ಅಂತರಾಷ್ಟ್ರೀಯ

ಎತ್ತರ ಇದ್ದರೆ ಲಾಭ ನೂರು

Pinterest LinkedIn Tumblr

comparative-heightನಿಮ್ಮ ಹೈಟ್ ಕಂಡು ಎಲ್ಲರೂ ಹಂಗಿಸ್ತಾರಾ? ಚಿಂತೆ ಬಿಡಿ. ನಿಮ್ಮ ಎತ್ತರದಿಂದ ಆರೋಗ್ಯಕ್ಕೆ ಅನೇಕ ಲಾಭಗಳುಂಟು.

ಎತ್ತರವಿರುವ ಅನೇಕರಿಗೆ ಥೈರಾಯ್ಡ್, ಕಿಡ್ನಿ, ಗುದನಾಳದ ಕ್ಯಾನ್ಸರ್ ಬರುವುದಿಲ್ಲ ಎನ್ನುತ್ತದೆ ವೈದ್ಯಲೋಕ. ಇಷ್ಟೇ ಅಲ್ಲ, ಇಂಥವರಲ್ಲಿ 5.2 ಅಡಿ ಎತ್ತರವಿದ್ದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಕಡಿಮೆ. ರಕ್ತ ಬಲುದೂರದವರೆಗೆ ಪಂಪ್‍ಗೊಳ್ಳುವುದರಿಂದ ಈ ಲಾಭವಿದೆ. ಕುಳ್ಳಗಿದ್ದವರಿಗೆ ಆಯುಸ್ಸು ಜಾಸ್ತಿಯೇನೋ ಹೌದು.

ಆದರೆ, ನೀವು ಎತ್ತರವೂ ಇದ್ದು 90 ವರುಷಕ್ಕಿಂತ ಅಧಿಕ ಬದುಕಿದ್ದರೆ ನಿಮ್ಮ ಬಾಡಿ ಫಿಟ್ಟಾಗಿರುತ್ತದಂತೆ. ದೇಹದ ತೂಕ ತಡೆದುಕೊಳ್ಳುವ ಶಕ್ತಿಯಿಂದಾಗಿ ಬಳಲಿಕೆಯೇ ಇರೋದಿಲ್ಲ. ಇಂಥವರಲ್ಲಿ ಇನ್ಸುಲಿನ್ ಕೂಡ ಹೆಚ್ಚು ಉತ್ಪತ್ತಿಗೊಳ್ಳುವುದರಿಂದ ದಣಿವು ಕಾಡುವುದಿಲ್ಲ. ನಿಮ್ಮ ಹೃದಯ ತುಂಬಾ ಸೇಫಾಗಿರುತ್ತದೆ. ಎತ್ತರವಿರುವ ಬಹುತೇಕರಲ್ಲಿ ಮೆದುಳು ಆರೋಗ್ಯಕರವಾಗಿ ಕೆಲಸ ಮಾಡುತ್ತದೆ. ಶೇ.79ರಷ್ಟು ಎತ್ತರದ ಮಹಿಳೆಯರಿಗೆ ನಾರ್ಮಲ್ ಹೆರಿಗೆ ಆಗುತ್ತದೆ ಎನ್ನುತ್ತದೆ ನ್ಯೂಯಾರ್ಕಿನ ಅಲ್ಬರ್ಟ್ ಐನ್ ಸ್ಟೀನ್ ಯೂನಿವರ್ಸಿಟಿಯ ಸಂಶೋಧನೆ.

Write A Comment