ಕರ್ನಾಟಕ

ರಜತಪರದೆ ಮೇಲೆ ದೇವನೂರರ ಕತೆಗಳು

Pinterest LinkedIn Tumblr

devanurumahade

ಕನ್ನಡದ ಹೆಸರಾಂತ ಸಾಹಿತಿ ದೇವನೂರು ಮಹದೇವ ಅವರ ಜೀವನ ಚರಿತ್ರೆಯನ್ನು ತೆರೆಯ ಮೇಲೆ ನೋಡುವ ಅವಕಾಶ ಕನ್ನಡಿಗರದ್ದಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ದಾಟು ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವರುದ್ರಯ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಸುದ್ದಿಗೆ ಹೊಸ ತಿರುವು ಸಿಕ್ಕಿದೆ.

ದೇವನೂರು ಮಹದೇವ ‘ಇದು ಕೇವಲ ವದಂತಿಯಷ್ಟೇ’ ಎಂದು ಹೇಳುವ ಮೂಲಕ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ‘ನಾನು ಬರೆದಿರುವ ‘ಮಾರಿಕೊಂಡವರು’ ಹಾಗೂ ‘ಡಾಂಬರು ಬಂದದು’ ಎರಡು ಕತೆಯಾಧರಿಸಿ ಸಿನಿಮಾ ಮಾಡಲಾಗುತ್ತಿದೆಯೇ ಹೊರತು ನನ್ನ ಜೀವನ ಚರಿತ್ರೆ ಕುರಿತಾದ ಸಿನಿಮಾ ಅಲ್ಲ. ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ಆದರೆ ಸುದ್ದಿ ಕೊಡುವವರೂ ಏನೋ ಯಡವಟ್ಟು ಮಾಡಿರಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗದಲ್ಲಿ ಶಿವರುದ್ರಯ್ಯ ನಿರ್ದೇಶನದ ಹಲವು ಚಿತ್ರಗಳು ಪ್ರಶಸ್ತಿಗಳನ್ನು ಪಡೆದಿವೆ. ಮೆಚ್ಚುಗೆ ಗಳಿಸಿವೆ. ಈಗ ದೇವನೂರು ಮಹದೇವ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಶಿವರುದ್ರಯ್ಯ ನಿರ್ಧರಿಸಿದ್ದಾರೆ. ದೇವನೂರು ಬರೆದಿರುವ ಪ್ರಮುಖ ಕೃತಿಯಲ್ಲೊಂದಾದ ಮಾರಿದವರು ಹೆಸರನ್ನೇ ಚಿತ್ರದ ಟೈಟಲ್ ಆಗಿದೆ.

ಚಿತ್ರದಲ್ಲಿ ತಮಿಳಿನ ಪ್ರಮುಖ ನಟರಲ್ಲೊಬ್ಬರಾದ ಸುಲಿಲ್ ಕುಮಾರ್ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಸಂಯುಕ್ತ ಹೊರನಾಡು ಮತ್ತು ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಇತ್ತೀಚೆಗೆ ದಲಿತ ಸಾಹಿತಿ ದೇವನೂರು ಮಹದೇವ ಅವರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಸುದ್ದಿಯಾಗಿದ್ದರು. ಕನ್ನಡ ಭಾಷೆಯನ್ನು ಶಾಲೆಗಳಲ್ಲಿ ಪ್ರಾಥಮಿಕ ಭಾಷೆಯನ್ನಾಗಿ ಮಾಡಬೇಕು ಅನ್ನೋದು ಅವರ ಆಗ್ರಹವಾಗಿದೆ. ಈ ಕಾರಣಕ್ಕಾಗಿಯೇ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವುದಿಲ್ಲ ಎಂದು ತಿರಸ್ಕರಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥ ಕೃತಿಗಳನ್ನು ನೀಡಿರುವ ದೇವನೂರ ಮಹದೇವ, ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜೀವನ ಚರಿತ್ರೆ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

2010-11ನೇ ಸಾಲಿನಲ್ಲಿ ಶಿವರುದ್ರಯ್ಯ ನಿರ್ದೇಶನದ ‘ಮಾಗಿಯ ಕಾಲ’ ಚಿತ್ರಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇದಲ್ಲದೆ, ರೂಪಾ ಅಯ್ಯರ್ ಅಭಿನಯಿಸಿರುವ, ಹಿರಿಯ ಬರಹಗಾರ ಅಶ್ವಥ ಅವರ ಕತೆಯನ್ನಾಧರಿಸಿದ ‘ದಾಟು’ ಚಿತ್ರಕ್ಕೂ ಹಲವು ಅಂತಾರಾಷ್ಟ್ರೀಯ ಮನ್ನಣೆ ದೊರಕಿವೆ.

Write A Comment