ಕರ್ನಾಟಕ

ಎಂಜಿನಿಯರ್‌ಗಳು ದೇಶ ಕಟ್ಟಲು ಶ್ರಮಿಸಬೇಕು : ಗವರ್ನರ್ ವಾಲಾ ಕರೆ

Pinterest LinkedIn Tumblr

Vajubhai--Function

ಕೆ.ಆರ್.ಪುರಂ, ಜೂ.5- ಎಂಜಿನಿಯರ್‌ಗಳು ದೇಶದ ಅಭಿವೃದ್ಧಿಗಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಇಂದಿಲ್ಲಿ ಕರೆ ನೀಡಿದರು. ಹಳೇ ಏರ್‌ಪೋರ್ಟ್ ರಸ್ತೆಯಲ್ಲಿರುವ ಹೆಚ್‌ಎಎಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 66 ನೇ ಎಜಿಎಂ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಂಗಳಯಾನದಲ್ಲಿ ಭಾರ ತೀಯ ಎಂಜಿನಿಯರ್‌ಗಳ ಪಾತ್ರ ಅಪಾರವಾದದ್ದು ಎಂದು ಶ್ಲಾಘಿಸಿದ ರಾಜ್ಯಪಾಲರು ದೇಶದ ಅಭಿವೃದ್ಧಿಗಾಗಿ ಮತ್ತಷ್ಟು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳು ವಂತೆ ಸಲಹೆ ನೀಡಿದರು. ಯಾವುದೇ ಸಂಶೋಧನೆ ಕೈಗೊಳ್ಳಲು ಸರ್ಕಾರದ ಸಹಕಾರ ಇದ್ದರೆ ಸಾಲದು ಇದಕ್ಕೆ ಖಾಸಗಿ ಸಂಸ್ಥೆಗಳು ಮುಂದೆ ಬಂದರೆ ಉತ್ತಮ ಎಂದು ತಿಳಿಸಿದರು. ಭಾರತದ ಎಂಜಿನಿ ಯರ್‌ಗಳ ಸಾಧನೆ ಉತ್ತಮ ವಾದದ್ದು,ಎಂಜಿನಿಯರ್‌ಗಳ ಕಾರ್ಯವೈಖರಿಗೆ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು. ಭಾರತದ ಎಂಜಿನಿಯರ್‌ಗಳ ಮೇಲೆ ವಿಶ್ವಾಸವಿದೆ, ಹೊಸ ತರಹದ ಸಂಶೋಧನೆಗಳನ್ನು ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದು ಹೇಳಿದರು.
ಬುದ್ದಿವಂತ ಎಂಜಿನಿಯರ್‌ಗಳಿಗೆ ಅವಕಾಶ ಹೆಚ್ಚಾಗಿ ನೀಡಬೇಕಿದೆ ಎಂದು ಹೇಳಿದರು. ಅವರು, ಚೈನಾ ದೇಶದ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡು ದೇಶದ ಕೀರ್ತಿಪತಾಕೆ ಹಾರಿಸುವಂತೆ ಕರೆ ನೀಡಿದರು.

Write A Comment