ರಾಷ್ಟ್ರೀಯ

ಪರಪುರುಷನ ಜತೆಗಿನ ಕಾಮ, ಹೆತ್ತ ಮಗನನ್ನೇ ಬಲಿ ಪಡೆಯಿತು !

Pinterest LinkedIn Tumblr

999Murder_WEB-300x214ಪರಪುರುಷನೊಂದಿಗೆ ಚಕ್ಕಂದವಾಡಲು ವಿರೋಧಿಸುತ್ತಿದ್ದ ಮಗನನ್ನೇ ಪ್ರಿಯಕರನ ಜತೆ ಸೇರಿ ಮಹಾತಾಯಿಯೊಬ್ಬಳು ಹತ್ಯೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಶಹಜಾದ್ ನಗರದಲ್ಲಿ ವಾಸವಾಗಿರುವ 45 ವರ್ಷ ವಯಸ್ಸಿನ ವಿದ್ಯಾ ಎಂಬ ವಿಧವೆ ಅಲ್ಲಿಯವನೇ ಆದ 50 ವರ್ಷದ ಚೆಡಿಲಾಲ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ಈ ಅಕ್ರಮ ಸಂಬಂಧವನ್ನು ವಿದ್ಯಾಳ ಪುತ್ರ 8 ವರ್ಷದ ಆಕಾಶ್ ಅಡ್ಡಿಯಾಗಿದ್ದಲ್ಲದೇ ಇವರಿಬ್ಬರ ರಾಸಲೀಲೆಯನ್ನು ವಿರೋಧಿಸುತ್ತಿದ್ದ. ಇದರಿಂದ ಆಕ್ರೋಶ ಗೊಂಡ ತಾಯಿ ಚೆಡಿಲಾಲ್ ಜತೆ ಸೇರಿಕೊಂಡು ಹೆತ್ತ ಮಗನನ್ನೇ ಹತ್ಯೆ ಮಾಡಿ ಊರ ಹೊರಗಿನ ಮರವೊಂದಕ್ಕೆ ನೇಣು ಹಾಕಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಸಾವಿನ ರಹಸ್ಯ ತಿಳಿದಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment