ಕರ್ನಾಟಕ

ಐಷಾರಾಮಿ ಜೀವನ ನಡೆಸಲು ವಾಹನ ಕಳವು ಮಾಡುತ್ತಿದ್ದ ಭಾವ ಭಾಮೈದನ ಬಂಧನ

Pinterest LinkedIn Tumblr

arrest

ಬೆಂಗಳೂರು,ಸೆ.9: ಐಷಾರಾಮಿ ಜೀವನ ನಡೆಸಲು ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಚಾಲಕರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 12 ಲಕ್ಷ ಮೌಲ್ಯದ 3 ಟಾಟಾ ಸುಮೋ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊಸಕೋಟೆಯ ತಗ್ಲಿ ಹೊಸಹಳ್ಳಿ ಮುನಿರಾಜು(30) ಹಾಗೂ ಆತನ ಭಾವ ಗುಟ್ಟಹಳ್ಳಿಯ ಸುಧಾಕರ(28) ಬಂಧಿತ ಆರೋಪಿಗಳಾಗಿದ್ದಾರೆ, ಟ್ರಾಕ್ಟರ್ ಚಾಲಕನಾಗಿದ್ದ ಮುನಿರಾಜು ತನ್ನ ಪತ್ನಿಯ ಅಣ್ಣ ಸುಧಾಕರ ನೊಂದಿಗೆ ಸೇರಿ ಮಾಲೂರು ಹೊಸಕೋಟೆಗಳಲ್ಲಿ ಟಾಟಾ ಸುಮೋಗಳನ್ನು ಕಳವು ಮಾಡಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು.

ಉಪ್ಪಾರಪೇಟೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ಬಂದ ಟಾಟಾ ಸುಮೋ ಪರಿಶೀಲನೆ ನಡೆಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ,ಇವರಿಬ್ಬರ ಬಂಧನದಿಂದ ಮಾಲೂರು,ಹೊಸಕೋಟೆ ಪೊಲೀಸ್ ಠಾಣೆಯ ತಲಾ ಒಂದೊಂದು ವಾಹನ ಕಳವು ಪ್ರಕರಣವನ್ನು ಪತ್ತೆಯಾಗಿವೆ ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.

ವಜ್ರದ ಹರಳು ಕಳ್ಳನ ಬಂಧನ

ಬೆಂಗಳೂರು; ಗಾಂಧಿನಗರದ ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ನಲ್ಲಿ ವಜ್ರದ ಹರಳುಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 5ಲಕ್ಷ ಮೌಲ್ಯದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಸರುಘಟ್ಟದ ಶ್ರೀಕಾಂತ್(32) ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಆ.12ರಂದು ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ಗೆ ಬಂದ ಆರೋಪಿಯು ವಜ್ರಾಭರಣಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು ನೋಡುತ್ತಾ ಅಂಗಡಿಯವರ ಕಣ್ತಪ್ಪಿಸಿ 4.70ಕ್ಯಾರೆಟ್ ವಜ್ರದ ಹರಳುಗಳನ್ನು ಕಳವುಮಾಡಿ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳವು ಕೃತ್ಯವನ್ನು ಅವಲೋಕಿಸಿ ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.

Write A Comment