ಕರ್ನಾಟಕ

ಪ್ರೀತಿಸಿದ ಯುವತಿ ಹತ್ಯೆ ಪ್ರಕರಣದ ಆರೋಪಿಯನ್ನು ಗಲ್ಲಿಗೇರಿಸಲು ಬೃಹತ್ ಶಾಂತಿಯುತ ಮೆರವಣಿಗೆ

Pinterest LinkedIn Tumblr

krtika

ಕೊಳ್ಳೇಗಾಲ, ಜ,13: ಮೈಸೂರಿನ ಆರ್.ಟಿ. ನಗರದಲ್ಲಿ ಇತ್ತೀಚೆಗೆ ನಡೆದ ನಗರದ ಯುವತಿ ಎಂ.ಎಸ್. ಕೃತಿಕಾದೇವಿ ಹತ್ಯೆ ಪ್ರಕರಣವನ್ನು ಉನ್ನತ ತನಿಖೆಯನ್ನು ಒಳಪಡಿಸಬೇಕು ಹಾಗೂ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಹಲವಾರು ಗ್ರಾಮಗಳ ಜನರೂ ಸೇರಿದಂತೆ ದಲಿತ ಕೋಮಿನ ಮುಖಂಡರು ಮಂಗಳವಾರ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜತೆಗೂಡಿ ಶಾಂತಿಯುತವಾಗಿ ಬೃಹತ್ ಮೆರವಣಿಗೆ ನಡೆಸಿದರು.

ಕೊಳ್ಳೇಗಾಲ ನಗರದ ಆದರ್ಶ ಬ ಡಾವಣೆ ನಿವಾಸಿ ಮಹದೇವು ಎಬವರ ಪುತ್ರಿ ಕೃತಿಕಾದೇವಿ ಎಂಬ ಯುವತಿ ಮತ್ತು ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಪ್ರಮೋದ್‌ಕುಮಾರ್ ಎಂಬಾತ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ತಿಳಿದು ಬಂದಿತ್ತು.

ಇಂದು ದಲಿತ ಸಮುದಾಯ ಜನಾಂಗದವರು ರಸ್ತೆಯುದ್ದಕ್ಕೂ ಯುವತಿಯ ಭಾವಚಿತ್ರವನ್ನು ಹಿಡಿದು ನಗರದ ನ್ಯಾಷನಲ್ ಮೈದಾನದಿಂದ ಆರಂಭಿಸಿದ ಮೆರವಣಿಗೆ ನಗರದ ಎಂ.ಜಿ.ಎಸ್. ವಿ. ಕಾಲೇಜು ರಸ್ತೆ ಮೂಲಕ ಸಾಗಿ ತಾಲೂಕು ಉಪವಿಭಾಗಾಕಾರಿ ಕಚೆೇರಿ ಮುಂದೆ ವೌನ ಪ್ರತಿಭಟನೆ ನಡೆಸಿ ಉಪವಿಬಾಗಾಕಾರಿ ಕವಿತಾರಾಜಾರಾಂ ಅವರಿಗೆ ದಲಿತ ಮುಖಂಡರು ಮನವಿ ಪತ್ರವನ್ನು ಅವರಿಗೆ ಸಲ್ಲಿಸಿದರು.

ಮದುವೆ ಆಗು ಎಂದು ಪದೇ ಪದೇ ಒತ್ತಾಯಿಸುತ್ತಿದ್ದ ಕೃತಿಕಾಳನ್ನು ಪ್ರಿಯಕರ ಪ್ರಮೋದ್‌ಕುಮಾರ್ ಉಪಾಯ ಮಾಡಿ ಮೈಸೂರಿಗೆ ಕರೆದುಕೊಂಡು ಹೋಗಿದ್ದ ಕಳೆದ ಡಿ.21 ರ ರಾತ್ರಿ ಆರ್.ಟಿ.ನಗರ ವ್ಯಾಪ್ತಿಯ ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಅನಂತರ ಶವದ ಗುರುತು ಸಿಗದ ರೀತಿಯಲ್ಲಿ 17 ಬಾರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಮೈಸೂರಿನ ಜಯಪುರ ಪೋಲೀಸರು ದೂರು ದಾಖಲಿಸಿ ಕೊಂಡು ಆರಂಭಿಸಿದರು. ನಗರ ಕೆಲವೆಡೆಗಳಲ್ಲಿ ಸಿ.ಸಿ. ಟಿ.ವಿ. ದೃಶ್ಯಾವಳಿಗಳ ಮತ್ತು ಇಬ್ಬರ ಮೊಬೈಲ್ ಕರೆಗಳನ್ನು ಸಮಗ್ರ ತನಿಖೆಗೆ ಒಳಪಡಿಸಿದಾಗ ಕೃತಿಕಾದೇವಿ ಅಂತ್ಯ ಪ್ರಕರಣದಲ್ಲಿ ಆತನ ಪ್ರಿಯಕರನೆ ಕೊಲೆ ಮಾಡಿರುವುದಕ್ಕೆ ಪೊಲೀಸರಿಗೆ ಬಹಳಷ್ಟು ಪುರಾವೆಗಳು ಸಿಕ್ಕಿ.ೆ ಈ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದಕ್ಕೆ ದಲಿತ ಮುಖಂಡರು ಆರೋಪಿಯನ್ನು ಗಲ್ಲಿ ಗೇರಿಸಬೇಕೆಂದು ಒತ್ತಾಯಿಸಿದರು.

ಇಂದು ಕೃತಿಕಾದೇವಿ ಕೊಲೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹತ್ ವೌನ ವಾತಾವರಣ ನಿರ್ಮಾಣವಾಗಿತ್ತು. ದಲಿತ ಕೋಮಿನ ಮುಖಂಡರು ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಸೇರಿಸಿ ಧರಣಿೆ ನಡೆಸಿದರು. ಆನಂತರ ವಿವಿಧ ಶಾಲಾ ಕಾಲೇಜುಗಳು ಸಾವಿರಾರು ವಿದ್ಯಾರ್ಥಿಗಳು ಹಲವಾರು ಗ್ರಾಮದ ದಲಿತ ಮುಖಂಡರು ಧರಣಿ ಜೊತೆ ಕೈಜೋಡಿಸಿದರು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ನಾಲ್ಕೆದು ಕಡೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಪಟ್ಟಣದಲ್ಲಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ವಾಹನಗಳು ಸಂಚಾರಕ್ಕೆ ಅಡಚಣೆಯಾಗಿತ್ತು.

ಧರಣಿಯಲ್ಲಿ ದಲಿತ ಮುಖಂಡ ರಾದ ಬಸವರಾಜು, ಸಿದ್ದಪ್ಪಾಜಿ, ನಟರಾಜು, ಪುಟ್ಟರಾಜುಅರಸ್, ಸೋಮಶೇಖರ್, ಬಸವರಾಜು, ಚಾಮರಾಜು, ಲಿಂಗರಾಜು, ಮೂರ್ತಿ, ಶ್ರೀಧರ್, ಶಿವಮೂರ್ತಿ, ಸಿದ್ದರಾಜು, ರಾಜಶೇಖರ್, ರಾಜೇಂದ್ರ, ವಾಚ್‌ಕುಮಾರ್, ನಾಗರಾಜು, ವಸಂತ್‌ಕುಮಾರ್, ರಮೇಶ್, ಮಲ್ಲಿಕಾರ್ಜುನ, ಶಿವಕುಮಾರ್, ಪುಟ್ಟಬುದ್ದಿ, ಮಹದೇವು, ಕೊತರಿಸಿದ್ದರಾಜು, ಶ್ಯಾವ್, ವರದರಾಜು ಇನ್ನೂ ಮೊದಲಾದವರು ಭಾಗವಹಿಸಿದ್ದರು.

Write A Comment