ಕರ್ನಾಟಕ

ರಾಜ್ ಕುಟುಂಬದ ಕುಡಿ ವಿನಯ್‍ರಾಜರ ಮುಂದಿನ ಸಿನೆಮಾ `ಆರ್ ದಿ ಕಿಂಗ್’ಗಾಗಿ ಮುಂಬೈನಲ್ಲಿ ಭಾರಿ ಕಸರತ್ತು !

Pinterest LinkedIn Tumblr

Vinay Rajkumar

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್‍ರಾಜ್ `ಸಿದ್ದಾರ್ಥ’ ಚಿತ್ರದ ಮೂಲಕ ಹೊಸ ಭರವಸೆಯನ್ನು ಸೃಷ್ಟಿಸಿದ್ದರು. ಇದೀಗ ತಮ್ಮ ಮುಂದಿನ ಸಿನಿಮಾ `ಆರ್ ದಿ ಕಿಂಗ್’ ಚಿತ್ರಕ್ಕಾಗಿ ಮಾಯಾನಗರಿ ಮುಂಬೈನಲ್ಲಿ ಸಖತ್ ಕಸರತ್ತು ಮಾಡುತ್ತಿದ್ದಾರೆ.

ಸಿದ್ಧಾರ್ಥನಾಗಿ ಸ್ಯಾಂಡಲ್‍ವುಡ್‍ನ ಸಿಲ್ವರ್ ಸ್ಕ್ರೀನ್‍ಗೆ ಎಂಟ್ರಿ ಕೊಟ್ಟ ಡಾ. ರಾಜ್ ಕುಟುಂಬದ ಮೂರನೇ ತಲೆಮಾರಿನ ಕುಡಿ ವಿನಯ್ ರಾಜ್. ಈಗ ನಿರ್ದೇಶಕ ಪ್ರೇಮ್ ಸಾರಥ್ಯದ ಆರ್ ದಿ ಕಿಂಗ್ ಚಿತ್ರಕ್ಕಾಗಿ ಮಾಯಾನಗರಿ ಮುಂಬೈಯಲ್ಲಿ ಮೈ ಬೇವರು ಇಳಿಸಿ ಸಖತ್ ಕಸರತ್ತು ನಡೆಸುತ್ತಿದ್ದಾರೆ.

ಅನುಪಮ್ ಕೇರ್ ಗರಡಿಯಲ್ಲಿ ನಟನೆ ಕಲಿಯುತ್ತಿರುವ ವಿನಯ್, ಬಾಲಿವುಡ್‍ನ ಸ್ಟಾರ್‍ಗಳು ಹೆಚ್ಚಾಗಿ ವರ್ಕ್ ಔಟ್ ಮಾಡುವ ಐ ತಿಂಕ್ ಫಿಟ್‍ನೆಸ್ಸ್ ಜಿಮ್‍ಗೆ ಸೇರಿಕೊಂಡಿದ್ದಾರೆ. ದಿನಕ್ಕೆ ಎರಡು ಗಂಟೆ ಜಿಮ್‍ನಲ್ಲಿ ವರ್ಕ್‍ಔಟ್ ಮಾಡಿದರೆ ಮತ್ತೆ ಎರಡು ಗಂಟೆ ಸಮುದ್ರ ತೀರದಲ್ಲಿ ಮಾರ್ಷಲ್ ಆರ್ಟ್ ತರಬೇತಿ ಪಡೆಯುತ್ತಿದ್ದಾರೆ.

ಮುಂಬೈನಲ್ಲಿ ಎರಡು ತಿಂಗಳ ತರಬೇತಿ ಪೂರ್ಣಗೊಳಿಸಿರುವ ವಿನಯ್ ರಾಜ್ ಜೂನ್ ತಿಂಗಳ ಅಂತ್ಯದಲ್ಲಿ ಮುಂಬೈನ ತರಬೇತಿ ಮುಗಿಸಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ. ವಿನಯ್ ಅವರ ಹೊಸ ಚಿತ್ರ ಆರ್ ದಿ ಕಿಂಗ್ ಜುಲೈನಲ್ಲಿ ಸೆಟ್ಟೇರಲಿದ್ದು ಇತ್ತೀಚೆಗೆ ಬಾಲಿವುಡ್‍ನ ಹ್ಯಾಂಡಸಮ್ ಹಂಕ್ ಜಾನ್ ಅಬ್ರಾಹಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

Write A Comment