ಕರ್ನಾಟಕ

ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಕೂಡಾ ಭ್ರಷ್ಟ: ಎ.ಕೆ.ಸುಬ್ಬಯ್ಯ

Pinterest LinkedIn Tumblr

sanಮಡಿಕೇರಿ: ಮಾಜಿ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ ನ್ಯಾ.ಸಂತೋಷ್ ಹೆಗ್ಗಡೆ ಕೂಡ ಭ್ರಷ್ಟ. ಭ್ರಷ್ಟರನ್ನು ರಕ್ಷಿಸಿದವರೇ. ಭ್ರಷ್ಟರ ವಿರುದ್ಧ ತನಿಖೆ ಮಾಡಿದವರಲ್ಲ ಎಂದು ಮಾಜಿ ಸಚಿವ ಎ.ಕೆ.ಸುಬ್ಬಯ್ಯ ಆರೋಪಿಸಿದ್ದಾರೆ.

ರಾಜ್ಯದ ಲೋಕಾಯುಕ್ತರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು  ಅವರು ಇಂದು ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈಭಾಸ್ಕರ್ ರಾವ್ ಅವರ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪ ಕೇಳಿ ಬಂದ ಕೂಡಲೇ ರಾಜೀನಾಮೆ ನೀಡಬೇಕೆಂಬ ನಿಯಮವಿಲ್ಲ. ಆದರೆ ರಾಜ್ಯದ ಮುಖ್ಯ ಲೋಕಾಯುಕ್ತರ ವಿರುದ್ಧ ಪ್ರಸ್ತುತ ಹೋರಾಟಗಳ ನಡೆಯುತ್ತಿದ್ದು, ಅವುಗಳು ತರವಲ್ಲ ಎಂದ ಅವರು, ಲೋಕಾಯುಕ್ತ ಭಾಸ್ಕರ್ ರಾವ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಪ ಸಾಬೀತಾದಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂಬ ಅವರ ನಿಲುವ ಸರಿ ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ, ರಾಜ್ಯದಲ್ಲಿ .ಡಿಯೂರಪ್ಪ ಹಾಗೂ ದೇವೇಗೌಡರೂ ಸೇರಿದಂತೆ ಅನೇಕರ ವಿರುದ್ಧ ಎಫ್ಐಆರ್ ದಾಖಲಾಗಿವೆ. ಆದರೆ ಅವರು ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಲೋಕಾಯುಕ್ತರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದಲ್ಲಿ ಅವರೂ ರಾಜೀನಾಮೆ ನೀಡಲಿ ಎಂದರು. ಅಲ್ಲದೆ ದೇವೇಗೌಡರು ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಲೋಕಾಯುಕ್ತರ ವಿರುದ್ಧ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಅವರು ಬಾಯಿ ಮುಚ್ಚಿಕೊಂಡು ಇರಲಿ ಎಂದು ಆಕ್ರೋಶ ಭರಿತರಾಗಿ ನುಡಿದರು.

ಬಳಿಕ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ಬಗ್ಗೆಯೂ ಪ್ರತಿಕ್ರಿಯಿಸಿ, ನ್ಯಾ.ಸುಭಾಷ್ ಕೂಡ ಉತ್ತಮರು. ಆದರೆ ಅವರು ಕೆಲ ಕಾಣದ ಕೈಗಳಿಗೆ ಗೊಂಬೆಯಾಗಿದ್ದಾರೆ. ಈ ಹಿಂದೆ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ ನ್ಯಾ.ಸಂತೋಷ್ ಹೆಗ್ಗಡೆ ಕೂಡ ಭ್ರಷ್ಟರನ್ನು ರಕ್ಷಿಸಿದವರೇ. ಭ್ರಷ್ಟರ ವಿರುದ್ಧ ತನಿಖೆ ಮಾಡಿದವರಲ್ಲ ಎಂದು ಆರೋಪಿಸಿದರು.

ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜ್ಯದ ಮುಖ್ಯ ಲೋಕಾಯುಕ್ತ ಭಾಸ್ಕರ್ ರಾವ್ ಅವರೇ ಭಾಗಿಯಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು, ವಕೀಲರು ಹಾಗೂ ಇನ್ನಿತರೆ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುವ ಮೂಲಕ ರಾಜೀನಾಮೆಗೆ ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸುಬ್ಬಯ್ಯ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

Write A Comment