ಕರ್ನಾಟಕ

91 ಸಾಧಕರಿಗೆ 2015ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ

Pinterest LinkedIn Tumblr

Kempegouda-Award

ಬೆಂಗಳೂರು, ಏ.3-ಸಾಹಿತಿ ಸಾ.ಶಿ.ಮರುಳಯ್ಯ, ಜಿ.ಎಸ್.ಸಿದ್ದಲಿಂಗಯ್ಯ, ಈ ಸಂಜೆ ಸಹ ಸಂಪಾದಕ ವಿ.ಶ್ರೀನಿವಾಸ್, ಚಿತ್ರ ನಟಿ ಆರ್.ಟಿ.ರಮಾ, ರಣಜಿ ಕ್ರಿಕೆಟ್ ಆಟಗಾರ ಸುಜಿತ್ ಸೋಮಸುಂದರ್ ಸೇರಿದಂತೆ  ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 91 ಮಂದಿ ಗಣ್ಯರು ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ಸಾಧನೆಗಳನ್ನು ಗುರುತಿಸಿ 91 ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಮೇಯರ್ ಶಾಂತಕುಮಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾಜ ಸೇವೆ:
ರಾಜೇಗೌಡ, ನಾರಾಯಣಸ್ವಾಮಿ, ದಾಸಪ್ಪಗೌಡ, ಭಾರ್ಗವಿ, ರೇಣುಕಾಪ್ರಸಾದ್, ಡಾ.ರಿತಿಕಾ ಮಂಜುಳಾ, ಎ.ಬಿ.ಶಿವಕುಮಾರ್, ಎಂ.ಸಿದ್ದಪ್ಪಮೇಫಲಾಲಾ, ಅಬಲಾಶ್ರಮ, ಶ್ರೀನಿವಾಸನ್, ವಿ.ನಾಗರಾಜ್.
ರಂಗಭೂಮಿ:
ಕೆ.ಜಿ.ವೆಂಕಟೇಶ್, ಭಾಗ್ಯಶ್ರೀ, ಗುರುಮೂರ್ತಿ, ವೆಂಕಟೇಶಯ್ಯ, ಲಕ್ಷ್ಮೀಶ್ರೀನಿವಾಸ್,ಟಿ.ಎಲ್.ರಮೇಶ್, ಪಿ.ಹುಚ್ಚಪ್ಪ, ವಿಜಯಕುಮಾರ್ ಜಿತೂರಿ.
ಚಲನಚಿತ್ರ:
ನಟ, ನಿರ್ಮಾಪಕ ರವಿಶಂಕರ್, ಆರ್.ಟಿ.ರಮಾ, ನಾಗತಿಹಳ್ಳಿ ರಮೇಶ್, ಶ್ರೀನಿವಾಸ್‌ಕುಮಾರ್.
ನೃತ್ಯ:
ಗೀತಾರಾಣಿ, ಶರವಣಧನ್‌ಪಾಲ್, ಡಾ.ಮಾಲಿನಿ ರವಿಶಂಕರ್, ಶುಭಾಧನಂಜಯ.
ಸಂಗೀತ:
ವೇದಾವಿ, ಭಟ್, ಚನ್ನಯ್ಯ, ಟಿ.ರಾಜಾರಾಂ, ಡಾ.ವಸುಧಾ ಶ್ರೀನಿವಾಸ್, ಕುಮಾರಿ ಸ್ಫೂರ್ತಿ, ಆನಂದ ಮೊದಲಗೆರೆ, ಶ್ರೀಕಾಂತನಾಗೇಂದ್ರಶಾಸ್ತ್ರಿ.
ಸಾಹಿತ್ಯ:
ಡಾ.ಸಾ.ಶಿ.ಮರುಳಯ್ಯ, ಜಿ.ಎಸ್.ಸಿದ್ದಲಿಂಗಯ್ಯ, ಎಸ್.ಜಿ.ಮಾಲತಿಶೆಟ್ಟಿ.
ಶಿಕ್ಷಣ:
ಎ.ಎಸ್.ಕುದ್ರೋಳಿ. ಎಸ್.ಎಲ್.ವೇಣುಗೋಪಾಲ್.
ಪತ್ರಿಕಾರಂಗ:
ವಿ.ಶ್ರೀನಿವಾಸ್, ಶಿವಕುಮಾರ್ ಬೆಳ್ಳಿತಟ್ಟೆ, ವೈ.ಎಸ್.ಎಲ್.ಸ್ವಾಮಿ, ರಮೇಶ್ ಹಿರೇಜಂಬೂರ್, ಜಗದೀಶ್‌ಮಣಿಯಾಣಿ, ಮಹಮ್ಮದ್ ಸಯ್ಯದ್ ಸಿದ್ದಿಕಿ.
ಕನ್ನಡ ಸೇವಾ ಕ್ಷೇತ್ರ:
ಮಂಜುಳಾ ಮೋಹನ್ ಮತ್ತು ಕನ್ನಡ ಕೃಷ್ಣ.
ಚಿತ್ರಕಲೆ:
ಬಿ.ವಿ.ವೆಂಕಟೇಶ್, ರಾಜೇಂದ್ರ ಚಂದ್ರಶೇಖರ್, ಯಶವಂತ್ ವಿಬಾಕಿ.
ಸಾಂಸ್ಕೃತಿಕ ಕ್ಷೇತ್ರ:
ಬೇಗಾರ್ ಶಿವಕುಮಾರ್, ವೈ.ಕಲಾವತಿ, ಮಹೇಶ್‌ಕುಮಾರ್, ಭದ್ರಯ್ಯ.
ಯೋಗಕ್ಷೇತ್ರ:
ಗುರೂಜಿ ಪ್ರಕಾಶಯೋಗಿ, ಆರ್.ನಂದಕುಮಾರ್, ರಾಜಶೇಖರ್, ಡಾ.ನಿರಂಜನಮೂರ್ತಿ.
ಕ್ರೀಡಾಕ್ಷೇತ್ರ:
ವಿಕಲಚೇತನೆ ಎಂ.ಮಂಜುಳಾ, ರಾಜೇಶ್, ಹರಿನಾಥ್, ಮಂಜುನಾಥ್, ಪ್ರದೀಪ್‌ಕುಮಾರ್, ಶ್ರೀಮತಿ ಅನೂಪ, ಸುಜಿತ್‌ಸೋಮ ಸುಂದರ್, ವೈ.ಜಿ.ಕೃಷ್ಣಮೂರ್ತಿ, ರವೀಂದ್ರಶೆಟ್ಟಿ, ಆಕಾಶ್‌ರೋಹಿತ್, ರೇಣುಕಾದೇವಿ ದೇಶಪಾಂಡೆ, ಬಿ.ಜಯರಾಂ, ಚೇತನ್ ಬಿ.ಆರಾಧ್ಯ, ಕುಮಾರಿ ಮೃದುಲಾ, ಶ್ರೀಮತಿ ಪ್ರಮೀಳಾ, ಬಿ.ಅಶೋಕ್‌ಕುಮಾರ್‌ನಾಯ್ಡು, ಇ.ರಾಮಕೃಷ್ಣರಾವ್, ರಾಜೇಂದ್ರನ್, ಜಿ.ಮಂಜುನಾಥ್, ಶ್ಯಾಮಲಾಶೆಟ್ಟಿ, ಕುಮಾರಿ ಮೇಘನಾ, ಪಿ.ಲಕ್ಷ್ಮೀನಾರಾಯಣ.
ಛಾಯಾಗ್ರಾಹಕ ಕ್ಷೇತ್ರ: ಸುದೀಪ್‌ಶೆಟ್ಟಿ.
ವಿವಿಧ ಕ್ಷೇತ್ರ: ಪುಟ್ಟರಂಗಯ್ಯ, ಬಾಬುಕೃಷ್ಣಮೂರ್ತಿ.
ಕಾನೂನು ಕ್ಷೇತ್ರ: ಕೆ.ಡಿ.ದೇಶಪಾಂಡೆ, ಮಾರಿಯೊಫಿರಿಸ್
ವೈದ್ಯಕೀಯ ಕ್ಷೇತ್ರ: ಡಾ.ಶಶಿಧರ್‌ಬುಗ್ಗಿ, ಡಾ.ವಿಜಯ್ ಲಕ್ಷ್ಮೀದೇಶಮಾನೆ, ಡಾ.ಕೆ.ರಾಜಗೋಪಾಲಹೊಳ್ಳ, ಡಾ.ಲಕ್ಷ್ಮಣ್, ಡಾ.ಚಂದ್ರೇಗೌಡ.

 * ಕೆಂಪೇಗೌಡ ದಿನಾಚರಣೆ
ಬೆಂಗಳೂರು, ಏ.3-ನಾಡಪ್ರಭು ಕೆಂಪೇಗೌಡ ದಿನಾಚರಣೆ ನಾಳೆ ನಡೆಯಲಿದ್ದು, ಬಿಬಿಎಂಪಿ ಕೇಂದ್ರ ಕಚೇರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗ್ಗೆ 8 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 9ಗಂಟೆಗೆ ನಗರದ ನಾಲ್ಕು ಗಡಿ ಗೋಪುರದಿಂದ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಹೊರಡಲಿದೆ. ನಂತರ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಮ್ಮ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ.
ನಾಲ್ಕು ದಿಕ್ಕಿನಿಂದ ಕಲಾತಂಡದೊಂದಿಗೆ ಕೇಂದ್ರ ಕಚೇರಿಗೆ ಬರುವ ಜ್ಯೋತಿಯನ್ನು ಮೇಯರ್ ಶಾಂತಕುಮಾರಿ ಸ್ವೀಕರಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಪಾಲಿಕೆಯ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ  ಪಾಲಿಕೆಯ 125 ಮಂದಿ ನೌಕರರಿಗೆ ಉತ್ತಮ ನೌಕರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಂಜೆ 6 ಗಂಟೆಗೆ ಪ್ರಮುಖ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್‌ಗುಂಡೂರಾವ್, ಕೆ.ಜೆ.ಜಾರ್ಜ್, ರೋಷನ್‌ಬೇಗ್, ಮತ್ತಿತರ ಸಚಿವರು, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್,  ಶಾಸಕರು, ಸಂಸದರು, ಮಾಜಿ ಮೇಯರ್‌ಗಳು, ಪಾಲಿಕೆ ಸದಸ್ಯರು ಮತ್ತಿತರರು ಪಾಲ್ಗೊಳ್ಳುವರು.

Write A Comment