ಮನೋರಂಜನೆ

ಭಜರಂಗಿ ಬಾಯಿಜಾನ್‍ನಲ್ಲಿ ಸಲ್ಮಾನ್ ಖಾನ್ ಹಾಕಿಕೊಂಡ ಪೆಂಡೆಂಟ್ ಮೇಲೆ ಅಭಿಮಾನಿಗಳ ಕಣ್ಣು; ಯಾತಕ್ಕಾಗಿ ಎಂಬುದನ್ನು ಮುಂದೆ ಓದಿ ….

Pinterest LinkedIn Tumblr

sallu

ಮುಂಬೈ: ಸಲ್ಮಾನ್ ಖಾನ್ ಎಂದರೆ ಅವರ ನೀಲಿಬಣ್ಣದ ಫೀರೋಜ್ ಶಾ ಬ್ರೇಸ್‍ಲೈಟ್ ನೆನಪಾಗುತ್ತಿತ್ತು. ಈಗ ಸಲ್ಮಾನ್ ತಮ್ಮ ಮುಂದಿನ ಸಿನಿಮಾ ಭಜರಂಗಿ ಬಾಯಿಜಾನ್ ಸಿನಿಮಾಕ್ಕಾಗಿ ವಿಶೇಷವಾಗಿ ಪೆಡೆಂಟ್‍ವೊಂದನ್ನು ಮಾಡಿಸಿಕೊಂಡಿದ್ದು ಈಗ ಸಲ್ಲು ಅಭಿಮಾನಿಗಳು ಅದೇ ರೀತಿಯ ಪಡೆಂಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಬಿಡುಗಡೆ ಮಾಡಿದ ಭಜರಂಗಿ ಬಾಯಿಜಾನ್ ಸಿನಿಮಾದ ಟ್ರೈಲರ್‍ನಲ್ಲಿ ಅಭಿಮಾನಿಗಳನ್ನು ಆಕರ್ಷಸಿದ್ದು ಸಲ್ಲು ಧರಿಸಿದ್ದ ಪೆಡೆಂಟ್. ಭಜರಂಗಿ ಬಾಯಿಜಾನ್ ಸಿನಿಮಾದಲ್ಲಿ ಸಲ್ಲು ಪಕ್ಕಾ ಹುನುಮಂತನ ಭಕ್ತನಾಗಿದ್ದು, ಹನುಮಂತನ ಆಯುಧ ಗದೆ ವಿನ್ಯಾಸದ ಪೆಡೆಂಟ್ ತಯಾರಿಸಲಾಗಿದೆ.

ಪೆಡೆಂಟ್ ವಿಶೇಷತೆ..?: ಸಿನಿಮಾಗಾಗಿ ತಯಾರಾಗಿರುವ ಪಡೆಂಟ್ ಈಗ ಭಜರಂಗಿ ಬಾಯಿಜಾನ್ ಪಡೆಂಟ್ ಎಂದೇ ಹೆಸರಾಗಿದೆ. ಈ ಪಡೆಂಟ್‍ನ ಒಟ್ಟು ಮೊತ್ತ 71 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪಡೆಂಟ್‍ನನ್ನು 18 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದ್ದು, 0.85 ಕ್ಯಾರೆಟ್‍ನ ಚಿನ್ನದ ಪೆಡೆಂಟ್‍ನನ್ನು 17 ಸಣ್ಣ ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ.

Write A Comment