ಮುಳಬಾಗಿಲು, ಆ.9: ಖಾಸಗಿ ಹಾಲಿನ ಲಾರಿಗೆ ಹಿಂಬದಿಯಿಂದ ಜೈಲೋ ಕಾರು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ನರಸಿಂಹ ತೀರ್ಥ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವೈಷ್ಣವಿ (28) ಸ್ಥಳದಲ್ಲೇ ಮೃತಪಟ್ಟಿದ್ದು, ಚಿಕಿತ್ಸೆಗೆ ಸಾಗಿಸುವ ವೇಳೆ ಮಂಗಳ ಜ್ಯೋತಿ (56), ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಬೃಂದಾ (58) ಮೃತಪಟ್ಟ ದುರ್ದೈವಿಗಳು.
ಬೆಂಗಳೂರಿನ ನಾಗರಬಾವಿಯ ಒಂದೇ ಕುಟುಂಬದವರು ಮಹೇಂದ್ರ ಜೈಲೋ ಕಾರಿನಲ್ಲಿ ಆಂಧ್ರದ ಕಡೆಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಆಂಧ್ರದಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಹಾಲಿನ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.ಕಾರು ಚಾಲಕ ಹರೀಶ್, ಶ್ರೀನಾಥ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಈ ಭಾಗದಲ್ಲಿ ಟ್ರ್ಯಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಎನ್.ರಾಮರೆಡ್ಡಿ, ಸಬ್‌ಇನ್ಸ್‌ಪೆಕ್ಟರ್ ಎಂ.ಶಂಕರಪ್ಪ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡರು.