ಬೆಂಗಳೂರು.ಆ-7- ಲೋಕಾಯುಕ್ತ ಬ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ.ಬಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರಿಗೆ ವಿಶೇಷ ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಐಟಿ ವಶದಲ್ಲಿದ್ದ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜುರುಪಡಿಸಲಾಯಿತು,ಜಾಮೀನು ನೀಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿ ಇದರ ವಿಚಾರಣೆಯನ್ನು ಆ-10 ಕ್ಕೆ ಮುಂದೂಡಲಾಯಿತು.ಇದೇ ವೇಳೆ ಎಸ್ಐಟಿ ಅಧಿಕಾರಿಗಳ ಆಕ್ಷೇಪ ಆಲಿಸಿದ ನಂತೆರ ಅಶ್ವಿನ್ ಅವರನ್ನುನ್ಯಾಯಾಂಗ ಬಂದನಕ್ಕೆ ನೀಡಲಾಯಿತು.
ಇದಲ್ಲದೆ ವಿಶೇಷ ಸೌಲಭ್ಯ ಮನವಿಯನ್ನು ತಿರಸ್ಕರಿಸಿ ಇದನ್ನು ಕಾರಾಗೃಹ ಅಧಿಕಾರಿಗಳ ವಿವೇಚನಕ್ಕೆ ಬಿಡಲಾಯಿತು.