ಬೆಂಗಳೂರು,ಸೆ.14: ಅಂಜನಾಪುರ ಬಳಿ ನಿನ್ನೆ ರಾತ್ರಿ ದರೋಡೆಗೆ ಯತ್ನಿಸಿದ ಮೂವರು ಖದೀಮರಲ್ಲಿ ಓರ್ವ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿದ್ದಾನೆ.
ಅಂಜನಾಪುರದ ರೀಕ್ರಿಯೇಷನ್ ಕ್ಲಬ್ಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಕ್ಲಬ್ನಿಂದ ಹೊರ ಬರುತ್ತಿದ್ದ ಓರ್ವನನ್ನು ದೋಚಲು ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಮೂವರು ದರೋಡೆಕೋರರಲ್ಲಿ ಒಬ್ಬನನ್ನು ಹಿಡಿದು ಥಳಿಸಿ ಪೋಲೀಸರ ವಶಕ್ಕೆ ನೀಡಿದ್ದಾರೆ.
ರಂಜನ್ ಎಂಬಾತನೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳನಾಗಿದ್ದಾನೆ, ರಾತ್ರಿ ಸುಮಾರು 10ಗಂಟೆ ವೇಳೆಗೆ ರಂಜನ್ ಮತ್ತು ಆತನ ಇಬ್ಬರು ಸಹಚರರು ಸುಬ್ರಹ್ಮಣ್ಯಪುರದ ಅಂಜನಾಪುರ ರಸ್ತೆಯಲ್ಲಿರುವ ರೀಕ್ರಿಯೇಷನ್ ಕ್ಲಬ್ಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದಾರೆ. ಈ ವೇಳೆ ಕ್ಲಬ್ನಲ್ಲಿದ್ದ ಯುವಕರು ದರೋಡೆಕೋರರನ್ನು ಎದುರಿಸಿದ್ದಾರೆ. ಗಲಾಟೆಗೆ ಹೆದರಿದ ದರೋಡೆಕೋರರು ಕ್ಲಬ್ನಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಕ್ಲಬ್ನಲ್ಲಿದ್ದವರು ಹಾಗೂ ಸಾರ್ವಜನಿಕರು ರಂಜನ್ ಎಂಬಾತನನ್ನು ಹಿಡಿದು ಮನಬಂದಂತೆ ಥಳಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಉಳಿದಿಬ್ಬರು ಪರಾರಿಯಾಗಿದ್ದಾರೆ. ಮೂವರ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ದರೋಡೆ, ಸುಲಿಗೆ ಮತ್ತು ಕಳ್ಳತನ ಪ್ರಕರಣಗಳು ದಾಖಲಾಗಿವೆ
ಬಂಧನಕ್ಕೊಳಗಾಗಿರುವ ರಂಜನ್ ಕೂಡಾ ದರೋಡೆ ಪ್ರಕರಣದಲ್ಲಿ 2 ಬಾರಿ ಜೈಲು ಸೇರಿ ಬಂದಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ಮತ್ತೆ ಹಳೆ ಚಾಳಿ ಮುಂದುವರೆಸಿದ್ದ.ಪ್ರಕರಣ ದಾಖಲಿಸಿರುವ ಸುಬ್ರಮಣ್ಯಪುರ ಪೋಲೀಸರು ಉಳಿದ ಇಬ್ಬರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
