ಕರ್ನಾಟಕ

ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಗೆ ಕಾರ್ಯತಂತ್ರ ಶುರು

Pinterest LinkedIn Tumblr

Siddu-vs-Mallikharjun--kharಬೆಂಗಳೂರು, ಜು.15- ಜೆಡಿಎಸ್‌ನ ಅವಿಶ್ವಾಸ ನಿರ್ಣಯ ಮಂಡನೆ, ರೈತರ ಆತ್ಮಹತ್ಯೆ ಪ್ರಕರಣಗಳು, ಲೋಕಾಯುಕ್ತ ಭ್ರಷ್ಟಾಚಾರ, ಸಚಿವರ ವಿರುದ್ಧ ಶಾಸಕರ ಅಸಮಾಧಾನ  ಈ ಎಲ್ಲ ಬೆಳವಣಿಗೆಗಳ  ನಡುವೆ ಕಾಂಗ್ರೆಸ್ ಶಾಸಕರ ಒಂದು ಗುಂಪು ಬಂಡಾಯದ ಬಾವುಟ ಹಿಡಿದಿದ್ದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ್‌ಖರ್ಗೆ ಅವರಿಗೆ ನಾಯಕತ್ವ ವಹಿಸಲು ದುಂಬಾಲು ಬಿದ್ದಿದೆ.

ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಅತೃಪ್ತರ ಬಣ ಸಿಎಂ ಸಿದ್ದ ರಾಮಯ್ಯ ಅವರ ನಾಯಕತ್ವ ಬದಲಾವಣೆ ಆಗಬೇಕೆಂಬ ಪ್ರತಿಪಾದನೆಯ ಕೀರಲು ಧ್ವನಿ ಆರಂಭಿಸಿದೆ. ನಾಯಕತ್ವ ಬದಲಾಗು ವುದಾದರೆ ಪರ್ಯಾಯ ನಾಯಕ ರಾಗಿ ಮಲ್ಲಿಕಾರ್ಜುನ ಖರ್ಗೆ ಅವರೇ ಬರಬೇಕೆಂಬ ಒತ್ತಾಯ ಹೆಚ್ಚಾಗಿದೆ.
ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿರುವ ಖರ್ಗೆ ಅವರು ರಾಜ್ಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಹೈಕಮಾಂಡ್ ಕೂಡ ಶಾಸಕರ ಬೇಡಿಕೆಗೆ ಸೊಪ್ಪು ಹಾಕುವ ಸಾಧ್ಯತೆಗಳಿಲ್ಲ. ಆದರೂ ಪ್ರಯತ್ನ ಬಿಡದ ಕೆಲ ಶಾಸಕರು ನಿರಂತರವಾಗಿ ಖರ್ಗೆ ಅವರನ್ನು ಭೇಟಿ ಮಾಡಿ ಮನವೊಲಿಕೆ ಯತ್ನ ನಡೆಸುತ್ತಿದ್ದಾರೆ.
ಈ ನಡುವೆ ಬಿಬಿಎಂಪಿ ಚುನಾವಣೆ ನಂತರ ಬಂಡಾಯ ಸ್ಫೋಟಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಮೂಲಗಳ ಪ್ರಕಾರ ಆಗಸ್ಟ್ 28ಕ್ಕೆ ಬಿಬಿಎಂಪಿ ಚುನಾವಣೆ ನಡೆಸಲು ಸೂಚನೆ ನೀಡಲಾಗಿದೆ.

ಈ ನಡುವೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ವಾದ ಪುರಸ್ಕರಿಸಿ ಚುನಾವಣೆಗೆ ಇನ್ನಷ್ಟು ಕಾಲಾವಕಾಶ ನೀಡಿದರೆ ಅತೃಪ್ತ ಶಾಸಕರ ಸಮಾಧಾನಪಡಿಸಲು ಸಿಎಂ ಸಿದ್ದರಾಮಯ್ಯ ಈ ತಿಂಗಳಾಂತ್ಯದಲ್ಲೇ ಸಂಪುಟ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಇಲ್ಲವಾದರೆ ಮುಂದಿನ ತಿಂಗಳು ಬಿಬಿಎಂಪಿ ಚುನಾವಣೆ ನಡೆಯಲಿದ್ದು ಅದರ  ಬೆನ್ನಲ್ಲೇ ಸಿದ್ದು ವಿರುದ್ಧ ಅತೃಪ್ತಿಯ ಧ್ವನಿ ಎತ್ತಲು ಸಜ್ಜಾಗುತ್ತಿದ್ದಾರೆ.  ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್‌ಗೆ ಹೆದರಿ ಮೌನಕ್ಕೆ ಶರಣಾಗಿದ್ದಾರೆ. ಆದರೆ ಅನ್ಯ ಪಕ್ಷದಿಮದ ಬಂದಿರುವವರು ಹೈಕಮಾಂಡ್‌ಗೆ ಸೆಡ್ಡು ಹೊಡೆದು ನಾಯಕತ್ವ ಬದಲಾವಣೆಯ ಧ್ವನಿಗೆ ಕೈ ಜೋಡಿಸುತ್ತಿದ್ದಾರೆ. ಒಟ್ಟಿನಲ್ಲಿ ಅದೃಷ್ಟದ ಬೆನ್ನೇರಿ ಹೊರಟಿರುವ ಸಿದ್ದರಾಮಯ್ಯ ಅವರಿಗೆ ಪಕ್ಷದ ಒಳವಲಯದಲ್ಲಿ ನಡೆಯುತ್ತಿರುವ ಬಂಡಾಯ ಚಟುವಟಿಕೆಗಳು ಯಾವ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.

Write A Comment