ಕರ್ನಾಟಕ

ಅಂತರ್ಜಾಲದಲ್ಲಿ ಮೈಸೂರು ಅರಮನೆ: ಡಿಸೆಂಬರ್‌ನಲ್ಲಿ 4.67 ಕೋಟಿ ಜನ ವೀಕ್ಷಣೆ

Pinterest LinkedIn Tumblr

pvec28115mys-palace-1

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ­ಯನ್ನು ಅಂತರ್ಜಾಲದಲ್ಲಿ ಜಗತ್ತಿನಾ­ದ್ಯಂತ ಕಳೆದ ಡಿಸೆಂಬರ್‌ ತಿಂಗಳೊಂದ­ರಲ್ಲೇ ನೋಡಿದವರ ಸಂಖ್ಯೆ ಬರೋಬ್ಬರಿ 4.67 ಕೋಟಿ!

ಇದಕ್ಕಾಗಿ ಗೂಗಲ್‌ನಲ್ಲಿ ಮೊದಲ ರ್‌್ಯಾಂಕಿಂಗ್ ದೊರಕಿದೆ. ಮೂರು ವರ್ಷಗಳ ಹಿಂದೆ ಆರಂಭಗೊಂಡ mysorepalace.gov.in ಈ ಅಂತ­ರ್ಜಾಲ ತಾಣವನ್ನು ಪ್ರತಿ ವರ್ಷ 20 ಲಕ್ಷ ಜನರು ವೀಕ್ಷಿಸುತ್ತಿದ್ದರು. ಆದರೆ, ಕಳೆದ ವರ್ಷದಿಂದ ವಾಸ್ತವ ವಿಹಾರ (ವರ್ಚುವಲ್‌ ಟೂರ್) ಶುರು ಮಾಡಿದ ಮೇಲೆ ಇಡೀ ಅರಮನೆಯನ್ನು ವೃತ್ತಾಕಾರವಾಗಿ 360 ಡಿಗ್ರಿ ಕೋನ­ದಲ್ಲಿ ನೋಡಲು ಸಾಧ್ಯವಾ­ಗುತ್ತಿದೆ. ಹೀಗಾಗಿ, ಈ ಅಂತರ್ಜಾಲವನ್ನು ಪ್ರತಿ ವರ್ಷ 1.52 ಕೋಟಿ ಜನರು ವೀಕ್ಷಿಸುತ್ತಿದ್ದಾರೆ.

ಛಾಯಾ ವಿಹಾರದಲ್ಲಿ ಒಟ್ಟು 21 ಸಂಗತಿಗಳಿವೆ. ಪ್ರವೇಶದ್ವಾರ, ಹಳೆ ಅರಮನೆಯ ಮಾದರಿ, ಈಗಿನ ಅರಮನೆ, ಗೊಂಬೆ ತೊಟ್ಟಿ, ಆನೆದ್ವಾರ, ಚಾಮುಂಡೇಶ್ವರಿ ದೇವಿ, ಚಿನ್ನದ ಅಂಬಾರಿ, ಪೇಂಟಿಂಗ್‌, ದಸರಾ ಮೆರವಣಿಗೆ, ಕಲ್ಯಾಣ ಮಂಟಪ, ಛಾಯಾಚಿತ್ರ ಗ್ಯಾಲರಿ, ಟ್ರೋಫಿಗಳ ಸಂಗ್ರಹ ಗ್ಯಾಲರಿ, ದಸರಾದಲ್ಲಿ ದುರ್ಗಾ ಪೂಜೆಯ ಪೇಂಟಿಂಗ್, ದಸರಾ ಮೆರವಣಿಗೆಯಲ್ಲಿ ಮಹಾರಾಜರು, ಕುಸ್ತಿ ಅಖಾಡ, ಅರಮನೆಯ ಪೀಠೋ­ಪಕರಣ, ದರ್ಬಾರ್‌ ಹಾಲ್‌, ಒಡೆಯರ್‌ ಪರಂಪರೆಯ ಚಿತ್ರಗಳು, ಕಲಾತ್ಮಕ ಬೆಳ್ಳಿದ್ವಾರ, ಖಾಸಗಿ ದರ್ಬಾರ್‌ ಹಾಲ್‌, ವಿದ್ಯುತ್‌ ದೀಪಾ­ಲಂಕಾರದ ಅರಮನೆ… ಇವುಗಳನ್ನು ವಿವರಗಳ ಸಮೇತ  ನೋಡಬಹುದು.

ಮಾಹಿತಿ ಲಭ್ಯ: ಇಂಟರ್‌ನ್ಯಾಷನಲ್ ಸರ್ಚ್ ಎಂಜಿನ್‌ ಮೂಲಕ ಅರಮನೆ ಯನ್ನು ವಿವಿಧ ದೇಶಗಳವರು ತಮ್ಮ ತಮ್ಮ ಭಾಷೆಗಳಲ್ಲಿಯೇ ನೋಡ ಬಹುದು.
‘ಇದರಿಂದ ಚೀನಾ, ಜಪಾನ್‌ ಮೊದಲಾದ ದೇಶಗಳ ಪ್ರವಾಸಿಗರು, ಆಸಕ್ತರು ತಮ್ಮ ಸ್ಥಳೀಯ ಭಾಷೆಗ­ಳಲ್ಲಿಯೇ ನಮ್ಮ ಅರಮನೆಯ ವಿವರ­ಗಳನ್ನು ಪಡೆದುಕೊಳ್ಳ­ಬಹುದು.

mya(1)

ಒಟ್ಟು 37 ದೇಶಗಳ ಸ್ಥಳೀಯ ಭಾಷೆ ಗಳಲ್ಲಿಪಠ್ಯ ಬದಲಾಗುತ್ತದೆ. ಇದಕ್ಕಾಗಿ ಕೇಂದ್ರಸರ್ಕಾರದಿಂದ ಅನುಮತಿ ಪಡೆಯ­ಲಾಗಿದೆ’ ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇದೇ ಅಂತರ್ಜಾಲದಲ್ಲಿ ಭಾರತದ ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷೆ ಗಳಲ್ಲಿಯೂ ಲಭ್ಯ ಇರುವ ಹಾಗೆ ಅಭಿವೃದ್ಧಿಪಡಿಸಲಾಗುತ್ತಿದೆ’ ಎನ್ನುತ್ತಾರೆ ಅಂತರ್ಜಾಲದ ತಾಂತ್ರಿಕ ಅಧಿಕಾರಿ ಸಂಜಯ್ ಅಹುಜಾ.

Write A Comment