ಅಂತರಾಷ್ಟ್ರೀಯ

ಭಾರತೀಯ 7 ಮಂದಿ ನಾಪತ್ತೆ: 20 ಮಂದಿ ಸತ್ತಿಲ್ಲ ಯೆಮೆನ್ ಸ್ಪಷ್ಟನೆ

Pinterest LinkedIn Tumblr

Mideast Yemen_Kand

ನವದೆಹಲಿ, ಸೆ.9: ಯೆಮೆನ್‌ನ ಹೊಡೆಹಾದ್ ಬಂದರಿನಲ್ಲಿ ಸೌದಿ ಅರೇಬಿಯಾ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯುದಾಳಿಗೆ ಸಿಕ್ಕು ಎರಡು ದೋಣಿಗಳಲ್ಲಿದ್ದ ಭಾರತೀಯ ಸಿಬ್ಬಂದಿಯಲ್ಲಿ ಕನಿಷ್ಠ 7 ಮಂದಿ ನಾಪತ್ತೆಯಾಗಿದ್ದು, ಉಳಿದ 13 ಮಂದಿ ಜೀವಂತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಈ ದಾಳಿಯಲ್ಲಿ 20 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ಅಲ್ಲಗೆಳೆದಿರುವ ವಿದೇಶಾಂಗ ಇಲಾಖೆ. 20 ಮಂದಿ ಭಾರತೀಯರು ಇದ್ದ ದೋಣಿ ವಾಯು ದಾಳಿಗೆ ತುತ್ತಾಗಿದೆ. ಅದರಲ್ಲಿದ್ದ 20 ಮಂದಿಯಲ್ಲಿ 7 ಮಂದಿ ನಾಪತ್ತೆಯಾಗಿದ್ದಾರೆ. 13 ಮಂದಿ ಜೀವಂತವಾಗಿದ್ದಾರೆ ಎಂದು ನಿನ್ನೆಯ ಘಟನೆಯ ಕುರಿತಂತೆ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.

ಯೆಮೆನ್‌ನಲ್ಲಿ ನಡೆಯುತ್ತಿರುವ ಹೊಡೆಹಾದ್ ಬಂಡುಕೋರರ ವಿರುದ್ಧ ಸೌದಿ ಅರೇಬಿಯಾ ನೇತೃತ್ವದಲ್ಲಿ ಗಲ್ಫ್ ರಾಷ್ಟ್ರಗಳ ಮೈತ್ರಿಕೂಟ ಸತತವಾಗಿ ವಾಯುದಾಳಿ ನಡೆಸುತ್ತಿದೆ.

ಸದ್ಯಕ್ಕೆ ಯೆಮೆನ್‌ನಲ್ಲಿ ಭಾರತೀಯ ದೂತಾವಾಸ ಇಲ್ಲ. ಅಲ್ಲಿಯ ಹಿಂಸಾಗ್ರಸ್ತ ಸ್ಥಿತಿಗೆ ಸಿಕ್ಕಿದ್ದ ಭಾರತೀಯರನ್ನು ಏಪ್ರಿಲ್‌ನಲ್ಲಿ ಅಲ್ಲಿಂದ ಸ್ಥಳಾಂತರಿಸಿದ ನಂತರದಲ್ಲಿ ಅಲ್ಲಿ ದೂತವಾಸವನ್ನು ಮುಚ್ಚಲಾಗಿದೆ.

Write A Comment