ಕನ್ನಡ ವಾರ್ತೆಗಳು

ವಿಕಾಸದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಸುಯೋಗ.

Pinterest LinkedIn Tumblr

vikas_college_Yoga_1

ಮಂಗಳೂರು,ಜೂನ್.20: ಯೋಗಕ್ಕೆ ಮನಸ್ಸು ಮತ್ತು ದೇಹವನ್ನು ಬೆಸೆಯುವಂತಹ ಶಕ್ತಿ ಇದೆ. ಅದರ ನಿರಂತರ ಅಭ್ಯಾಸದಿಂದ ಮಾತ್ರ ಈ ಶಕ್ತಿ ಅರಿವಿಗೆ ಬರುತ್ತದೆ. ಸುದೀರ್ಘ ಅಭ್ಯಾಸದಿಂದ ದೇಹದ ಶಕ್ತಿ ಮತ್ತು ಪುನಶ್ಚೇತನ ಸಾಮರ್ಥ್ಯ ಹೆಚ್ಚುತ್ತದೆ. ಯೋಗಾಭ್ಯಾಸದಿಂದ ಹಲವಾರು ವರ್ಷಗಳಿಂದ ತನ್ನನ್ನು ಬಾಧಿಸುತ್ತಿದ್ದ ಬೆನ್ನುನೋವು ನಿವಾರಣೆಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರೂ, ಮಾಜಿ ಸಚಿವರೂ, ಸ್ವತಃ ಯೋಗಪಟುವೂ ಆದ ಕೃಷ್ಣ ಜೆ. ಪಾಲೆಮಾರ್ ಹೇಳಿದರು. ಅವರು ಶನಿವಾರದಂದು ಮಂಗಳೂರು ಮೇರಿಹಿಲ್‌ನ ಪ್ರತಿಷ್ಠಿತ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ `ಯೋಗದಿನ’ ಆಚರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

vikas_college_Yoga_2 vikas_college_Yoga_3 vikas_college_Yoga_4 vikas_college_Yoga_5

ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕ ಶ್ರೀ ಜಿನೋ ಕೆ. ಜಾನ್ ಯೋಗಾಭ್ಯಾಸದ ವಿಶೇಷ 12  ಪ್ರಯೋಜನಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕಾಲೇಜಿನಲ್ಲಿ ಯೋಗಭ್ಯಾಸ ಕೇವಲ ಯೋಗದಿನಕ್ಕಾಗಿ ಮಾತ್ರ ಸೀಮಿತವಾಗದೆ, ಪ್ರತಿನಿತ್ಯ ತರಗತಿಯಲ್ಲಿ ಕಾಲೇಜು ಆರಂಭಗೊಂಡಂದಿನಿಂದಲೂ ಆಗುತ್ತಿದೆ. ಹೆಸರಾಂತ ಹಾಗೂ ಅನೇಕ ಪುರಸ್ಕಾರಗಳನ್ನು ಪಡೆದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿ ದ್ದಾರೆ.

ದೈಹಿಕ ಶಿಕ್ಷಕರಾದ ಶ್ರೀ ಸಂದೀಪ್ ರಾವ್ ಹಾಗೂ ಶ್ರೀ ರಮೇಶ್ ಪೂಜಾರಿಯವರು ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ಜೆ. ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಸಲಹೆಗಾರ ಶ್ರೀ ಅನಂತ ಪ್ರಭು, ಪ್ರಾಂಶುಪಾಲ ಡಾ| ಕೆ. ರಾಜೇಂದ್ರ, ಬೋಧಕ, ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಉಪಪ್ರಾಂಶುಪಾಲ ಶ್ರೀ ನವೀನ್ ಎಸ್.ಎ. ವಂದನಾರ್ಪಣೆ ಮಾಡಿದರು.

Write A Comment