ಕರ್ನಾಟಕ

ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಬೆಣ್ಣಿಹಳ್ಳದಿಂದ ಸಿಗಲಿದೆ ಏಳು ಟಿಎಂಸಿ ನೀರು

Pinterest LinkedIn Tumblr

holi-fi– ಗುರುಲಿಂಗಸ್ವಾಮಿ ಹೊಳಿಮಠ
ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವವರಿಗೆ ತುಸು ನೆಮ್ಮದಿ ನೀಡುವ ಸುದ್ದಿಯೊಂದು ಇಲ್ಲಿದೆ.

ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಿಂದ ಪಡೆಯಬಹುದಾದಷ್ಟೇ ಪ್ರಮಾಣದ ನೀರನ್ನು ಯಾವುದೇ ತಕರಾರಿಲ್ಲದೆ ಬೆಣ್ಣಿಹಳ್ಳದಿಂದ ನವಿಲುತೀರ್ಥ ಜಲಾಶಯಕ್ಕೆ ಹರಿಸಬಹುದೆಂಬ ಸಮಗ್ರ ಯೋಜನಾ ವರದಿಯೊಂದು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕಳಸಾ-ಬಂಡೂರಿ ನಾಲೆಗಳಿಂದ 7.56 ಟಿಎಂಸಿ ನೀರು ಪಡೆಯಬಹುದಾಗಿದ್ದರೆ, ಬೆಣ್ಣಿಹಳ್ಳದಿಂದ 7 ಟಿಎಂಸಿ ನೀರನ್ನು ಜಲಾಶಯಕ್ಕೆ ಹರಿಸಬಹುದು ಎಂದು ವರದಿ ತಿಳಿಸಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹರೂಪದಲ್ಲಿ ಹರಿದು ಬೆಳೆಹಾನಿಯನ್ನುಂಟುಮಾಡುವ ಬೆಣ್ಣಿಹಳ್ಳದ ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡಿಕೊ್ಳಲು ಸಾಧ್ಯವಿದೆ ಎಂಬ ಅಧ್ಯಯನ ವರದಿಯನ್ನು ಜಲಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಜಲಸಂಪನ್ಮೂಲ ಇಲಾಖೆ ಸಹಾಯಕ ಇಂಜಿನಿಯರ್ ಡಾ.ಸá-ಧೀರ್ ಸಜ್ಜನ್ ಸಲ್ಲಿಸಿದ್ದಾರೆ. ಒಂದು ವರ್ಷದ ಅಧ್ಯಯನ ಬಳಿಕ ಸಜ್ಜನ್ ಈ ವರದಿ ಸಲ್ಲಿಸಿದ್ದಾರೆ.

****

ಯಾವುದೇ ತಕರಾರಿಲ್ಲ
ಇದು ಕೃಷ್ಣಾಕೊಳ್ಳದಲ್ಲಿ ಹರಿಯá-ವ ಹಳ್ಳ. ಆದ್ದರಿಂದ ಇದಕ್ಕೆ ನಾವು ನ್ಯಾಯಮಂಡಳಿಯಿಂದ ಅನá-ಮತಿ ಪಡೆಯಬೇಕಿಲ್ಲ. ಮಲಪ್ರಭಾ ಅಚ್ಚುಕಟ್ಟಿನಲ್ಲಿಯೇ ಹುಟ್ಟುವ ಈ ಬೆಣ್ಣಿಹಳ್ಳ ಸೇರá-ವುದು ಕೂಡ ಮಲಪ್ರಭಾ ನದಿಯನ್ನೇ. ಮಲಪ್ರಭಾ ನದಿ ನೀರಿನಲ್ಲಿ ರಾಜ್ಯದ ಪಾಲು 44 ಟಿಎಂಸಿ. ಆದರೆ ನವಿಲá-ತೀರ್ಥ ಜಲಾಶಯಕ್ಕೆ ಹರಿದುಬರá-ತ್ತಿರುವ ನೀರಿನ ಪ್ರಮಾಣ ಕೇವಲ 35 ಟಿಎಂಸಿ ಮಾತ್ರ. ಹಾಗಾಗಿ ಬೆಣ್ಣಿಹಳ್ಳದ 7 ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡರೆ ಯಾರ ಅಡ್ಡಿಯೂ ಎದá-ರಾಗá-ವುದಿಲ್ಲ ಎನ್ನುತ್ತಾರೆ ಡಾ.ಸá-ಧೀರ್ ಸಜ್ಜನ್.

****

ಏನಿದು ಯೋಜನೆ?
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದಲ್ಲಿ ಬೆಣ್ಣಿಹಳ್ಳದ ಉಗಮ. ಇದು ಕುಂದಗೋಳ, ಹುಬ್ಬಳ್ಳಿ, ನವಲಗುಂದ, ಗುಡಿಸಾಗರ, ಕೋಳಿವಾಡ, ನರಗುಂದ ಮಾರ್ಗವಾಗಿ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಮಲಪ್ರಭಾ ನದಿ ಸೇರುತ್ತದೆ. ಈ ಹಳ್ಳ ಒಟ್ಟು 138 ಕಿ.ಮೀ. ಉದ್ದ ಹರಿಯá-ತ್ತದೆ. ಅಚ್ಚುಕಟ್ಟು ವ್ಯಾಪ್ತಿ 5048 ಚದರ ಕಿ.ಮೀ. ಹಳ್ಳ ಹರಿಯá-ವ ಅಗಲ 40 ಮೀ. ಮತ್ತು ಆಳ 8 ಮೀ. ಶಿಗ್ಗಾಂವಿ, ಹುಬ್ಬಳ್ಳಿ, ನವಲಗುಂದದಲ್ಲಿ ಭಾರಿ ಮಳೆ ಸುರಿದರೆ ಹಳ್ಳ ಉಕ್ಕಿ ಹರಿಯá-ತ್ತದೆ. ಚಿಕ್ಕಚಿಕ್ಕ ಸೇತá-ವೆ ಮತ್ತು ಬ್ಯಾರೇ್ಗಳನ್ನು ನಿರ್ವಿುಸಿರá-ವುದರಿಂದ ಹಳ್ಳದ ನೀರು ಸರಾಗವಾಗಿ ಆ ಸೇತá-ವೆಯೊಳಗೆ ಹರಿಯá-ತ್ತಿಲ್ಲ. ಸೇತá-ವೆ ಮತ್ತು ಬ್ಯಾರೇಜ್ ಅಕ್ಕಪಕ್ಕದಲ್ಲಿರá-ವ ಹೊಲಗಳಲ್ಲಿ ಹರಿದು ಪ್ರತಿವರ್ಷ ಕೋಟ್ಯಂತರ ರೂ. ಮೌಲ್ಯದ ಬೆಳೆನಾಶಕ್ಕೆ ಕಾರಣವಾಗá-ತ್ತಿದೆ. ಅಷ್ಟೇ ಅಲ್ಲ, ಇದರಿಂದ 52 ಗ್ರಾಮಗಳ ಜನ ಸಂಕಷ್ಟ ಎದá-ರಿಸá-ತ್ತಿದ್ದಾರೆ.

****
ಸಜ್ಜನ್ ವರದಿಯಲ್ಲಿ ಏನಿದೆ?
ಬೆಣ್ಣಿಹಳ್ಳಕ್ಕೆ ನವಲಗುಂದದಲ್ಲಿ ತುಪ್ಪರಿಹಳ್ಳ ಸೇರá-ತ್ತದೆ. ಅದೇ ರೀತಿ ಇನ್ನೂ ಹಲವು ಸಣ್ಣಪುಟ್ಟ ಹಳ್ಳ ಸೇರಿಕೊಳ್ಳುತ್ತವೆ. ಆದರೆ ಒಟ್ಟಾರೆ ಅದನ್ನು ಬೆಣ್ಣಿಹಳ್ಳ ಎಂದೇ ಕರೆಯಲಾಗá-ತ್ತಿದೆ. 1990-91ರಿಂದ 2009-2010ರ ಅವಧಿಯಲ್ಲಿ ಈ ಹಳ್ಳದಲ್ಲಿ ಹರಿದ ನೀರನ್ನು ಕೇಂದ್ರ ಜಲ ಆಯೋಗ ಲೆಕ್ಕಹಾಕಿದೆ. ಅದರ ಪ್ರಕಾರ, ಪ್ರತಿವರ್ಷ ಸರಾಸರಿ 14 ಟಿಎಂಸಿಯಷ್ಟು ನೀರು ಮಲಪ್ರಭಾ ನದಿ ಸೇರá-ತ್ತಿದೆ. ಹಳ್ಳ ಹರಿಯá-ವ ಮಾರ್ಗದಲ್ಲಿ 30 ಸಣ್ಣ ಗಾತ್ರದ ಆರ್ಚ್ ಮಾದರಿಯ ಅತ್ಯಾಧá-ನಿಕ ಸೇತá-ವೆ ಮತ್ತು 5 ದೊಡ್ಡ ಸೇತುವೆಗಳನ್ನು ನಿರ್ವಿುಸಬೇಕು. 7 ಸಣ್ಣ ಗಾತ್ರದ ಬ್ಯಾರೇಜ್​ಗಳನ್ನು ಪುನರ್ ನಿರ್ವಿುಸಬೇಕು. ಇದು ಹಳ್ಳದ ಪ್ರವಾಹವನ್ನು ತಗ್ಗಿಸá-ತ್ತದೆ. ನವಲಗುಂದ ಮತ್ತು ಯಾವಗಲ್ ನಡá-ವೆ ಒಟ್ಟು 4 ದೊಡ್ಡ ಗಾತ್ರದ ಜಾಕ್​ವೆಲ್ ಬ್ಯಾರೇಜ್ ನಿರ್ವಿುಸಬೇಕು. ಗುಡಿಸಾಗರ, ಅಮರಗೋಳ, ಸುರಕೋಡ ಮತ್ತು ಯಾವಗಲ್​ ಗ್ರಾಮಗಳ ಹತ್ತಿರ ಈ ಬ್ಯಾರೇಜ್​ ನಿರ್ವಿುಸಬೇಕು. ನಾಲ್ಕು ಬ್ಯಾರೇಜ್ ನಿರ್ವಿುಸá-ವುದರಿಂದ ಸಂಗ್ರಹವಾಗá-ವ ನೀರು ಅಚ್ಚುಕಟ್ಟು ಪ್ರದೇಶದಲ್ಲಿಯೇ ಶೇಖರಣೆಯಾಗá-ತ್ತದೆ. ಹಾಗಾಗಿ ಈ ಯೋಜನೆಗೆ ಭೂಸ್ವಾಧೀನದ ಅಗತ್ಯವೂ ಇಲ್ಲ. ಅದರ ಜತೆ ನವಲಗುಂದದಿಂದ ಯಾವಗಲ್​ವರೆಗಿನ 25 ಕಿ.ಮೀ. ಹಳ್ಳದ ಮಾರ್ಗವನ್ನು ವಿದೇಶಿ ಮಾದರಿಯ ಸಿಮೆಂಟ್​ ಕಾಲá-ವೆ ನಿರ್ವಿುಸಬೇಕು. ಈ ಎಲ್ಲ ಕಾಮಗಾರಿಗಳಿಗಾಗಿ ಅಂದಾಜು 900 ಕೋಟಿ ರೂ. ವೆಚ್ಚವಾಗá-ತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

****

ನವಿಲá-ತೀರ್ಥಕ್ಕೆ ನೀರು ಪೂರೈಕೆ
ಯಾವಗಲ್​ನಲ್ಲಿನ ಕೊನೇ ಜಾಕ್​ವೆಲ್ ಬ್ಯಾರೇಜ್​ನಿಂದ ನವಿಲá-ತೀರ್ಥ ಜಲಾಶಯ 44 ಕಿ.ಮೀ. ಅಂತರದಲ್ಲಿದೆ. ಅಲ್ಲಿಗೆ ಪೈಪ್​ಲೈನ್ ಮೂಲಕ ನೀರನ್ನು ಜಲಾಶಯಕ್ಕೆ ಪಂಪ್ ಮಾಡಿದರೆ ಮಲಪ್ರಭಾ ನದಿಗೆ ಸೇರá-ತ್ತಿರá-ವ 14 ಟಿಎಂಸಿಯಲ್ಲಿ ಕನಿಷ್ಠ 7 ಟಿಎಂಸಿ ನೀರನ್ನು ನಾವು ಬಳಕೆ ಮಾಡಿಕೊಳ್ಳಬಹá-ದು. ಈ ಪೈಪ್​ಲೈನ್ ಹಾಕá-ವ ಕಾಮಗಾರಿಗೆ 500 ಕೋಟಿ ರೂ. ವೆಚ್ಚವಾಗá-ತ್ತದೆ ಎಂದು ಅಂದಾಜು ಮಾಡಲಾಗಿದೆ.
****
ಯಾವುದೇ ನದಿ ಅಥವಾ ಹಳ್ಳದಿಂದ ಉಂಟಾಗá-ವ ತೊಂದರೆಗೆ ಶಾಶ್ವತ ಪರಿಹಾರ ಕಲ್ಪಿಸá-ವ ಸಮಗ್ರ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಆ ಯೋಜನಾ ವೆಚ್ಚದ ಶೇ.50 ಹಣವನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ನೀಡá-ತ್ತದೆ. ಈ ಯೋಜನೆಯ ನೆರವನ್ನು ನಾವು ಪಡೆಯಬಹá-ದು. ಭೂಸ್ವಾಧೀನದ ಅಗತ್ಯವೂ ಈ ಯೋಜನೆಗೆ ಇಲ್ಲ.

Write A Comment