ನವದೆಹಲಿ, ಆ.9: ವಾರಣಾಸಿ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬ ಇಲ್ಲಿನ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದು ಉತ್ತೀರ್ಣನಾಗಿದ್ದಾನೆ.ಕೊಲೆ ಆರೋಪವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ 23 ವರ್ಷದ ಅಜೀತ್‌ಕುಮಾರ್ ಸರೋಜ್ ಟೂರಿಸಂ ಸ್ಟಡೀಸ್‌ನ ಡಿಪ್ಲೊಮಾ ಪದವೀಧರ.
ಐಎನ್‌ಜಿಎನ್‌ಒಯು ವ್ಯಾಪ್ತಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಚಿನ್ನದ ಪದಕಕ್ಕೆ ಭಾಜನವಾಗಿರುವ ಅಜೀತ್‌ನನ್ನು ನಿನ್ನೆ ನಡೆದ 28ನೆ ಘಟಿಕೋತ್ಸವಕ್ಕೆ ಪೊಲೀಸರು ಬಿಗಿ ಕಾವಲಿನಲ್ಲಿ ಕರೆದೊಯ್ದಿದ್ದರು.
ಡಾ.ರಾಮಮನೋಹರ ಲೋಹಿಯಾ ಅವಧ್ ವಿವಿಯ ಕುಲಪತಿ ಜಿ.ಸಿ.ಜೈಸ್ವಾಲ್ ಅಜೀತ್‌ಗೆ ಚಿನ್ನದ ಪದಕ ಸಹಿತ ಪದವಿ ನೀಡಿದರು.ಜೈಲಿನಲ್ಲಿದ್ದುಕೊಂಡೇ ಇವರ ನಾಲ್ಕು ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಮಾಡಿರುವ ಅಜೀತ್ ಯೂನಿವರ್ಸಿಟಿಯಿಂದ ಬಿಕಾಂ ಪದವಿಯನ್ನೂ ಗಳಿಸಿದ್ದಾನೆ.
ನಾಲ್ಕು ಸರ್ಟಿಫಿಕೆಟ್ ಕೋರ್ಸ್‌ಗಳಲ್ಲಿ ಶೇ.65ರಷ್ಟು ಅಂಕ ಪಡೆದು ಅಚ್ಚರಿ ಮೂಡಿಸಿದ್ದಾನೆ.ಐಎನ್‌ಜಿಒಯು ವ್ಯಾಪ್ತಿಯ 20 ಜಿಲ್ಲೆಗಳ ಒಟ್ಟು 6 ಸಾವಿರ ವಿದ್ಯಾರ್ಥಿಗಳ ಪೈಕಿ ಚಿನ್ನದ ಪದಕ ಪಡೆದ ಏಕೈಕ ವಿದ್ಯಾರ್ಥಿ ಈ ಜೈಲು ಹಕ್ಕಿ ಅಜೀತ್ ಎಂದು ನಿರ್ದೇಶಕ ಎ.ಎನ್.ತ್ರಿಪಾಠಿ ಹರ್ಷ ವ್ಯಕ್ತಪಡಿಸಿದ್ದಾರೆ.ದೇಶಾದ್ಯಂತ ಕಾರಾಗೃಹಗಳಲ್ಲಿ 94 ಅಧ್ಯಯನ ಕೇಂದ್ರಗಳನ್ನು ಇಂದಿರಾಗಾಂಧಿ ಮುಕ್ತ ವಿವಿಯಿಂದ ಒಟ್ಟು 25 ಸಾವಿರ ಜನ ಕೈದಿಗಳು ಲಾಭ ಪಡೆಯುತ್ತಿದ್ದಾರೆ ಎಂದು ತ್ರಿಪಾಠಿ ತಿಳಿಸಿದ್ದಾರೆ.