ಕರ್ನಾಟಕ

ಬ್ಲೂ ಫಿಲಂ ಅವಾಂತರ; ಹೆಂಡತಿಗೆ ಕಿರುಕುಳ ನೀಡಿದ ಗಂಡನ ವಿರುದ್ಧ ದೂರು

Pinterest LinkedIn Tumblr

sexxx

ಮದುವೆ ಆಗಿ ಸಂಸಾರ ಮಾಡು ಅಂದ್ರೆ ಮದುವೆ ಆದಮೇಲೆ ಹೆಂಡ್ತಿ ಹತ್ರ ಬ್ಲೂಫಿಲ್ಮ್ ನಲ್ಲಿರೋ ತರಾ ಮಾಡು ಅಂದ ಕಿರಾತಕನೊಬ್ಬನ ವಿರುದ್ದ ಹೆಂಡತಿ ತಿರುಗಿ ಬಿದ್ದಿದ್ದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಇಂಡಿ ತಾಲೂಕಿನ ಡೋಣೂರು ಗ್ರಾಮದ ನಿವಾಸಿಯಾಗಿರುವ ಭಾರತಿ ಎಂಬಾಕೆಗೆ ಕನುಮಡಿ ಗ್ರಾಮದ ಸಿದ್ದರಾಮ ಎಂಬಾತನೊಂದಿಗೆ 2012ರಲ್ಲಿ ಮದುವೆಯಾಗಿತ್ತು. ಮೊದಲೇ ನೀಲಿಚಿತ್ರದ ವ್ಯಾಮೋಹ ಹೊಂದಿದ್ದ ಸಿದ್ದರಾಮ ಮೊಬೈಲ್ ನಲ್ಲಿ ಬ್ಲೂಫಿಲಂಗಳನ್ನು ಡೌನ್ ಲೋಡ್ ಮಾಡಿಕೊಂಡು ಬಂದು ಹೆಂಡತಿಗೆ ತೋರಿಸುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ ನೀನೂ ತುಂಬಾ ಚೆನ್ನಾಗಿದ್ದೀಯಾ ಅವರು ಮಾಡಿದಂತೆ ಮಾಡು ಎಂದು ಆಕೆಗೆ ಹಿಂಸೆ ನೀಡುತ್ತಿದ್ದ. ಇದರಿಂದ ರೋಸತ್ತ ಪತ್ನಿ ಭಾರತಿ ಮನೆಯ ಹಿರಿಯರಿಗೆ ತನ್ನ ಗಂಡನ ಭಂಡತನದ ಬಗೆಗೆ ಹೇಳಿದ್ದು ಅವರೂ ಆತನಿಗೆ ಸಾಕಷ್ಟು ಬುದ್ದಿ ಹೇಳಿದ್ದಾರೆ.

ಇದರಿಂದ ಆಕ್ರೋಶಗೊಂಡ ಸಿದ್ದರಾಮ ನಿನಗೆ ‘ಈ ರೀತಿ’ ಮಾಡಲಾಗದಿದ್ದರೆ ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಆಕೆಯನ್ನು ತವರು ಮನೆಗೆ ಅಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ನೊಂದ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು ತನ್ನ ಪತಿಯ ರಹಸ್ಯವನ್ನೆಲ್ಲ ನ್ಯಾಯಾಧೀಶರೆದುರು ಬಿಚ್ಚಿಟ್ಟಿದ್ದಾಳೆ. ನ್ಯಾಯಾಲಯ ತನಗೆ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಲ್ಲಿ ಆಕೆ ತವರಿನಲ್ಲಿಯೇ ಇದ್ದಾಳೆ ಎಂಬ ಮಾಹಿತಿ ದೊರೆತಿದೆ.

Write A Comment