ಕರ್ನಾಟಕ

ನನ್ನ ವಿರುದ್ಧದೂರು ನೀಡುತ್ತಿರುವುದಕ್ಕೆ ಯಾವುದೇ ಅಭ್ಯಂತರವಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

Siddaramayya-Tention

ಮೈಸೂರು, ಜ.22: ಅರ್ಕಾವತಿ ಡಿ ನೋಟಿಫಿಕೇಷನ್ ಸಂಬಂಧ ನನ್ನ ಬಗ್ಗೆ ದೂರು ನೀಡುತ್ತಿರುವುದಕ್ಕೆ ಯಾವುದೇ ಅಭ್ಯಂತರ ಅಥವಾ ಬೇಸರವಿಲ್ಲ. ದೂರು ಸ್ವೀಕರಿಸಲೆಂದೇ ಕೆಂಪಯ್ಯ ಆಯೋಗ ರಚನೆ ಮಾಡಿರುವುದು. ಯಾರು ಬೇಕಾದರೂ ದೂರು ಕೊಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕೆಂಪಯ್ಯ ಆಯೋಗ ರಚಿಸಲಾಗಿದೆ.

ದೂರು ದಾಖಲೆಗಳು ಇದ್ದರೆ ಆಯೋಗಕ್ಕೆ ಕೊಡಿ. ನನ್ನ ಮೇಲೆ ದೂರುಗಳಿದ್ದರೆ ನೀಡಿ ಸಂತೋಷ. ಒಂದಿಂಚೂ ಭೂಮಿಯನ್ನು ನಾನು ಡಿ ನೋಟಿಫಿಕೇಷನ್ ಮಾಡಿಲ್ಲ, ನಾನು ಬಿಜೆಪಿ ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.

ನಾನು ಮಾಡಿದ್ದು ರೀ ಮಾಡಿಫಿಕೇಷನ್, ಡಿನೋಟಿಫಿಕೇಷನ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಅರ್ಕಾವತಿ ಡಿನೋಟಿಫಿಕೇಷನ್ ಮಾಡಿದ್ದು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ಕಾಲದಲ್ಲಿ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಹೊರಡಿಸಿರುವ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ನಮ್ಮ ಸರ್ಕಾರ ಹೋರಾಟ ಮಾಡುತ್ತದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ. ಆದರೂ ಕೇಂದ್ರ ಸರ್ಕಾರ ಇನ್ನೂ ಬೆಲೆ ಇಳಿಸಿಲ್ಲ, ಇಳಿಕೆಯಾಗಿರುವ ಇಂಧನ ಬೆಲೆಯ ಲಾಭ ಜನಸಾಮಾನ್ಯರಿಗೆ ತಲುಪಬೇಕು ಎಂದು ಸಿಎಂ ಹೇಳಿದರು.

Write A Comment