ರಾಷ್ಟ್ರೀಯ

ಗಣೇಶ ಚತುಥಿಱಯ ಕುರಿತು ಒಂದಿಷ್ಟು…

Pinterest LinkedIn Tumblr

ಗ಻ನ಻ಪ಻ಭಾರತೀಯ ಸಂಸ್ಕøತಿಯ ವಿಶಿಷ್ಟ  ಪರಂಪರೆಯಲ್ಲಿ ಹಬ್ಬಗಳಿಗೆ ಒಂದು ಮಹತ್ವದ ಸ್ಥಾನವಿದೆ. ದೇವರ ಪೂಜೆ, ಧಾರ್ಮಿಕ ಆಚರಣೆಗಳು ಸಂಸ್ಕøತಿಯ ನೆಲೆಗಟ್ಟುಗಳಾಗಿವೆ.   ನಾದಿಕಾಲದಿಂದಲೂ ಗಣಪನಿಗೆ ಮೊದಲ ಪೂಜೆ ಸಲ್ಲುತ್ತಿದೆ. ಅದರಂತೆ ಗಣಪನ ತಾಯಿ ಗೌರಿಗೂ ವ್ರತಾಚರಣೆ ಮೂಲಕ ಆರಾಧಿಸುವ ಪರಿಪಾಠ ಬೆಳೆದು ಬಂದಿದೆ. ಭಾರತದಾದ್ಯಂತ ಗೌರಿ-ಗಣೇಶ ಹಬ್ಬವನ್ನು ಆಯಾ ಪ್ರದೇಶದ ಸಂಸ್ಕøತಿ, ಆಚರಣೆಗೆ ತಕ್ಕಂತೆ ಆಚರಿಸುತ್ತಾರೆ. ತಾಯಿ ಗೌರಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಆಗಮಿಸುವ ಗಣಪ ವಿವಿಧ ಭಕ್ಷ್ಯ ಭೋಜ್ಯಗಳನ್ನು ಸವಿದು ತಾಯಿಯೊಂದಿಗೆ ಹಿಂತಿರುಗುತ್ತಾನೆ.

ಮೊದಲ ತಾಯಿ ಸ್ವರ್ಣಗೌರಿ ಹಬ್ಬ, ಮಾರನೆ ದಿನವೇ ಗಣೇಶನ ಹಬ್ಬ. ಭಾದ್ರಪದ ತದಿಗೆಯಂದು ಗೌರಿಯನ್ನು ಆರಾಧಿಸಿದರೆ ಚೌತಿಯಂದು ಗಣಪನನ್ನು ಪೂಜಿಸಲಾಗುತ್ತದೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ಹಬ್ಬವಾಗಿ ವಾರಗಟ್ಟಲೆ ಆಚರಿಸಿ ಸಂಭ್ರಮ ಹಾಗೂ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಗೌರಿ ಹಬ್ಬದ ಒಂದು ದಿನಕ್ಕೆ ಮೊದಲು ಗೌರಿಯ ಮೂರ್ತಿಯನ್ನು ತರುವುದರಿಂದ ಈ ಸಮಯದಲ್ಲಿ ಗೌರಿ ತಂದೆ ಮನೆಗೆ ಬರುತ್ತಾಳೆ ಎಂದೇ ನಂಬಲಾಗಿದೆ.

ಗೌರಿ ಹಬ್ಬದ ದಿನ ಮಣ್ಣಿನ ಅಥವಾ ಅರಿಶಿನದಿಂದ ಗೌರಿಯನ್ನು ಮಾಡಿ ತಟ್ಟೆಯಲ್ಲಿ ಹಾಕಿದ ಅಕ್ಕಿಯ ಮೇಲೆ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಸಂಪೂರ್ಣ ಸ್ವಚ್ಛತೆ ಹಾಗೂ ಭಕ್ತಿಯಿಂದ ನೆರವೇರುವ ಪೂಜೆಗೂ ಮುನ್ನ ಮೂರ್ತಿಯ ಸುತ್ತಲೂ ಬಾಳೆಗಿಡ ಮತ್ತು ಮಾವಿನ ಎಲೆಗಳನ್ನು ಕಟ್ಟಿ ಮಂಟಪ ರಚಿಸಲಾಗುತ್ತದೆ. ಈ ಮಂಟಪಕ್ಕೆ ಹೂವಿನಿಂದ ಅಲಂಕರಿಸಲಾಗುತ್ತದೆ. ವ್ರತದ ಅಂಗವಾಗಿ ಬಾಗೀನ ತಯಾರಿಸಿ ಬಾಗೀನದಲ್ಲಿ ಅರಿಶಿನ, ಕಪ್ಪು ಬಳೆ, ಕರಿಮಣಿ, ಬಾಚಣಿಗೆ, ಸಣ್ಣಕನ್ನಡಿ, ತೆಂಗಿನ ಕಾಯಿ ಧಾನ್ಯಗಳು, ಅಕ್ಕಿ, ಗೋಧಿ ಹಾಗೂ ಬೆಲ್ಲವನ್ನು ಇಟ್ಟು ಸುಮಾರು ಐದು ಬಾಗೀನಗಳನ್ನು ಮಾಡಿಕೊಂಡು ಒಂದನ್ನು ದೇವರಿಗೆ ಸಮರ್ಪಿಸಲಾಗುತ್ತದೆ.

ಉಳಿದವುಗಳನ್ನು ಪೂಜಿಸಿ ಮುತ್ತೈದೆಯರಿಗೆ ನೀಡುವುದು ಸಂಪ್ರದಾಯ. ಗೌರಿ ಪೂಜೆಯ ನೈವೇದ್ಯಕ್ಕೆ ಹೋಳಿಗೆ, ಪಾಯಸ ಮಾಡುವುದು ಪ್ರತೀತಿ. ನಂತರದ ದಿನ ಆಚರಿಸುವ ಗಣೇಶನ ಹಬ್ಬದಂದು ಗಣೇಶ ಮೂರ್ತಿಯನ್ನು ತಂದು ಪೂಜಿಸುತ್ತಾರೆ. ಇದರಲ್ಲಿ ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪನನ್ನು ವ್ರತ ಆಚರಿಸಲಾಗುತ್ತದೆ. ಗಣಪತಿಗೆ ಪ್ರಿಯವಾದ ಮೋದಕ, ಕಡುಬು, ಚಕ್ಕುಲಿ ಇನ್ನಿತರ ತಿಂಡಿಗಳಿಂದ ನೈವೇದ್ಯ ಮಾಡಲಾಗುತ್ತದೆ. ಗೌರಿ ಶಕ್ತಿಯ ದೇವತೆಯಾಗಿರುವ ಆದಿಶಕ್ತಿಯ ಅವತಾರವೆಂದು ನಂಬಲಾಗಿದೆ. ನಂಬಿಕೆ ಮತ್ತು ಭಕ್ತಿಯಿಂದ ಆರಾಧಿಸುವ ಭಕ್ತರಿಗೆ ಧೈರ್ಯ ಮತ್ತು ಅಗಾಧ ಶಕ್ತಿಯನ್ನು ಆಕೆ ಕರುಣಿಸುತ್ತಾಳೆ. ಆಕೆಯ ಆಶೀರ್ವಾದ ಪಡೆಯಲು ಸ್ವರ್ಣಗೌರಿ ವ್ರತ ಆಚರಿಸಲಾಗುತ್ತದೆ.

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ  ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು.
ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ.

ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ  ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು  ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನವಿನಾಶಕ ವಿನಾಯಕನಾಗಿರುವನು.

ನಮ್ಮ ದೇಶದಲ್ಲಿ ಗಣಪತಿಯ ಪೂಜೆ ಅನಾದಿಕಾಲದಿಂದಲೂ ನಡೆದುಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನರು ಆನೆಯ ಮುಖವುಳ್ಳ ದೇಹವನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ  ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ.

ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ,ಸುಮಾತ್ರಾ, ಜಾವಾ, ಜಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾ ವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತು ದಿನಗಳವರೆಗೆ ನಿತ್ಯ ಪೂಜೆಯನ್ನು ಮಾಡಿ 10ನೆ ದಿನ ಅಂದರ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು. ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

ಏಕದಂತಾಯ ವಿದ್ಮಹೇ  ವಕ್ರತುಂಡಾಯ ಧೀಮಹಿ ತನ್ನೋ ದಂತಿಃ  ಪ್ರಚೋದಯಾತ್||

ಡಾಂಭೀಕ ಭಕ್ತಿಗೆ ಬದಲಾಗುತ್ತಿದೆಯೇ ಗಣೇಶನ ರೂಪ
ಮಹಾರಾಷ್ತ್ರ, ಕರ್ನಾಟಕ, ಆಂಧ್ರ, ಉತ್ತರ ಭಾರತದ ಹಲವಡೆ ಗಣಪನ ಹಬ್ಬಕ್ಕೆ ತನ್ನದೇ ಆದ ಮಹತ್ವ ಇದೆ. ನೇಪಾಳ, ಥೈಲ್ಯಾಂಡ್, ಬರ್ಮ ದೇಶಗಳಲ್ಲಿ ಗಣೇಶನ ಮಂದಿರಗಳಿವೆ. ಗಣೇಶನಿಗೆ ಸಹಸ್ತ್ರ ನಾಮಗಳು ಇವೆ. ಮುಖ್ಯವಾಗಿ ವಿನಾಯಕ, ವಿಘ್ನರಾಜ, ಏಕದಂತ, ಗಣಾಧೀಶ, ಹೇರಂಭ, ಲಂಬೋದರ, ಗಜಾನನ. ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ.

ಬದಲಾಗುತ್ತಿರುವ ಈ ವಿದ್ಯುನ್ಮಾನ ಯುಗದಲ್ಲಿ  ಒಂದು ಕಡೆ ಭಕ್ತಿ ಹೆಚ್ಚಾಗುತ್ತಿದ್ದು, ಇನ್ನೊಂದೆಡೆÉ ಡಾಂಭಿಕ ಭಕ್ತಿಯಿಂದ  ಗಣೇಶನ  ರೂಪವು ಬದಲಾಗುತ್ತಿದೆ. ಚಲನಚಿತ್ರ ನಟಗಳ ರೂಪ, ರಾಜಕೀಯ ಪುಢಾರಿಗಳ ರೂಪ, ಒಬಾಮ ಗಣಪತಿ, ರಾಮದೇವ, ಹಜಾರೆ ರೂಪದಲ್ಲಿ ಗಣಪತಿಗಳನ್ನು ಕಾಣಬಹುದು. ಅಶ್ಲೀಲ ಹಾಡುಗಳು ಎಲ್ಲೆಡೆ ಕೇಳಿಬರುತ್ತಿವೆ. ಸಾಮರಸ್ಯ, ಏಕತೆ, ಸಂಘಟನೆಯ ಉದ್ದೇಶದಿಂದ ಲೋಕಮಾನ್ಯ ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ಇಂದು ವಿಚಿತ್ರ ರೂಪ ತಾಳಿದೆ.

ಗಣಪನ ಸ್ಥಾಪನೆ-ವಿಸರ್ಜನೆಯ ಸಮಯದಲ್ಲಿ ಅನೇಕ ಪ್ರಕಾರದ ಘರ್ಷಣೆ, ಗಲಾಟೆ, ಹಿಂಸೆಯು ನಡೆಯತ್ತಿದೆ. ಇದಕ್ಕೆ  ವಿಚಾರವಂತರು, ಬುದ್ಧಿವಾದಿಗಳು, ಚಿಂತಕರು, ಎಲ್ಲರೂ ಸೇರಿದರೆ ಕಡಿವಾಣ ಹಾಕಬಹುದು. ವಾಸ್ತವವಾಗಿ ಗಣಪತಿಯ ಹಬ್ಬವು ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು. ಗಣಪತಿ ಎಂದರೆ ಗಣಗಳ ಅಥಾವಾ ಸಮೂಹಗಳ ಅಧಿಪತಿ, ವಿಶ್ವದ ಎಲ್ಲಾ ಮಾನವ ಸಮಾಜಕ್ಕೆ ಒಡೆಯ. ಸರ್ವಗುಣಮೂರ್ತಿ, ಸರ್ವವಿದ್ಯೆಗಳಲ್ಲಿ ಪಾರಂಗತನಾದ ಗಣೇಶನಿಗೆ ಏಕದಂತ, ಮಂಗಳಮೂರ್ತಿ,  ಲಂಬೋದರನೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮಿಸುವವನು ಎಂದರ್ಥ.

ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ. ಕಂಪ್ಯೂಟರ್‍ನಲ್ಲಿ ಹೇಗೆ ಮೌಸ್‍ನಿಂದ ಯಾವುದೇ ಕೆಲಸ ಮಾಡಬಹುದೋ ಹಾಗೆಯೇ ಇಲಿಯ ಮೇಲಿನ ಸವಾರಿಯು ಮನಸ್ಸು ಬುದ್ಧಿಯ ಮೇಲೆ ನಿಯಂತ್ರಣ ಹೊಂದುವ ಸಂಕೇತವಾಗಿದೆ. ಗಜಮುಖ ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ.  ಮೋದಕಪ್ರಿಯನೆÉಂದರೆ ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ. ಗಣೇಶನ ಮೂರ್ತಿ ಮಾಡಿ ಪೂಜಿಸಿ ಮತ್ತೆ ವಿಸರ್ಜಿಸುವ ಅರ್ಥ  ಮಾನವನ ಶರೀರವು ಪಂಚತತ್ವಗಳಿಂದ ತಯಾರಾಗಿದೆ. ಅದು ಮತ್ತೆ ಪ್ರಕೃತಿಯಲ್ಲಿ ಲೀನವಾಗುತ್ತದೆ ಎಂಬುದೇ ಆಗಿದೆ.
-ವಿಶ್ವಾಸ. ಸೋಹೋನಿ. (ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್)

Write A Comment