ಮನೋರಂಜನೆ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ‘ಅತ್ಯುತ್ತಮ ಕಥಾ ಚಿತ್ರ’ ಪ್ರಶಸ್ತಿ ಬಾಚಿಕೊಂಡಿದ್ದ ಮರಾಠಿ ಚಿತ್ರ ಕೋರ್ಟ್​ಗೆ ಮಣಿದ ಬಾಹುಬಲಿ

Pinterest LinkedIn Tumblr

bahu-fiಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ‘ಅತ್ಯುತ್ತಮ ಕಥಾ ಚಿತ್ರ’ ಪ್ರಶಸ್ತಿ ಬಾಚಿಕೊಂಡಿದ್ದ ಮರಾಠಿಯ ‘ಕೋರ್ಟ್’ ಚಿತ್ರಕ್ಕೆ ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಿದೆ. ಚೈತನ್ಯ ತಮ್ಹಾನೆ ಚೊಚ್ಚಲ ನಿರ್ದೇಶನದ ಈ ಚಿತ್ರವೀಗ ಆಸ್ಕರ್ ಪ್ರಶಸ್ತಿಯ ರೇಸ್​ನಲ್ಲಿದೆ. 88ನೇ ಅಕಾಡೆಮಿ ಪ್ರಶಸ್ತಿಯ ‘ಉತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗದಲ್ಲಿ ‘ಕೋರ್ಟ್’ ಭಾರತದಿಂದ ನಾಮ ನಿರ್ದೇಶನಗೊಂಡಿದೆ.

ಹಿರಿಯ ನಟ, ನಿರ್ದೇಶಕ/ ನಿರ್ವಪಕ ಅಮೋಲ್ ಪಾಲೇಕರ್ ನೇತೃತ್ವದ ತೀರ್ಪಗಾರರ ತಂಡ ಈ ಆಯ್ಕೆ ಮಾಡಿದೆ. ಭಾರತದಿಂದ ಈ ಬಾರಿ ಆಸ್ಕರ್ ಅಂಗಳಕ್ಕೆ ಜಿಗಿಯಲು ಘಟಾನುಘಟಿ ಚಿತ್ರಗಳು ಪೈಪೋಟಿ ನಡೆಸಿದ್ದವು. ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದ ಎಸ್. ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’, ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಪಿಕೆ’, ಸಲ್ಮಾನ್ ಖಾನ್ ನಾಯಕತ್ವದ ‘ಬಜರಂಗಿ ಭಾಯಿಜಾನ್’, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ನಟನೆಯ ‘ಪಿಕು’, ತಮಿಳಿನ ‘ಕಾಕಮುಟೈ’ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಆದರೆ ಅವುಗಳನ್ನೆಲ್ಲ ಹಿಂದಿಕ್ಕಿರುವ ‘ಕೋರ್ಟ್’ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮರಾಠಿ, ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರ ಇದೇ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆಯಾಗಿತ್ತು. ಜಗತ್ತಿನ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು 18 ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿದೆ. ಆತ್ಮಹತ್ಯೆಗೆ

ಕುಮ್ಮಕ್ಕು ನೀಡಿದ ಆರೋಪದ ಮೇಲೆ ಜನಪದ ಹಾಡುಗಾರನೊಬ್ಬ ಎದುರಿಸುವ ನ್ಯಾಯಾಲಯದ ವಿಚಾರಣೆಯೇ ‘ಕೋರ್ಟ್’ ತಿರುಳು.

ಇದು ಸಂಪೂರ್ಣ ಹೊಸಬರ ಚಿತ್ರ.

ಹೊಸ ವಿಚಾರ ಅಂದರೆ, ಅಮೋಲ್ ಪಾಲೇಕರ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಆಯ್ಕೆ ಸಮಿತಿಯಲ್ಲಿದ್ದ ರಾಹುಲ್ ರವೈಲ್ ರಾಜೀನಾಮೆ ನೀಡಿದ್ದಾರೆ! ಆದರೆ ‘ಕೋರ್ಟ್’ ಆಯ್ಕೆಗೂ ರಾಜೀನಾಮೆಗೂ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದಾರೆ.

Write A Comment