ಕನ್ನಡ ವಾರ್ತೆಗಳು

ನಾಗುರಿ ಪಂಪ್‌ಹೌಸ್ ಬಳಿ ರಸ್ತೆ ಅಭಿವೃದ್ಧಿ: ಜೆ. ಆರ್. ಲೋಬೊ

Pinterest LinkedIn Tumblr

lobo_road_oping_1

ಮಂಗಳೂರು,ಜೂನ್ .01 : ಶಾಸಕ ಜೆ. ಆರ್. ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಯಾದ 29 ಲಕ್ಷ ರೂಪಾಯಿ ಅನುದಾನದಲ್ಲಿ 48 ನೇ ವಾರ್ಡಿನ ನಾಗುರಿ ಪಂಪ್ ಹೌಸ್ ಬಳಿಯಿಂದ ಪ್ರೇಮಗುಡ್ಡೆಯವರೆಗೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣಗೊಂಡ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನೇರವೆರಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಲವಾರು ವರ್ಷಗಳಿಂದ ಸ್ಥಳಿಯ ನಾಗರಿಕರಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ಕಳೆದ ವಿಧಾನಸಭಾ ಚುನವಾಣೆಗೆ ಅಭ್ಯರ್ಥಿಯಾಗಿ ಈ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಯ ಬೇಡಿಕೆಯನ್ನು ನನ್ನ ಮುಂದೆ ಇಟ್ಟಿದ್ದರು. ಅವರ ಮನವಿಗೆ ಸ್ಪಂದಿಸಿ, ಈ ಇಕ್ಕಟ್ಟಿನ ಪ್ರದೇಶದಲ್ಲಿ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ 250 ಮೀಟರ್ ಉದ್ದ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರೀಟಿಕರಣವನ್ನು ಅದ್ಯತೆಯ ಮೇರೆಗೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

lobo_road_oping_2

ಈ ಆಭಿವೃದ್ಧಿಗೊಂಡ ಒಳರಸ್ತೆಗೆ ಮುಖ್ಯ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸುವ ತಡೆಗೊಡೆಯ ಕಾಮಗಾರಿ ಈಗಾಗಲೆ ಅಂತಿಮ ಹಂತದಲ್ಲಿದೆ ಎಂದು ಶಾಸಕರು ತೀಳಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ಕೆಪಿಸಿಸಿ ಸದಸ್ಯ ಮೊಹಮದ್ ಬದ್ರುದ್ದೀನ್, ಅರುಣ್ ಕುವೇಲ್ಹೊ, ಜಗನ್ನಾಥ್ ಶೆಟ್ಟಿ, ಟಿ.ಕೆ ಸುಧೀರ್, ರಸ್ತೆ ಅಗಲಿಕರಣಕ್ಕೆ ಸ್ಥಳಕೊಟ್ಟ ಹೋಲಿ ಎಂಜಲ್ಸ್ ಕಾನ್ವೆಂಟಿನ ಸಿಸ್ಟರ್ ಮೆಟಿಲ್ಡಾ ಮುಂತಾದವರು ಉಪಸ್ಥಿತರಿದ್ದರು.

Write A Comment