ಮುಂಬೈ: ಆಟಗಾರರ ಜೀವನಾಧಾರಿತ ಕಥಾವಸ್ತು ಹೊಂದಿರುವ ಅದೆಷ್ಟೋ ಚಿತ್ರಗಳು ತೆರೆಗೆ ಬಂದು ಪ್ರೇಕ್ಷಕರನ್ನು ರಂಜಿಸಿವೆ. ಇದೀಗ ಈ ಸಾಲಿಗೆ ಸಾನಿಯಾ ಮಿರ್ಜಾ ಕೂಡ ಸೇರಲಿದ್ದಾರೆ.
ಅಂದ ಹಾಗೆ ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಜೀವನಾಧಾರಿತ ಸಿನಿಮಾವೊಂದು ಶೀಘ್ರವೇ ಸೆಟ್ಟೇರಲಿದ್ದು ಇದಕ್ಕಾಗಿ ತಯಾರಿಗಳು ನಡೆದಿವೆ. ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಸಾನಿಯಾ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.
ಸಾನಿಯಾ ಅವರ ಕುರಿತಾದ ಸಿನಿಮಾವನ್ನು ಫರ್ಹಾ ಖಾನ್ ನಿರ್ದೇಶಿಸಲಿದ್ದು, ಇದಕ್ಕಾಗಿ ಪೂರ್ವ ತಯಾರಿ ನಡೆಸಿದ್ದಾರೆ. ಟೆನಿಸ್ ಪಂದ್ಯಗಳು ನಡೆಯುವ ರೀತಿ ತಿಳಿಯಲು ಸಾನಿಯಾ ಜೊತೆ ಫರ್ಹಾ ಖಾನ್ ಹಲವಾರು ಪಂದ್ಯಾವಳಿಗಳಿಗೂ ಹೋಗಿ ಬಂದಿದ್ದಾರೆ. ಸಾನಿಯಾ ಕೂಡಾ ಜೀವನ ಚರಿತ್ರೆ ಬರೆಯುತ್ತಿದ್ದು ಅದನ್ನು ಸಿನಿಮಾ ಚಿತ್ರಕತೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ.