ಕರ್ನಾಟಕ

ಹುಡುಗಿಯೊಬ್ಬಳ ಹಾಯ್ಕುಗಳು: ಹಂಚಿಕೊಂಡರೆ ಅಧಿಕವಾಗುವ ನೋವು

Pinterest LinkedIn Tumblr

raped-women

ಅವಳ ಕಡಲಿನಂಥಹ ಆಳವಾದ
ನಿಗೂಢ ಕಣ್ಣುಗಳು ನನ್ನ ನೆಮ್ಮದಿ,
ನಿದ್ದೆಯನ್ನು ಹಾಳು ಮಾಡಿವೆ

ಕಡಿದಾಳು ಶಾಮಣ್ಣ ಅವರ ಆತ್ಮಕಥನ ‘ಕಾಡು ತೊರೆಯ ಜಾಡು’ ಪುಸ್ತಕದಲ್ಲಿ ಒಮ್ಮೆ ರೈತರ ಹೋರಾಟ ನಡೆಯುವಾಗ ಗೋಲಿಬಾರ್ ನಡೆದು, ಯುವ ರೈತನೊಬ್ಬ ಗುಂಡಿಗೆ ಬಲಿಯಾಗು ತ್ತಾನೆ. ಅದನ್ನು ಕಣ್ಣಾರೆ ನೋಡಿದ ಶಾಮಣ್ಣ,”ಆ ಯುವಕನ ಕಣ್ಣು ಗಳನ್ನು ನೋಡಿದ ನಾನು ಶಾಶ್ವತವಾಗಿ ನನ್ನ ನಿದ್ದೆ ಕಳೆದುಕೊಂಡೆ,” ಎಂದು ಬರೆಯುತ್ತಾರೆ. ಮಧ್ಯರಾತ್ರಿ ತೀರಾ ಭಾವುಕಳಾಗಿ ಓದುತ್ತಿದ್ದ ನನಗೂ ಆ ಕ್ಷಣಕ್ಕೆ ಅದರ ತೀವ್ರತೆ ತಟ್ಟಿರಲಿಲ್ಲ. ಸಂಕ್ರಾಂತಿಯ ಮಾರನೆಯ ದಿನ ಆ ಘಟನೆ ನಡೆಯುವರೆಗೆ. ನನ್ನ ‘ಆಪ್ತಸಮಾಲೋಚನೆ ಕೇಂದ್ರ’ಕ್ಕೆ ಬರುವವರ ಏನೇ ಮಾತು ಗಳಿದ್ದರೂ ತುಂಬಾ ಜತನವಾಗಿಡುತ್ತೇನೆ. ಅದು ನನ್ನ ವೃತ್ತಿ ಧರ್ಮ ವಾದರೂ , ಗುಟ್ಟು ಕಾಪಾಡುವದರಲ್ಲಿ ಅಪರೂಪದ ಸಂಯಮ ಸಾಧಿಸಿದವಳು ಎನ್ನುವುದು ನನ್ನ ಬಳಗದಲ್ಲಿರುವ ಎಲ್ಲರಿಗೂ ಚನ್ನಾಗಿಯೇ ಗೊತ್ತು.

ಆದರೂ ಕೆಲವೊಮ್ಮೆ ಒಬ್ಬೊಬ್ಬರ ದೀನಸ್ಥಿತಿಗೆ ಮನಕಲಕಿ ಬಿಡುತ್ತದೆ. ಯಾರ ಹತ್ತಿರವೂ ಈ ಕುರಿತು ಮಾತನಾಡದ ಕಾರಣ ವಾರಗಟ್ಟಲೇ ನಿದ್ದೆ ಹಾಳಾಗುತ್ತದೆ. ನನ್ನಲ್ಲಿಗೆ ಬರುವವರ ಸಮಸ್ಯೆ ಗಳನ್ನು ಯಾರ ಹತ್ತಿರವಾದರೂ ಹೇಳಿದರೂ ”ಅರೇ, ಇಷ್ಟು ಚಿಕ್ಕ ವಿಷಯವನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿತ್ತಾ,” ಎಂದೇ ಕೇಳುತ್ತಾರೆ. ನಾನು ಕಂಡುಕೊಂಡಂತೆ ಇವೆಲ್ಲ ಮನಸ್ಸಿನ ಸೂಕ್ಷ್ಮ ವ್ಯಾಪಾರಕ್ಕೆ ಸಲ್ಲುವಂಥವು. ಇಲ್ಲಿ ಗುಲಗಂಜಿ ಚೂರೇ ಚೂರು ವಾಲಿ ದರೂ ವ್ಯವಹಾರದಲ್ಲಿ ಅಪಾರ ನಷ್ಟ ಅನುಭವಿಸಿ ‘ಜೀವ ಬೆಲೆ’ ತೆರುತ್ತಾರೆ. ಇದೇ ಕಾರಣಕ್ಕೆ ಅವರವರ ಸಮಸ್ಯೆ ಅವರವರಿಗೆ ದೊಡ್ಡದು ಎಂದು ಯಾರ ಸಮಸ್ಯೆಗಳನ್ನೂ ನಗಣ್ಯವಾಗಿ ಕಾಣುವುದಿಲ್ಲ.

ವರ್ಷದ ಕೆಳಗೆ ಒಂದು ಸಂಜೆ ಕ್ಲಿನಿಕ್ ಹುಡುಗಿಯೊಬ್ಬಳು ಬಂದಳು. ಬಂದವರಿಂದ ‘ಕೇಳಿಸಿ’ಕೊಳ್ಳವುದು ನನ್ನ ಪ್ರಥಮ ಕೆಲಸ. ಹೇಳುತ್ತಾ ಹೋದಳು. ಎಲ್ಲ ಸರಿಯಾಗಿದ್ದರೆ ತೀರಾ ಸಾಮಾನ್ಯ ಮತ್ತು ಮಿಡ್ಲ್‌ಕ್ಲಾಸ್ ಫ್ಯಾಮಿಲಿಯೊಂದರ ಸಮಸ್ಯೆ ಗಳು ಅವಳವೂ ಆಗಿದ್ದವು ಎಂದು ಮುಗಿಸಿಬಿಡಬಹುದಿತ್ತು. ಆದರೆ, ಅವಳ ಮನಸ್ಥಿತಿ ತೀರಾ ಹದಗೆಟ್ಟಿತ್ತು. ಯಾವಾಗ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಹೇಳಲು ಬರುತ್ತಿರಲಿಲ್ಲ. ಸಾಧ್ಯವಾ ದಷ್ಟು ಸಮಾಧಾನ ಮಾಡಿ ಮುಂದಿನವಾರ ಬರಲು ತಿಳಿಸಿದೆ. ಅಲ್ಲಿಂದ ಶುರುವಾಗಿತ್ತು ಅವಳ ನನ್ನ ಒಡನಾಟ. ಸಾಮಾನ್ಯ ವಾಗಿ ಕ್ಲೈಯಂಟ್‌ಗಳಿಗೆ ನನ್ನ ಮನೆಯ ವಿಳಾಸ ಗೊತ್ತಿರುವುದಿಲ್ಲ. ಕೌನ್ಸಿಲಿಂಗ್‌ಗೆ ಕ್ಲಿನಿಕ್‌ಗೆ ಬರುತ್ತಿದ್ದ ಹುಡುಗಿ ಸಂಕ್ರಾಂತಿಯ ದಿನ ಎಳ್ಳು ಕೊಡಲು ಮನೆಗೇ ಬಂದಾಗ ಅಚ್ಚರಿ ಜತೆ ತುಸು ಬೇಸರವೂ ಆಯಿತು. ಆದರೂ ತೋರಿಸಿ ಕೊಡದೇ ಮಾತನಾಡಿಸಿ ಕಳುಹಿಸಿದೆ. ಇದ್ದಷ್ಟೂ ಹೊತ್ತು ಏನೋ ಹೇಳಲು ಚಡಪಡಿಸುತ್ತಿದ್ದಳು. ನನಗೆ ಬೇರೆ ಕೆಲಸಗಳಿದ್ದವು. ಗಮನ ಕೊಡಲು ಸಾಧ್ಯವಾಗಲಿಲ್ಲ. ಬಾಗಿಲ ಬಳಿ ಹೋದವಳೆಡೆಗೆ ದೃಷ್ಟಿ ಹರಿಸಿದೆ, ಅವಳೂ ತಿರುಗಿದಳು. ಕಾಡಿನಲ್ಲಿ ದಿಕ್ಕು ತೋಚದೆ ಕಂಗಾಲಾಗಿ ನೆಲಕ್ಕೆ ಕುಸಿದ ಹಕ್ಕಿ ಕತ್ತೆತ್ತಿ ನೋಡಿದಂತಾಯಿತು. ಅದೇ ಕೊನೆಯ ಭೇಟಿ. ಆ ನೋಟವನ್ನು ಮರೆಯಲು ಸಾಧ್ಯವಾಗುತ್ತಿಲ್ಲ.

ಮರುದಿನ ಮೇಲ್ ಓಪನ್ ಮಾಡಿದರೆ ಆ ಹುಡುಗಿ, ಈ ಜಗತ್ತಿಗೆ ವಿದಾಯ ಹೇಳುತ್ತಿರುವುದಾಗಿ, ಅದಕ್ಕೆ ಕಾರಣವಾದ ಘಟನೆಯನ್ನು ಬರೆದು, ಸಾಧ್ಯವಾದರೆ ಇದನ್ನು ಯಥಾವತ್ತಾಗಿ ಎಲ್ಲಿಯಾದರೂ ಬರೆದು ನನ್ನ ಆತ್ಮಕ್ಕೆ ಶಾಂತಿ ಕೊಡಿಸಿ ಎಂದು ಮನವಿ ಸಲ್ಲಿಸಿದ್ದಳು. ಸೆಕ್ಯೂರಿಟಿ ಕಡೆ ಮನೆ ವಿಳಾಸ ಕೊಟ್ಟು ಓಡಿಸಿದೆ. ‘ಎಲ್ಲ ಮುಗಿದಿದೆ’ ಎಂದು ಬಂದ. ಪಿಚ್ಚೆನಿಸಿತು. ಕಳೆದ ಸಲ ಬಂದಾಗ, ”ಹೀಗೆ ಬಿಟ್ಟರೆ ಕಾಯಿಲೆ ಉಲ್ಬಣಿಸುತ್ತದೆ. ಮೆಡಿಸಿನ್ ಶುರು ಮಾಡು,” ಎಂದರೆ, ” ಒಮ್ಮೆ ಶುರು ಮಾಡಿದರೆ ಮಧ್ಯ ನಿಲ್ಲಿಸಲು ಆಗುವುದಿಲ್ಲ. ಮತ್ತೆ ತುಂಬಾ ದುಬಾರಿ. ಸದ್ಯ ಅಮ್ಮನ ಕಣ್ಣಿನ ಆಪರೇಷನ್ ಆಗಬೇಕಿದೆ. ಇನ್ನೊಂದೆರೆಡು ತಿಂಗಳು ಬಿಟ್ಟು ಶುರು ಮಾಡುತ್ತೇನೆ,” ಎಂದಿದ್ದಳು. ಬೌದ್ಧರ ”ಮಾತಿಗೆ ನಾಶಪಡಿಸುವ ಹಾಗೂ ಉಪಶಮನಗೊಳಿಸುವ ಶಕಿ ್ತ ಯಿದೆ. ಸತ್ಯ ಮತ್ತು ದಯೆಯನ್ನು ಸಮ್ಮಿಲನಗೊಳಿಸುವ ಶಕ್ತಿಯೂ ಉಂಟು. ಅಷ್ಟೇ ಅಲ್ಲ ಮಾತಿಗೆ ವಿಶ್ವವನ್ನು ಬದಲಾಯಿ ಸುವ ಶಕ್ತಿ ಇದೆ” ಎನ್ನುವುದು ವೈಯಕ್ತವಾಗಿ ನನಗೆ ತುಂಬಾ ಇಷ್ಟವಾದದ್ದು. ಇದನ್ನಿಲ್ಲಿ ನೆನಪಿಸಿಕೊಳ್ಳಲು ಕಾರಣ ಆ ಹುಡಿಗಿಯ ಜೀವ ತೆಗೆದು ಕೊಂಡಿದ್ದು ಬೇಜಾವಾಬ್ದಾರಿಯುತ ಅಣ್ಣನೊಬ್ಬ ಆಡಿದ ಮಾತು ಗಳು. ಮತ್ತು ಅವಳು ಹೇಳಿದ ಮಾತ್ರಕ್ಕೆ ಇದನ್ನಿಲ್ಲಿ ದಾಖಲಿಸುತ್ತಿಲ್ಲ. ಅವಳ ಕಡಲಿನಂಥಹ ಆಳವಾದ ನಿಗೂಢ ಕಣ್ಣು ಗಳು ನನ್ನ ನೆಮ್ಮದಿ, ನಿದ್ದೆ ಹಾಳು ಮಾಡಿವೆ. ಬರೆದು ಹಗುರಾ ಗುವುದೊಂದೆ ನನಗೆ ಉಳಿದ ದಾರಿ. ಮುಂದಿನದು ಅವಳು ಕಳುಹಿಸಿದ ಮಿಂಚಂಚೆಯ ಪೂರ್ಣಪಾಠ.

”ನನ್ನ ಮಾನಸಿಕ ನೆಮ್ಮದಿ ಹಾಳು ಮಾಡಿ, ಆಘಾತಕ್ಕೊಳ ಗಾ ಗು ವಂತೆ ವರ್ತಿಸಿದ ಅಣ್ಣನೇ ಈ ಸಾವಿಗೆ (ಕೊಲೆ) ಕಾರಣ. ಈ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗುವುದಿಲ್ಲ. ಹಿಂದೊಮ್ಮೆ ನೀವು ಹೇಳಿದಂತೆ ಅಪ್ಪ-ಅಮ್ಮನೊಟ್ಟಿಗೆ ಮಾತನಾಡಿದೆ. ”ನಮಗೆ ಅಂತ ಅವನು ಏನು ಮಾಡದೇ ಹೋದರೂ ಪರವಾಗಿಲ್ಲ. ಮಗ ಮನೆಗೆ ಬಂದು ಹೋಗುತ್ತಾನೆ. ಸಮಾಜದಲ್ಲಿ ಜನರಿಗೋಸ್ಕರ ಬದುಕುವ ನಮಗೆ ಇಷ್ಟು ಸಾಕು,” ಎಂದರು. ಯುದ್ಧದಲ್ಲಿ ಸತ್ತ ಯೋಧನಿ ಗೊಂದು ಗುರಿಯೋ, ಸಾಧನೆಯೋ ಇರುತ್ತದೆ. ಹಂಚಿಕೊಂಡರೆ ಅಧಿಕವಾಗುವ ನೋವನ್ನು ನಗುನಗುತ್ತಲೇ ಸಹಿಸಿ, ಅಪ್ಪ- ಅಮ್ಮಂದಿರ ‘ತಮ್ಮ ನೀತಿಯ ಕುರುಡಿನಿಂದಾಗಿ’ ಸಾವಿನ ಸ್ನೇಹ ಬಯಸುವ ನನ್ನಂತಹ ಅನಾಮಧೇಯ, ನಿರ್ಮೋಹಿ ಹೆಣ್ಣು ಮಕ್ಕಳನ್ನು ರಕ್ಷಿಸು,” ಎನ್ನುವುದೊಂದೆ ನನಗೆ ಉಳಿದಿದ್ದು. ಮೊನ್ನೆ ರಾತ್ರಿ ನನಗೂ ಅಣ್ಣನಿಗೂ ಮೆಸೇಜ್‌ನಲ್ಲೇ ನಡೆದ ಸಂಭಾಷಣೆ ಈ ರೀತಿ ಇದೆ.

ನಾನು: ಒಂದೂವರೆ ವರ್ಷದಿಂದ ಅಪ್ಪ-ಅಮ್ಮ ಇರೋ ಮನೆ ಬಾಡಿಗೆ ಕಟ್ಟಿಲ್ಲ, ಕಟ್ಟು. ಅವರ ನಿತ್ಯ ಖರ್ಚಿಗೆ ಹಣ ಕೊಡು. ನನಗೆ ಈ ಜವಬ್ದಾರಿ ಸಾಕಾಗಿದೆ.

ಅವನು: ಕಳೆದ ಕೆಲವು ತಿಂಗಳಿನಿಂದ ನನ್ನ ಮನೆಯ ಬಾಡಿಗೆ ಯನ್ನೇ ಕಟ್ಟಿಲ್ಲ ನೀನು ಕಟ್ಟುತ್ತಿಯಾ?

ನಾನು: ನೀನು ಮಾಡದೇ ಬಿಟ್ಟ ಹೋದ ಕರ್ತವ್ಯದ ಸಾಲಗಳನ್ನೇ ತೀರಿಸುತ್ತಿದ್ದೇನೆ. ನಿನ್ನ ಮನೆ ಬಾಡಿಗೆ ಕಟ್ಟೊದೊಂದು ಬಾಕಿ ಇದೆ.

ಅವನು: ನನ್ನ ಕರ್ತವ್ಯ ಏನು ಅಂತ ನನಗೆ ಗೊತ್ತು. ಇಂತಹ ಅನವಶ್ಯಕ ಮೇಸೆಜ್‌ಗಳನ್ನು ಮಾಡುವುದನ್ನು ನಿಲ್ಲಿಸು.

ನಾನು: ಕರ್ತವ್ಯ ಗೊತ್ತು ಅಂದೆಯಲ್ಲ, ಒಂದು ತಿಂಗಳ ಸಂಬಳವನ್ನು ಅಪ್ಪ- ಅಮ್ಮನಿಗಾಗಿ ಖರ್ಚು ಮಾಡಿಬಿಡು.

ಅವನು: ನನ್ನ ಸಂಪರ್ಕಿಸಲು ನಿನಗೆ ನಾಚಿಕೆ ಆಗಲ್ವಾ, ನಾನು ಒಂದೇ ಒಂದು ಸಾರಿ ನಿನ್ನ ಸಂಪರ್ಕಿಸಲು ಪ್ರಯತ್ನಿಸಿಲ್ಲ.

ನಾನು: ನಿನಾಗ್ಲೆ ನನ್ನ ಸಂಪರ್ಕಿಸುವ ಪ್ರಶ್ನೆಯೇ ಇಲ್ಲ. ನಿನ್ನದೇನೂ ನನ್ನ ತಲೆಯ ಮೇಲಿಲ್ಲ. ಅಪ್ಪ-ಅಮ್ಮ ನನ್ನ ತಲೆಯ ಮೇಲಿದ್ದಾರೆ. ಈ ಸಮಸ್ಯೆ ಬಗೆ ಹರಿಯುವವರೆಗೆ ನಿನ್ನ ಸಂಪರ್ಕಿಸಲೇ ಬೇಕು, ಸಂಪರ್ಕಿಸುತ್ತೇನೆ.

ಅಣ್ಣ: ಜಗತ್ತಿನಲ್ಲಿ ನಿನಗೊಬ್ಬಳಿಗೆ ಜವಾಬ್ದಾರಿ ಇದೇ ಅನ್ನೋ ರೀತಿ ಆಡ್ಬೇಡ. ನನಗೆ ಗೊತ್ತಿದೆ. ಮುಂದೆ ನಿನಗೆ ಗೊತ್ತಾಗುತ್ತೆ ಯಾರು ಏನು ಅಂತ. ನನ್ನ ಮತ್ತು ಅಪ್ಪ-ಅಮ್ಮನ ಮಧ್ಯ ತಂದು ಹಾಕಲು ನೋಡುತ್ತಿರುವ ನೀನು ಹಾವಿನಂಥವಳು.

ನಾನು: ಮದುವೆ, ಮಕ್ಕಳು, ಮನೆ ಆಯ್ತು. ಇನ್ನೂ, ನಿನ್ನದೆಲ್ಲ ಒಪ್ಪ ಮಾಡಿಕೊಳ್ಳುವ ಕಾಲಕ್ಕೆ ಅಪ್ಪ-ಅಮ್ಮನಿಗೂ ವಯಸ್ಸಾಗಿರು ತ್ತದೆ. ಸಾಯೋ ತನಕ ಎರಡು ಹೊತ್ತಿನ ಊಟ ಹಾಕಬಹುದು ಅದಕ್ಕಿಂತ ಹೆಚ್ಚಿನದೇನಿಲ್ಲ. ಅಲ್ಲಿಯವರೆಗೆ ನನ್ನ ಶ್ರಮ, ಹಣ ಖರ್ಚು ಮಾಡಿ ಅವರನ್ನು ಸುಖವಾಗಿಟ್ಟಿರುತ್ತೇನೆ. ಕರ್ತವ್ಯ ಗೊತ್ತಿ ಲ್ಲ ದಿರೋ ಅಣ್ಣ ಎನ್ನುವ ಪ್ರಾಣಿಯಿಂದ ಮನುಷ್ಯಳು ಎನಿಸಿಕೊಳ್ಳು ವುದಕ್ಕಿಂತ ಹಾವು ಎನಿಸಿಕೊಳ್ಳುವುದು ವಾಸಿ. ಒಳ್ಳೆಯದಾಗಲಿ.

”ಅಪ್ಪನ ಆಸ್ತಿ-ಅಂತಸ್ತಿಗೆ ಮಗ ವಾರಸುದಾರನಾದಂತೆ ನಾನು ಮನ ಉರಿದುಕೊಂಡು ಇಟ್ಟ ಶಾಪಕ್ಕೂ ಈ ಮಗ ಮತ್ತವನ ಹೆಂಡತಿ, ಮಕ್ಕಳು ವಾರಸುದಾರರಾಗಲಿ. ಅಪ್ಪ-ಅಮ್ಮ ಮಾಡಿದ ಕರ್ಮದ ಫಲ ಮಕ್ಕಳಿಗೂ ಸಲ್ಲುತ್ತದೆ ಎನ್ನುವುದು ನಿಜವಾದರೆ, ಚಿಕ್ಕ ವಯಸ್ಸಿಗೆ ಇಷ್ಟು ನೋವು ಅನುಭವಿಸಿ, ಸತ್ತು ಸಾಧಿಸುವ ಹಠಕ್ಕೆ ಬಿದ್ದು ಇಲ್ಲಿಂದ ಹೊರಟು ಹೋಗುವಂತಾದ ನನ್ನ ಬೇಗುದಿ, ನೋವಿನ ವಾರಸುದಾರಿಕೆ ಅಪ್ಪ-ಅಮ್ಮನದಾಗಿರಲಿ ಆಮೆನ್.”

Write A Comment