ಕರ್ನಾಟಕ

ಸಿನೆಮಾ ತಾರೆಯರಿಮದ ಅರಿಶಿನ-ಕುಂಕುಮ ಪಡೆದ ಮಹಿಳಾ ಕಾನ್‌ಸ್ಟೆಬಲ್‌ಗಳು

Pinterest LinkedIn Tumblr

taraಬೆಂಗಳೂರು, ಸೆ.15-ಭಾನುವಾರ ಸೇರಿದಂತೆ ಹಬ್ಬ-ಹರಿದಿನಗಳು ಬಂದರೆ ಎಲ್ಲಾ ನೌಕರರಿಗೆ ಖುಷಿ ತರುತ್ತದೆ. ಆದರೆ ಕೆಲವರಿಗೆ ಇದ್ಯಾವುದೇ ಸಂಭ್ರಮವಿದ್ದರೂ ಅದನ್ನೆಲ್ಲಾ ಬಿಟ್ಟು ಕರ್ತವ್ಯಕ್ಕೆ ಹಾಜರಾಗಲೇ ಬೇಕಿರುತ್ತದೆ. ಇಂಥವರಲ್ಲಿ ಪೊಲೀಸರದ್ದು ಮೊದಲ ಸ್ಥಾನ. ಅವರು ಸೇವೆಯಲ್ಲಿಯೇ ಖುಷಿ ಕಾಣಬೇಕಿದೆ. ಹಬ್ಬದ ದಿನಗಳಲ್ಲಿ ಮನೆ ಮಂದಿಯನ್ನು ಬಿಟ್ಟು ಕರ್ತವ್ಯಕ್ಕೆ ಅವರು ಹಾಜರಾಗಲೇಬೇಕು. ಅದರಲ್ಲೂ ಗಣೇಶಹಬ್ಬದಂತಹ ಪ್ರಮುಖ ದಿನಗಳಲ್ಲಿ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶೇಷ ಕಾಳಜಿ ವಹಿಸಬೇಕು. ಇದಕ್ಕೆ ಮಹಿಳಾ ಕಾನ್‌ಸ್ಟೆಬಲ್‌ಗಳು ಹೊರತಲ್ಲ.

ಗೌರಿ ಹಬ್ಬ ಮಹಿಳೆಯರಿಗೆ ಅತ್ಯಂತ ವಿಶೇಷವಾಗಿದೆ. ಮನೆ ಮನೆಗೆ ತೆರಳಿ  ಅರಿಶಿನ-ಕುಂಕುಮ ಪಡೆಯುವುದು ವಾಡಿಕೆ. ಆದರೆ ಮಹಿಳಾ ಕಾನ್‌ಸ್ಟೆಬಲ್‌ಗಳು ಮಾತ್ರ ಕರ್ತವ್ಯದಲ್ಲೇ ಖುಷಿ ಕಂಡುಕೊಳ್ಳುತ್ತಾರೆ.
ಇಂತಹ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಹೋಳಿಗೆ ಹಂಚಿ,  ಅರಿಶಿನ ಕುಂಕುಮ ನೀಡಿ ಗೌರವ ತೋರುವಂತಹ ಅತ್ಯುತ್ತಮ ಕಾರ್ಯಕ್ರಮವೊಂದನ್ನು ಇಂದು ಹಮ್ಮಿಕೊಳ್ಳಲಾಯಿತು. ಇದರ ರೂವಾರಿ ವಿಧಾನಪರಿಷತ್ ಸದಸ್ಯೆ ಹಾಗೂ ನಟಿ ತಾರಾ ಅನುರಾಧ ಅವರು. ಇಂದು ಬೆಳಗ್ಗೆ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಗೆ ತೆರಳಿದ ತಾರಾ ಅನುರಾಧ ಈ ಕಾನ್‌ಸ್ಟೆಬಲ್‌ಗಳೊಂದಿಗೆ ಕೆಲ ಕಾಲ ತಂಗಿ ಕುಶೋಲಪರಿ ವಿಚಾರಿಸಿ ಗೌರಿ ಹಬ್ಬದ ಶುಭಾಶಯ ಕೋರಿ, ಹೋಳಿಗೆ ಹಂಚಿ, ಫಲ-ತಾಂಬೂಲ ಸಮರ್ಪಿಸಿ ಮನೆಯ ವಾತಾವರಣ ಉಂಟು ಮಾಡಿದ್ದುದು ವಿಶೇಷವಾಗಿತ್ತು.

Write A Comment