ಕರ್ನಾಟಕ

ಮೈಸೂರಿನ ಒಡೆಯರ್ ಉತ್ತರಾಧಿಕಾರಿಯಾಗಿ ಯದುವರ್‌ರಾಜ್ ಅರಸ್

Pinterest LinkedIn Tumblr

Srikantadatta-Narasimharaj

ಬೆಂಗಳೂರು, ಜ.18: ಪ್ರತಿಷ್ಠಿತ ರಾಜಮನೆತನಗಳಲ್ಲಿ ಒಂದಾದ ಮೈಸೂರಿನ ಒಡೆಯರ್ ಸಂಸ್ಥಾನದ ಮುಂದಿನ ಉತ್ತರಾಧಿಕಾರಿಯಾಗಿ ಯದುವರ್‌ರಾಜ್ ಅರಸ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಇದೇ 20ರಂದು ಒಡೆಯರ್ ಸಂಸ್ಥಾನದ ಉತ್ತರಾಧಿಕಾರಿಯಾಗಿ ಯದುವರ್‌ರಾಜ್ ಅರಸ್ ಅವರನ್ನು ಅಧಿಕೃತವಾಗಿ ನೇಮಿಸಿ ಘೋಷಣೆ ಮಾಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಈಗಾಗಲೇ ಈ ಸಂಬಂಧ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ತಮ್ಮ ಕುಟುಂಬದ ಸಂಬಂಧಿಕರು, ಆತ್ಮೀಯರು, ಸ್ನೇಹಿತರು ಹಾಗೂ ಪುರೋಹಿತರ ಜತೆ ಚರ್ಚಿಸಿ ಯದುವರ್‌ರಾಜ್ ಅವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಪ್ರಮೋದಾದೇವಿ ಆಸಕ್ತಿ ತೋರಿದ್ದಾರೆ. ಇದೇ 21ರಂದು ಅಧಿಕೃತವಾಗಿ ಘೋಷಣೆಯಾಗಲಿದೆ.

ಯದುವರ್ ರಾಜ್ ಅರಸ್ ಯಾರು..?
ಮೈಸೂರು ಒಡೆಯರ್ ಸಂಸ್ಥಾನದ ಮುಂದಿನ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿರುವ ಯದುವರ್‌ರಾಜ್ ಅರಸ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಿರಿಯ ಸಹೋದರಿ ಗಾಯತ್ರಿದೇವಿ ಪುತ್ರ. ಬೋಸ್ಟಾನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಯದುವರ್‌ರಾಜ್ ಅರಸ್ ಗಾಯತ್ರಿದೇವಿ ಅವರ ಪುತ್ರಿ ಸುಂದರಾದೇವಿ ಹಾಗೂ ಕೈಗಾರಿಕೋದ್ಯಮಿ ಸ್ವರೂಪಾನಂದ ಅರಸ್ ಅವರ ಪುತ್ರರಾಗಿದ್ದಾರೆ. ಈ ಹಿಂದೆ ಉತ್ತರಾಧಿಕಾರಿಯಾಗಿ ಇವರ ಹೆಸರು ಕೇಳಿಬಂದಿತ್ತಾದರೂ ರಾಜಮನೆತನದಲ್ಲಿ ಉಂಟಾದ ವೈಮನಸ್ಸಿನಿಂದ ಇದು ನೆನೆಗುದಿಗೆ ಬಿದ್ದಿತ್ತು.

ತ್ರಿಪುರಸುಂದರಾದೇವಿ ಅವರು ಕಾಂತರಾಜ ಅರಸು ಅವರ ಕಿರಿಯ ಸಹೋದರಿಯಾಗಿದ್ದಾರೆ. ತಮ್ಮ ಪುತ್ರನನ್ನು ಒಡೆಯರ್ ಕುಟುಂಬದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವ ಬಗ್ಗೆಯೂ ಅವರು ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಪ್ರಮೋದಾದೇವಿ ಈ ಸಂಬಂಧ ಎಲ್ಲರ ಜತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆಂಬ ಮಾತು ಅರಮನೆಯಲ್ಲಿ ಕೇಳಿಬಂದಿದೆ. ಶೃಂಗೇರಿಗೆ ಭೇಟಿ: ಉತ್ತರಾಧಿಕಾರಿಯನ್ನು ನೇಮಕ ಮಾಡುವ ಸಂಬಂಧ ಪ್ರಮೋದಾದೇವಿಯವರು ಯದುವರ್‌ರಾಜ್ ಅರಸ್ ಜತೆ ಶೃಂಗೇರಿಗೆ ಭೇಟಿ ನೀಡಿ ಶ್ರೀಗಳ ಜತೆ ಚರ್ಚಿಸಿದ್ದರು ಎನ್ನಲಾಗಿದೆ.

ಸಾಮಾನ್ಯವಾಗಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಶೃಂಗೇರಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಯದುವರ್‌ರಾಜ್ ಅರಸ್ ಉತ್ತರಾಧಿಕಾರಿ ನೇಮಕ ಮಾಡಲು ಶೃಂಗೇರಿ ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ಪ್ರಮೋದಾದೇವಿ ತಮ್ಮ ಕುಟುಂಬದ ಹಿತೈಷಿಗಳಾದ ಪರಂತರ ಪರಕಾಲಮಠದ ಶ್ರೀಗಳ ಸಲಹೆ ಪಡೆದಿದ್ದಾರೆ. 20ರಂದು ಶ್ರೀಗಳೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಅರಮನೆಯಲ್ಲಿ ಕೇಳಿಬರುತ್ತಿದೆ.

Write A Comment