ಕರ್ನಾಟಕ

ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

Pinterest LinkedIn Tumblr

mom-baby

ತುಮಕೂರು, ಜೂ.20: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ನೇರಳಾ ಹುಂಡಿ ಗ್ರಾಮದ ತಾರಾಬಾಯಿ ಎಂಬುವವರು ಚಲಿಸುತ್ತಿದ್ದ ರೈಲಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

ತಾರಾಬಾಯಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಆಯನೂರು ಕೋಟೆತಾಂಡ್ಯದವರು. ಅವರು ಶುಕ್ರವಾರ ಬೆಳಗ್ಗೆ ಶಿವಮೊಗ್ಗದಿಂದ ಅರಸೀಕೆರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿ, ಬಳಿಕ ಅಲ್ಲಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲು ಹತ್ತಿ ಪ್ರಯಾಣ ಮಾಡುವಾಗ ತುಮಕೂರು ನಗರಕ್ಕೆ ಸುಮಾರು 5 ಕಿ.ಮೀ. ದೂರದಲ್ಲಿಯೇ ತಾರಾಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ರೈಲಿನಲ್ಲಿದ್ದ ಕೆಲ ಮಹಿಳೆಯರು ಸೇರಿ ಸುತ್ತಲೂ ಬಟ್ಟೆಯನ್ನು ಹಿಡಿದು ಹೆರಿಗೆ ಮಾಡಿಸಿದ್ದಾರೆ.

ಬಳಿಕ ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ತಾಯಿ-ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಹಾಗೂ ಮಗುವನ್ನು ಪರಿಶೀಲಿಸಿದ ಮಕ್ಕಳ ತಜ್ಞ ಡಾ. ಮುಕ್ತಾಂಬ ಅವರು, ತಾರಾಬಾಯಿ ಅವರಿಗೆ ಅವಧಿಗು ಮುನ್ನವೇ ಹೆರಿಗೆ ಆಗಿರುವುದರಿಂದ ಜನಿಸಿದ ಹೆಣ್ಣು ಮಗುವನ್ನು ನವಜಾತ ಶಿಶುಗಳ ಘಟಕದಲ್ಲಿ ದಾಖಲಿಸಿಕೊಂಡು ಆರೈಕೆ ಮಾಡಲಾಗುತ್ತಿದೆ ಎಂದರು. ರೈಲಿನಲ್ಲಿದ್ದ ಮಹಿಳೆಯರ ಸಹಾಯದಿಂದ ತಾರಾಬಾಯಿಗೆ ಹೆರಿಗೆ ಆಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

Write A Comment