ಗೌರಿಬಿದನೂರು, ಆ.10-ಓಮಿನಿ ಮತ್ತು ಸ್ವಿಫ್ಟ್ ಕಾರುಗಳ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿ ಕೇಂದ್ರದ ಹೆಚ್.ಪಿ ಪೆಟ್ರೋಂಲ್ ಬಂಕ್ ಮುಂದೆ ತಿರುವಿನಲ್ಲಿ ಜರುಗಿದೆ.ಮಧುಗಿರಿ ವಾಸಿ ಇಲಿಯಾಜ್(65), ಸೀಮಾಂಧ್ರ ಹಿಂದೂಪುರ ವಾಸಿ ಮುನಾವರ್ (67) ಮೃತಪಟ್ಟ ವಕ್ತಿಗಳು.
ಪರ್‌ಜಾನ್(30), ಇಬ್ರಾಹಿಂಮದನಿ(25), ಯೂನಸ್ (30) ಆಬಿದಾ(25), ರಿಯಾಜ್ (55), ಸಲ್ಮಾ (45) ಓಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂಪುರದ ವಾಸಿಗಳು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಸ್ವಿಫ್ಟ್ ಕಾರಿನಲ್ಲಿದ್ದ, ಕೋಲಾರದ ವಾಸಿಗಳಾದ ಶ್ಯಾಮಲ(46), ಜಿ.ವೆಂಕಟರಾಮ್(30), ಕಿಶೋರ್‌ಕುಮಾರ್(28) , ನೇತ್ರಾ (25), ಜಯಮ್ಮ (50) ಗಂಬೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ,ಸಮಯಕ್ಕೆ ಬಾರದ 108: ಮಧ್ಯಾಹ್ನ 12-30 ರ ಸಮಯದಲ್ಲಿ ಆಪಘಾತ ಸಂಭವಿಸಿದ್ದು, ತಕ್ಷಣವೇ ಅಲ್ಲಿದ್ದವರು 108 ವಾಹನಕ್ಕೆ ಕರೆ ಮಾಡಿದರೂ ಸಹ ಕರೆಗಳನ್ನು ಸ್ವೀಕರಿಸಲಿಲ್ಲ,
ಮಾರ್ಗದಲ್ಲಿ ಬರುತ್ತಿದ್ದ ವಾಹನದಲ್ಲೇ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು, 50 ಕರೆಗಳು: ಘಟನೆ ನಡೆದ ಸಂದರ್ಭದಲ್ಲಿ ಹಿಂಬದಿಯ ವಾಹನದಲ್ಲಿ ಬರುತ್ತಿದ್ದ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಕಾರ್ಮಿಕ ಸಮಿತಿ ಜಿಲ್ಲಾಧ್ಯಕ್ಷ ಖಾದರ್ ಸುಭಾನ್‌ಖಾನ್ 108 ಗೆ 50 ಬಾರಿ ಮೊಬೈಲ್ ಮೂಲಕ ಕರೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.ನಂತರ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. 108 ವಾಹನ ಸಿಬ್ಬಂದಿಯ ನಿರ್ಲಕ್ಷ ತನದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಆರೋಪಿಸಿ, ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ, ಇಲ್ಲಿನ 108 ಸಿಬ್ಬಂದಿಯ ನಿರ್ಲಕ್ಷ ತನದಿಂದ ಅದೆಷ್ಟೋ ಮಂದಿ ಅಪಘಾತಗಳಾದ ವ್ಯಕ್ತಿಗಳು ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ನಿದರ್ಶನಗಳಿದೆ ಎಂದು ಖಾದರ್ ಸುಬಾನ್ ಖಾನ್ ವೈದ್ಯಾಧಿಕಾರಿಗಳ ವಿರುದ್ದ ಕಿಡಿಕಾರಿದರು.ಸ್ಥಳಕ್ಕೆ ವೃತ್ತನಿರೀಕ್ಷಕ ಕೆ.ನಾಗರಾಜ್, ಮಂಚೇನಹಳ್ಳಿ ಎಸ್‌ಐ ಸುಂದರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.