ರಾಷ್ಟ್ರೀಯ

‘ಯೋಗ’ದಿನದ ಮೇಲೆ ಉಗ್ರರ ಕರಿನೆರಳು; ಗುಪ್ತಚರ ದಳ ಎಚ್ಚರಿಕೆ

Pinterest LinkedIn Tumblr

rajpath

ನವದೆಹಲಿ, ಜೂ.20: ಅಂತಾರಾಷ್ಟ್ರೀಯ ಯೋಗದಿನ ಆಚರಣೆಗೆ ವಿಶ್ವವೇ ಸಜ್ಜಾಗುತ್ತಿರುವ ನಡುವೆ ನಾಳೆ ಇಲ್ಲಿನ ರಾಜ್‌ಪಥ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದ ವೇಳೆ ಬಲೂನ್, ಗಾಳಿಪಟಗಳಂತ ಹಾರುವ ವಸ್ತುಗಳ ಮೂಲಕ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ದಳ (ಐಬಿ)ಎಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ರೀತಿಯ ಬಲೂನ್, ಗಾಳಿಪಟ, ಗ್ಲೈಡರ್, ಮೈಕ್ರೋ ಲೈಟ್ ವಸ್ತುಗಳನ್ನು ಈ ಪ್ರದೇಶದಲ್ಲಿ ಹಾರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಛಾಯಾಚಿತ್ರ ತೆಗೆಯಲು ದ್ರೋಣ್‌ಗಳ ಹಾರಾಟವನ್ನೂ ಪ್ರತಿಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.21ರ ಈ ಬೃಹತ್ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು ರಾಜತಾಂತ್ರಿಕರು ಸೇರಿದಂತೆ ಸುಮಾರು 35 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಶೇಷ ಭದ್ರತೆ ಕಲ್ಪಿಸುವಂತೆ ಐಬಿ ಅಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ 30 ಕಂಪೆನಿಗಳು ರಾಜ್‌ಪಥ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಮೇಲೆ ತೀವ್ರನಿಗಾ ವಹಿಸಲಿವೆ. ಕಾರ್ಯಕ್ರಮಕ್ಕೆ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಯೋಗ ನಡೆಯುವ ಪ್ರದೇಶದ ಕಾವಲಿಗೆ ಇಲ್ಲಿನ ಪೊಲೀಸ್ ಸೇರಿದಂತೆ 5 ಸಾವಿರ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Write A Comment