ಮನೋರಂಜನೆ

ಬಾಲಿವುಡ್ ನಟ ಶಾಹೀದ್ ಭಾವಿ ಪತ್ನಿಯ ಕುರಿತು ಒಂದಿಷ್ಟು ಮಾಹಿತಿ

Pinterest LinkedIn Tumblr

59742015_07_02_23_48_44_7ಬಾಲಿವುಡ್ ನಟ ಶಾಹೀದ್ ಕಪೂರ್ ಮೂರ್ನಾಲ್ಕು ದಿನಗಳಲ್ಲಿ ದೆಹಲಿ ಮೂಲದ ಕನ್ಯೆ ಮೀರಾ ರಜಪೂತ್ ಕೈ ಹಿಡಿಯಲಿದ್ದಾರೆ. ಮೀರಾ ರಜಪೂತ್ ಚಿತ್ರರಂಗದ ಹಿನ್ನಲೆಯುಳ್ಳವರೇನಲ್ಲ. ಅವರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಮೀರಾ ರಜಪೂತ್ ಕುಟುಂಬಸ್ಥರು ಮೂಲತಃ ಪಂಜಾಬಿನವರು. ಅವರ ತಂದೆ ತಮ್ಮ ವ್ಯವಹಾರಗಳನ್ನು ದೆಹಲಿಯಲ್ಲಿ ನಡೆಸುತ್ತಿರುವ ಕಾರಣ ದೆಹಲಿಯಲ್ಲಿ ನೆಲೆಸಿದ್ದಾರೆ. ಮೀರಾ ರಜಪೂತ್ ಅವರಿಗೆ ಇಬ್ಬರು ಸಹೋದರಿಯರೂ ಇದ್ದು, ಈಕೆ ಎರಡನೆಯವರು. ಇವರ ಕುಟುಂಬ ರಾಧಾ ಸಾವಮಿ ಅನುಯಾಯಿಗಳಾಗಿದ್ದು, ಶಾಹೀದ್ ಕುಟುಂಬವೂ ಇದನ್ನೇ ಅನುಸರಿಸುವ ಕಾರಣ ಅಲ್ಲಾದ ಪರಿಚಯವೇ ವಿವಾಹ ಕೂಡಿ ಬರಲು ಕಾರಣವೆನ್ನಲಾಗಿದೆ.

ಮೀರಾ ರಜಪೂತ್ ನಾಚಿಕೆ ಸ್ವಭಾವದವರಲ್ಲದೇ ವ್ಯಾಸಂಗದಲ್ಲಿ ಬುದ್ದಿವಂತ ವಿದ್ಯಾರ್ಥಿನಿಯೆನಿಸಿಕೊಂಡಿದ್ದಾರೆ. ಬಿಡುವಿನಲ್ಲಿ ಪುಸ್ತಕ ಓದುವ ಹಾಗೂ ಸಂಗೀತ ಕೇಳುವ ಹವ್ಯಾಸವಿರುವ ಮೀರಾ ರಜಪೂತ್, ಶಾಹೀದ್ ಕಪೂರ್ ಗೆ ಹೇಳಿ ಮಾಡಿಸಿದ ಕನ್ಯೆ ಎನ್ನಲಾಗುತ್ತಿದೆ. ವಿವಾಹವಾದ ಬಳಿಕ ಮುಂಬೈನಲ್ಲಿ ಈ ಜೋಡಿ ಬಾಲಿವುಡ್ ಗಣ್ಯರಿಗಾಗಿ ಭರ್ಜರಿ ಪಾರ್ಟಿಯೊಂದನ್ನು ಪಂಚತಾರಾ ಹೋಟೆಲಿನಲ್ಲಿ ಏರ್ಪಡಿಸಿದೆ.

Write A Comment