ರಾಷ್ಟ್ರೀಯ

ಮಹಿಳೆ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ; ಹಲ್ಲೆ ನಡೆಸಿ ಗುಪ್ತಾಂಗಕ್ಕೆ ರಾಡ್ ತೂರಿಸಿದ ಕಾಮುಕರು

Pinterest LinkedIn Tumblr

rape1

ಭೂಪಾಲ್, ಜೂ.1: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಡಿ.16ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣದಂತಹ ಅಮಾನುಷ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದ್ದು, ಮಹಿಳೆ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದಾಳೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಹ್ರಿ ಎಂಬಲ್ಲಿ 6 ಮಂದಿ ದುಷ್ಕರ್ಮಿಗಳು 40 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ, ಹಲ್ಲೆ ಮಾತ್ರವಲ್ಲದೆ ಮಹಿಳೆಯ ಗುಪ್ತಾಂಗದಲ್ಲಿ ರಾಡ್ ತೂರಿಸುವಂತಹ ಪೈಶಾಚಿಕ ಕೃತ್ಯವನ್ನು ಎಸಗಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಬುಡಕಟ್ಟು ಸಮುದಾಯದ ಮಹಿಳೆ ಇದೀಗ ಆಸ್ಪತ್ರೆಯಲ್ಲಿ ಬದುಕಲು ಹೆಣಗಾಡುತ್ತಿದ್ದಾರೆ. ಈ ಮಹಿಳೆ ಮಾಟಗಾತಿ ಎಂದು ಆರೋಪಿಸಿ ಈ 6 ಮಂದಿ ದುಷ್ಕರ್ಮಿಗಳು ಈ ಹೇಯ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಅತ್ಯಾಚಾರಿ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Write A Comment