ಕರ್ನಾಟಕ

ರಾಮಾಯಣ ಕೃತಿ ಬರೆದವ ಹನುಮಂತ: ಬಂಜಗೆರೆ ಜಯಪ್ರಕಾಶ್ ವಿಶ್ಲೇಷಣೆ

Pinterest LinkedIn Tumblr

pvec29-Amanni-04

ಬೆಂಗಳೂರು: ‘ರಾಮನ ನಿಧನದ ಬಳಿಕ ಹನುಮಂತ ಬೆಟ್ಟದ ಮೇಲೆ ಕುಳಿತು ರಾಮಾಯಣ ಬರೆದ. ಬಳಿಕ ವಾಲ್ಮೀಕಿ ಅದನ್ನು ತಿದ್ದಿ ತೀಡಿ ಒಂದು ರೂಪಕ್ಕೆ ತಂದರು. ರಾಮಾ­ಯಣ ಗ್ರಂಥ ಸ್ವರೂಪ ಪಡೆದ  ಬಳಿಕ ವೈದಿಕರು ಕೃತಿಯ ಮೇಲೆ ಏಕಸ್ವಾಮ್ಯ ಸಾಧಿಸಿ ದರು’ ಎಂದು  ಕನ್ನಡ ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ವಿಶ್ಲೇಷಿಸಿದರು.

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯ ಹಾಗೂ ಕರ್ನಾ­ಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದಲ್ಲಿ ಬುಧವಾರ ನಡೆದ ‘ಡಾ.ಎ.ಕೆ.ರಾಮಾನುಜನ್‌ ಸಾಹಿತ್ಯ ಚಿಂತನೆ’ ರಾಜ್ಯ ಮಟ್ಟದ ವಿಚಾರ­ಸಂಕಿರಣವನ್ನು ಉದ್ಘಾಟಿಸಿ ‘ಮುನ್ನೂರು ರಾಮಾಯಣಗಳು’ ಕುರಿತು ವಿಚಾರ ಮಂಡಿಸಿದರು.

‘ಶ್ರೀರಾಮ ಗೋಮಾಂಸ ಭಕ್ಷಣೆ ಮಾಡಿದ್ದನ್ನು ದಾಖಲಿಸಿರುವ ವಾಲ್ಮೀಕಿ ರಾಮಾಯಣ ಯಾವತ್ತು ನಿಷೇಧಕ್ಕೆ ಒಳಗಾಗಲಿಲ್ಲ. ಆದರೆ, ಎ.ಕೆ. ರಾಮಾ­ನುಜನ್‌ ಅವರ ‘ಮುನ್ನೂರು ರಾಮಾ­ಯಣಗಳು’ ಪಠ್ಯಕ್ಕೆ ಬಲಪಂಥೀಯರು ವಿರೋಧ ವ್ಯಕ್ತಪಡಿಸಿದ್ದರು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವಾಲ್ಮೀಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ಪಂಚವಟಿ ಪ್ರಕರಣದಲ್ಲಿ ಗೌತಮರ ಆಶ್ರಮದಲ್ಲಿ ರಾಮ ಕರುವಿನ ಖಾದ್ಯ ತಿನ್ನುವ ಸಂಗತಿ ವಾಲ್ಮೀಕಿ ರಾಮಾಯಣದಲ್ಲಿ ಇದೆ. ಇಂತಹ ಅನೇಕ ನಿದರ್ಶನಗಳು ವಾಲ್ಮೀಕಿ ರಾಮಾಯಣದಲ್ಲಿ ಇವೆ’ ಎಂದು ಅವರು ಹೇಳಿದರು.

‘ರಾಮ ಎಂಬುದು ವ್ಯಕ್ತಿ ಅಲ್ಲ, ಅದು ಪದವಿಸೂಚಕ. ರಾವಣ ಎಂಬುದು ಸಹ ಪದವಿಸೂಚಕ. ರಾಮನ ಕಥೆ ಯಾವುದೇ ಒಬ್ಬ ವ್ಯಕ್ತಿಯದ್ದು ಅಲ್ಲ. ಆ ಪದವಿಯಲ್ಲಿದ್ದ ಹಲವು ವ್ಯಕ್ತಿಗಳ ಕಥನ. ಯುಗಧರ್ಮಕ್ಕೆ ಅನುಗುಣವಾಗಿ  ಸಾಮಾ­ಜಿಕ ಅನುಭವ ಕಥನ ರೂಪಕ್ಕೆ ಇಳಿಯಿತು’ ಎಂದು ಅವರು ಅಭಿಪ್ರಾ ಯಪಟ್ಟರು.

‘ರಾಮಾನುಜನ್‌ ಅವರು ಮುನ್ನೂರು ರಾಮಾಯಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಯುಗಧರ್ಮಕ್ಕೆ ಅನು­ಗು­ಣವಾಗಿ 3 ಸಾವಿರ ರಾಮಾ­ಯಣಗಳು ಇರಬಹುದು. ದಶರಥ ರಾಮ, ಸೀತಾ ರಾಮ, ಲಕ್ಷ್ಮಣ ರಾಮ ಎಂಬುದೂ ಸೇರಿದಂತೆ ರಾಮ ಎಂಬು­ವವರು ಸಾಕಷ್ಟು ಮಂದಿ ಇದ್ದಾರೆ’ ಎಂದು ಅವರು ವಿಶ್ಲೇಷಿಸಿದರು.

‘ಬೌದ್ಧ ಹಾಗೂ ಜೈನ ರಾಮಾ­ಯಣಗಳ ಪ್ರಕಾರ ದಶರಥನಿಗೆ ಮೂವರು ಮಕ್ಕಳು. ಅವರಲ್ಲಿ ಸೀತೆಯೂ ಒಬ್ಬಳು. ಅಂದರೆ ಜನಕನ ಮಗಳು (ತಂದೆಯ ಮಗಳು). ಸೀತೆ ಎಂದರೆ ಸರ್ಕಾರಿ ಭೂಮಿ ಹಾಗೂ ರಾಜನಿಗೆ ಸೇರಿದ ಭೂಮಿ ಎಂಬರ್ಥವೂ ಇದೆ’ ಎಂದು ಅವರು ಹೇಳಿದರು.

‘ವಾಲಿ ಸುಗ್ರೀವರು ಗದಾಪ್ರವೀ ಣರು.  ರಾಮ ಬಿಲ್ಲು ವಿದ್ಯೆಯಲ್ಲಿ ಚತುರ. ಹೀಗಾಗಿ ರಾಮನನ್ನು ಕಂಡು ಸುಗ್ರೀವನಿಗೆ ಭಕ್ತಿಭಾವ ಮೂಡಿತು. ಇಂತಹ ಸಂಗತಿ ರಾಮನ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಅವರು ತಿಳಿಸಿದರು.

‘ಇಡೀ ರಾತ್ರಿ ರಾಮಾಯಣ ಕೇಳಿದ  ಬಳಿಕ ಸೀತೆಗೆ ರಾಮ ಏನಾಗಬೇಕು’ ಎಂದು ಪ್ರಶ್ನಿಸುವವರು ದಡ್ಡರಲ್ಲ, ಅವರು ಪ್ರಾಜ್ಞರು. ರಾಮಾಯಣ ಕಥೆ ಕೇಳಿದ ಬಳಿಕ ಜನರಲ್ಲಿ ನೂರಾರು ಪ್ರಶ್ನೆಗಳು ಮೂಡುತ್ತವೆ’ ಎಂದರು. ‘ಮುನ್ನೂರು ರಾಮಾಯಣದಂತಹ ಕೃತಿ­ಗಳನ್ನು ಓದುವ ಮೂಲಕ ವಿದ್ಯಾ ರ್ಥಿಗಳು ಭಾವಾನ್ವೇಷಣೆ ಮಾಡ ಬೇಕು’ ಎಂದು ಅವರು ಕಿವಿಮಾತು ಹೇಳಿದರು.

Write A Comment