ರಾಷ್ಟ್ರೀಯ

ತೆಲಂಗಾಣದ ಅರಣ್ಯ ಪ್ರದೇಶದಲ್ಲಿ ಮಹಿಳೆ ಸೇರಿ ಕೆಂಪು ಉಗ್ರರಿಬ್ಬರ ಹತ್ಯೆ

Pinterest LinkedIn Tumblr

naxalಹೈದ್ರಾಬಾದ್, ಸೆ.15- ತೆಲಂಗಾಣದ ವಾರಂಗಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಮಾವೋವಾದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ತಡವಾಯಿ ಮಂಡಲ್‌ಗೆ ಸೇರಿದ ಪಸಾರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಲಗಡ್ಡ ಸಮೀಪ ಕರೀಂನಗರ-ಖಮ್ಮಂ-ವಾರಂಗಲ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಕೆಂಪು ಉಗ್ರರು ಹತರಾಗಿದ್ದಾರೆ.

ಸ್ಥಳದಲ್ಲಿದ್ದ ಒಂದು ಕಾರ್ಬೈನ್, ಒಂದು 303 ಬಂದೂಕು ಹಾಗೂ 6 ಕಿಟ್‌ಬ್ಯಾಗ್‌ಗಳನ್ನು ಶಪಡಿಸಿಕೊಳ್ಳಲಾಗಿದೆ. ಪೊಲೀಸರಲ್ಲಿ ಯಾರಿಗೂ ಏಟುಗಳಾಗಿಲ್ಲ. ಇನ್ನೂ ಕೂಡ ಪೊಲೀಸರು ಕಾರ್ಯಾಚರಣೆ, ಶೋಧ ಮುಂದುವರೆಸಿದ್ದಾರೆ.

Write A Comment