅಷ್ಟೇ ಇದೆ.

ರಾಜಕಾರಣಿಗಳು ಹಿಂದಿ ಶಾಲೆಗಳಿಗೆ ಒತ್ತಾಸೆ ನೀಡುತ್ತಿರಬಹುದು. ಆದರೆ ಜನ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಲು ಮುಗಿಬೀಳುತ್ತಿದ್ದಾರೆ. 2008-09 ರಲ್ಲಿ ಮತ್ತು 2013-14 ರಲ್ಲಿ ಶಾಲೆಗೆ ಸೇರುವ ಮಕ್ಕಳ ಸರಾಸರಿ ಸಂಖ್ಯೆ ಶೇ. 7.5 ರಷ್ಟು ಹೆಚ್ಚಿತಾದರೂ ಅದರಲ್ಲಿ ಹಿಂದಿ ಮಾಧ್ಯಮ ಆಯ್ಕೆ ಮಾಡಿಕೊಂಡವರು ಶೇ. 25 ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಹೋದವರು ಶೇ. 50 !

2008-09 ರಲ್ಲಿ ಇಂಗ್ಲಿಷ್ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 1.5 ಕೋಟಿ ಇದ್ದರೆ 2013-14 ರಲ್ಲಿ ಈ ಸಂಖ್ಯೆ 2.9 ಕೋಟಿಗೆ ಏರಿದೆ!. ಆಸಕ್ತಿಕರ ವಿಷಯವೆಂದರೆ, ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಅತಿಹೆಚ್ಚು ಇಂಗ್ಲಿಷ್ ಶಾಲೆಗಳ ಬೆಳವಣಿಗೆ ಕಂಡುಬಂದಿದೆ. ಅತಿಹೆಚ್ಚು ಎಂದರೆ ಬಿಹಾರ, ಅಲ್ಲಿ ಇಂಗ್ಲಿಷ್ ಶಾಲೆಗಳು ಶೇ. 47 ರಷ್ಟು ಹೆಚ್ಚಾಗಿವೆ. ಅದೇ ಹಿಂದಿ ಮಾಧ್ಯಮ ಶಾಲೆಗಳ ಸಂಖ್ಯೆ ಶೇ. 18 ರಷ್ಟು ಹೆಚ್ಚಾಗಿವೆ. ಉತ್ತರ ಪ್ರದೇಶದಲ್ಲಿ ಶೇ. 10 ರಷ್ಟು, ಹರಿಯಾಣ, ಜಾರ್ಖಂಡ್ ಮತ್ತು ರಾಜಸ್ತಾನ್‌ಗಳು ನಂತರದ ಸ್ಥಾನದಲ್ಲಿವೆ.

Write A Comment