ಕರ್ನಾಟಕ

1,360 ಅಡಿ ಉದ್ದದ ರಾಷ್ಟ್ರಧ್ವಜ!

Pinterest LinkedIn Tumblr

dwaja

ಹೊಳೆನರಸೀಪುರ (ಹಾಸನ ಜಿಲ್ಲೆ): ಗಣರಾಜ್ಯೋತ್ಸವ ಅಂಗವಾಗಿ ಪಟ್ಟಣದ ವಾಸವಿ ಕ್ಲಬ್‌ ಸದಸ್ಯರು ಸೋಮವಾರ ೧,೩೬೦ ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಮಾಡುವ ಮೂಲಕ ಗಮನ ಸೆಳೆದರು.

ಪಟ್ಟಣದ ಬಾಲಕಿಯರ ಪದವಿಪೂರ್ವಕಾಲೇಜು, ವಾಸವಿ ವಿದ್ಯಾ ಸಂಸ್ಥೆ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲೆಗಳ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಬೃಹತ್ ರಾಷ್ಟ್ರಧ್ವಜ ಹೊತ್ತು ಸಾಗಿದ್ದು ಗಣರಾಜ್ಯೋತ್ಸವ ಮೆರವಣಿಗೆಗೆ ಶೋಭೆ ತಂದಿತು.

ಚೆನ್ನಾಂಬಿಕಾ ವೃತ್ತದಲ್ಲಿ ಶಾಸಕ ಎಚ್‌.ಡಿ. ರೇವಣ್ಣ, ತಹಶೀಲ್ದಾರ್‌ ನಾಗರಾಜ್‌ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಧ್ವಜವನ್ನು ಮೇಲೆತ್ತಿ ಹಿಡಿದು ಸಾಗಿದರು. ಧ್ವಜದ ಮುಂಭಾಗ ಗಾಂಧಿ ವೃತ್ತ ತಲುಪಿದಾಗ ಹಿಂಭಾಗ ಅರಳೆಪೇಟೆಯಲ್ಲಿತ್ತು.

1996ರಲ್ಲಿ ತುಮಕೂರಿನ ಡಿ.ಸಿ. ಲಕ್ಷ್ಮೀನಾರಾಯಣ ಗುಪ್ತಾ ಎಂಬುವವರು ೧,೩೦೦ ಮೀಟರ್‌ ಬಟ್ಟೆ ಬಳಸಿ ಈ ರಾಷ್ಟ್ರಧ್ವಜ ತಯಾರಿಸಿದ್ದಾರೆ. ಇದಕ್ಕಾಗಿ ೧೫ ಜನರು ನಿರಂತರವಾಗಿ ೧೦ ದಿನಗಳ ಕಾಲ ಶ್ರಮಿಸಿದ್ದಾರೆ.

‘ಈ ಹಿಂದೆ ಬೃಹತ್ ರಾಷ್ಟ್ರಧ್ವಜವು ಕರ್ನಾಟಕದ ಚಿಂತಾಮಣಿ, ತುಮಕೂರು, ಬೆಂಗಳೂರಿನ ಯಲಹಂಕ, ಆಂಧ್ರಪ್ರದೇಶದ ಅನಂತಪುರ, ಪೆನುಕೊಂಡಾ, ಮದನಪಲ್ಲಿಯ ರಾಷ್ಟ್ರೀಯ ಹಬ್ಬಗಳಲ್ಲಿ ಪ್ರದರ್ಶನಗೊಂಡಿದೆ’ ಎಂದು ಧ್ವಜ ಸಿದ್ಧಪಡಿಸಿದ ಲಕ್ಷ್ಮೀನಾರಾಯಣ ಗುಪ್ತಾ ತಿಳಿಸಿದರು.

Write A Comment