ಅಂತರಾಷ್ಟ್ರೀಯ

ಮದುವೆ ಮುರಿಯುವ ಐದು ಕಾರಣಗಳು…

Pinterest LinkedIn Tumblr

marrage

ವಿವಾಹ ಬಂಧನ ನಾಗರಿಕ ಸಮಾಜದ ಪ್ರಮುಖ ಲಕ್ಷಣವೂ ಹೌದು, ಅಗತ್ಯವೂ ಹೌದು. ಮದುವೆ ಎಂಬುದು ಎರಡು ಮನೆತನಗಳು, ಎರಡು ಮನಸ್ಸುಗಳು ಮತ್ತು ಎರಡು ಶರೀರಗಳ ಮಿಲನ. ಮದುವೆ ಸಂಕೀರ್ಣ ಸಂಬಂಧಗಳನ್ನು ಒಳಗೊಂಡಿರುತ್ತದೆ. ವಿಚ್ಛೇದನಕ್ಕೆ ಕೆಲವಾರು ಪ್ರಮುಖ ಕಾರಣಗಳಿರಬಹುದು. ಆದರೆ ಕೆಲವು ವಿಚಿತ್ರ ಹವ್ಯಾಸಗಳು ಮದುವೆ ಮುರಿದು ಬೀಳುವುದಕ್ಕೆ ಕಾರಣವಾಗಬಹುದು. ಇಲ್ಲಿ ಪಟ್ಟಿ ಮಾಡಿರುವ ಐದು ಅಭ್ಯಾಸಗಳು ಮದುವೆಯೊಂದನ್ನು ವಿಚ್ಛೇದನದ ಹಾದಿಯಲ್ಲಿ ಕೊಂಡೊಯ್ಯುವ ಕಾರಣವಾಗಬಹುದು

ನೀವು ಹೇಳದಿರುವ ಮಾತುಗಳನ್ನೂ ನಿಮ್ಮ ಸಂಗಾತಿ ಕೇಳುತ್ತಾರೆ ಎಂಬುದು ನಿಮ್ಮ ನಿರೀಕ್ಷೆಯೇ ? ಇಲ್ಲ ಇದು ಸಾಧ್ಯವಿಲ್ಲ. ಸಂವಹನದ ಕೊರತೆ ವಿಚ್ಛೇದನಕ್ಕೆ ಕಾರಣವಾಗುವುದು ಸಾಮಾನ್ಯ. ಈ ಘನಘೋರ ತಪ್ಪನ್ನು ತಡೆಗಟ್ಟಿ. ನಿಮ್ಮ ಸಂಗಾತಿ ಜತೆ ನಿಯಮಿತವಾಗಿ ಮಾತುಕತೆ ನಡೆಸಿ. ಸೂಕ್ಷ್ಮ ವಿಷಯಗಳಾದ ಹಣಕಾಸು ಮುಂತಾದವುಗಳ ಬಗ್ಗೆ ಮಾತನಾಡಿ. ಯಾವುದೇ ಸಂಭವನೀಯ ಸಂಘರ್ಷವನ್ನು ತಡೆಗಟ್ಟಿ. ನಿಮ್ಮ ದೈನಂದಿನ ಜೀವನದ ಬಗ್ಗೆ ಇಬ್ಬರೂ ಮನಃಸ್ಪೂರ್ತಿಯಾಗಿ ಮಾತನಾಡಿ. ಕೆಲಸದಲ್ಲಿ ಇಬ್ಬರಿಗೂ ಬಿಡುವಿಲ್ಲ ಎಂದಾದರೆ ಇಬ್ಬರೂ ಎಸ್‍ಎಂಎಸ್ ಮೂಲಕ ಮಾತನಾಡಿ. ಭಯ, ಕನಸುಗಳು ಮತ್ತು ಸಣ್ಣ ಸಣ್ಣ ಸಂತೋಷಗಳ ಬಗ್ಗೆ ಮಾತನಾಡಿ. ನಿಮ್ಮ ಸಂಗಾತಿಯನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ.

ನೀವು ಸಾಮಾನ್ಯವಾಗಿ ನಕಾರಾತ್ಮಕ ಮನೋಭಾವ ಹೊಂದಿರುವಿರಾ? ಪ್ರತಿಯೊಬ್ಬರಿಗೂ, ಪ್ರತಿಯೊಂದನ್ನೂ ಟೀಕಿಸುವ ಮನೋಭಾವ ನಿಮ್ಮದಾಗಿದೆಯೇ? ಇದಕ್ಕೆ ಉತ್ತರ ಹೌದು ಎಂದಾದರೆ ನಿಮ್ಮ ಮನೆಯಲ್ಲಿ ಗಂಭೀರ ವಾತಾವರಣ ಇದೆ ಎಂದರ್ಥ. ನಿಮ್ಮ ಸಂಗಾತಿ ಹತಾಶರಾಗಿದ್ದಾರೆ ಎಂದರ್ಥ. ಸಿನಿಕತನದಿಂದ ದೂರವಿರಿ. ಯಾವುದಾದರೂ ವಿಷಯ ನಿಮ್ಮನ್ನು ಕಾಡುತ್ತಿದ್ದರೆ ಸಂಗಾತಿಯೊಂದಿಗೆ, ಆಪ್ತಸ್ನೇಹಿತರೊಂದಿಗೆ ಮತ್ತು ಕುಟುಂಬ ಸದಸ್ಯರ ಜತೆ ಚರ್ಚಿಸಿ. ಸಮಸ್ಯೆಗಳು ನಿಮ್ಮ ಜೀವನಕ್ಕೆ ಹೊರೆಯಾಗಬಾರದು. ಬದುಕಿನಲ್ಲಿ ತಮಾಶೆಯನ್ನು ತನ್ನಿ. ಮನೆಯಲ್ಲಿ ಸ್ನೇಹಮಯ, ಉಲ್ಲಸಿತ ವಾತಾವರಣವಿರಲಿ. ಪ್ರತಿದಿನ ಒಂದಷ್ಟು ಕಾಲ ನಕ್ಕು ನಲಿಯಿರಿ.

ಸಂಗಾತಿಗೆ ಸಾಕಷ್ಟು ಅವಕಾಶ ನೀಡಿ, ಕೇವಲ ನಿಮ್ಮ ಬಗ್ಗೆಯೇ ಚಿಂತಿಸುತ್ತಾ ಕೂರಬೇಡಿ. ಸ್ವ ಕೇಂದ್ರೀಕೃತರಾಗಬೇಡಿ. ನಿಮ್ಮ ಆಪ್ತವಲಯ ದಿಂದ ಸಂಗಾತಿಯನ್ನು ದೂರ ಇಡಬೇಡಿ. ಮದುವೆ ಎಂಬುದು `ನಾವು’ ಎಂಬುದಾಗಿರುತ್ತದೆ. ನಿಮ್ಮ ಜೀವನದಲ್ಲಿ ಆಕೆ/ಆತನನ್ನು ಒಂದು ಭಾಗವಾಗಿಸಿ. ಜತೆಗೆ ನೀವು ಸಹಾ ಆಕೆಯ ಜೀವನದ ಭಾಗವಾಗಿ. ಆಕೆಯ ವೃತ್ತಿಜೀವನ, ಆರೋಗ್ಯ, ಕುಟುಂಬ ಮತ್ತು ಸ್ನೇಹಿತರು, ಇವರ ಜತೆ ಮಿಳಿತರಾಗಿ. ಆಕೆಯಲ್ಲಿ ಆಸಕ್ತಿ ತೋರಿ. ನಿಸ್ವಾರ್ಥ, ಧಾರಾಳ ಮತ್ತು ಪಕ್ವವಾಗಿರುವುದು ಇಲ್ಲಿ ಬಹಳ ಮುಖ್ಯವಾದ ಅಂಶ.

ಎಲ್ಲರೂ ಮೆಚ್ಚುಗೆಗಾಗಿ ಪರಿತಪಿಸುತ್ತಾರೆ ಎಂಬುದು ನೆನಪಿನಲ್ಲಿರಲಿ. ನಿಮ್ಮ ಸಂಗಾತಿಗೆ ಸತತವಾಗಿ ಒಳ್ಳೆಯದನ್ನು ಮಾಡುತ್ತೀರಿ ಮತ್ತು ಇದಕ್ಕೆ ಪ್ರತಿಯಾಗಿ ಮನ್ನಣೆ ಅಥವಾ ಪ್ರಶಂಸೆ ದೊರೆಯದಿದ್ದಾಗ ಏನನಿಸುತ್ತದೆ? ನೀವು, ನಿಮ್ಮ ಮನೆ ಮತ್ತು ಮಕ್ಕಳಿಗಾಗಿ ನಿಮ್ಮ ಸಂಗಾತಿ ಮಾಡುವ ಕೆಲಸ/ಸೇವೆಯನ್ನು ಮೆಚ್ಚಿಕೊಳ್ಳಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಎದುರು ಆತ/ಆಕೆಯನ್ನು ಹೊಗಳಿ. ಅವರ ಸಾಮಥ್ರ್ಯ, ದಯಾಗುಣ, ಧೈರ್ಯ ಅಥವಾ ನಿಸ್ವಾರ್ಥವನ್ನು ಗೌರವಿಸಿ. ಪ್ರೀತಿ ಪಡೆಯುವುದು ಮತ್ತು ನಿಮಗಾಗಿ ಅಕ್ಕರೆ ತೋರುವವರನ್ನು ಹೊಂದಿರುವುದು, ನಿಜಕ್ಕೂ ಯಾರಿಗಾದರೂ ದೊರೆಯಬಹುದಾದ ಪರಮಾನಂದಭರಿತ ಉಡುಗೊರೆ. ಇದು ಸುಲಭವಾಗೇನೂ ದಕ್ಕುವುದಿಲ್ಲ.

ಬಿಡುವಿದ್ದಾಗ ಮೂಗು ಮತ್ತು ಕಿವಿಯಲ್ಲಿ ಬೆರಳು ಹಾಕಿಕೊಳ್ಳುವುದು ನಿಮ್ಮ ಅಚ್ಚುಮೆಚ್ಚಿನ ಹವ್ಯಾಸವೇ? ಇಡೀ ವಾರ ಒಂದೇ ಜತೆ ಕಾಲ್ಚೀಲ(ಸಾಕ್ಸ್) ಉಪಯೋಗಿಸುವಿರಾ? ಸಾರ್ವಜನಿಕವಾಗಿ ಕರೆದುಕೊಳ್ಳಲಾಗದ ಜಾಗದಲ್ಲಿ ಕೆರೆದುಕೊಳ್ಳುವ ಅಭ್ಯಾಸವಿದೆಯೇ? ಈ ಸಣ್ಣಪುಟ್ಟ ಸಂಗತಿಗಳು ನಿಮ್ಮ ಮದುವೆಯನ್ನು ಹಾಳು ಮಾಡಲು ಕಾರಣವಾಗಬಹುದು. ಈ ಅಭ್ಯಾಸಗಳು ಸಾಮಾಜಿಕವಾಗಿ ಮುಜುಗರ ತರುವವಿಚಾರಗಳು. ಇಂತಹ ಸಂದರ್ಭಗಳಲ್ಲಿನಿಮ್ಮ ಸಂಗಾತಿ ಜತೆ ಇದ್ದರೆ ಅವರಿಗೆ ತೀರಾ ಮುಜುಗರವಾಗಬಹುದು. ಈ ಎಲ್ಲ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ.

Write A Comment