ರಾಷ್ಟ್ರೀಯ

ಸುಬ್ರಮಣಿಯನ್ ಸ್ವಾಮಿ ಫೇಸ್ ಬುಕ್ ಆಕೌಂಟ್ ಡಿಲೀಟ್

Pinterest LinkedIn Tumblr

Subramaniam

ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರ ಹೆಸರನ್ನೇ ಹೋಲುತ್ತಿದ್ದ ನಕಲಿ ಆಕೌಂಟನ್ನು ಡಿಲೀಟ್ ಮಾಡಬೇಕಾಗಿದ್ದ ಫೇಸ್ ಬುಕ್ ಸಂಸ್ಥೆ ಪ್ರಮಾದವಶಾತ್ ಸುಬ್ರಮಣಿಯನ್ ಸ್ವಾಮಿಯವರು ಅಧಿಕೃತವಾಗಿ ಬಳಸುತ್ತಿದ್ದ ಒರಿಜನಲ್ ಆಕೌಂಟನ್ನೇ ಡಿಲೀಟ್ ಮಾಡಿಬಿಟ್ಟಿದೆ.

‘Subramanian Swamy’ ಈ ಹೆಸರಿನಲ್ಲಿ ಸುಬ್ರಮಣಿಯನ್ ಸ್ವಾಮಿಯವರು ತಮ್ಮ ಫೇಸ್ ಬುಕ್ ಆಕೌಂಟನ್ನು ಬಳಸುತ್ತಿದ್ದು ಅಕ್ಷರಗಳಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿ ಸೃಷ್ಟಿಸಲಾಗಿದ್ದ ನಕಲಿ ಆಕೌಂಟ್ ‘Subramaniam Swamy’ ಉಪಯೋಗಿಸುತ್ತಿದ್ದವರು ಈ ಆಕೌಂಟಿನಲ್ಲಿ ವಿಡಂಬನಾತ್ಮಕ ಹಾಗೂ ಅಣಕು ಬರಹಗಳನ್ನು ಪೋಸ್ಟ್ ಮಾಡುತ್ತಿದ್ದರು. ಬಹುತೇಕರು ಇದನ್ನು ಸುಬ್ರಮಣಿಯನ್ ಸ್ವಾಮಿಯವರ ಆಕೌಂಟ್ ಎಂದೇ ಭಾವಿಸುತ್ತಿದ್ದರಲ್ಲದೇ ಇದನ್ನು ಫಾಲೋ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.

ನಕಲಿ ಖಾತೆ ಕುರಿತ ಅರಿತ ಫೇಸ್ ಬುಕ್ ಸಂಸ್ಥೆ ಅದನ್ನು ತೆಗೆದುಹಾಕಲು ಮುಂದಾಗಿದ್ದು, ಆ ವೇಳೆ ಪ್ರಮಾದ್ ವಶಾತ್ ಸುಬ್ರಮಣಿಯನ್ ಸ್ವಾಮಿಯವರ ಅಧಿಕೃತ ಖಾತೆಯನ್ನೇ ಡಿಲೀಟ್ ಮಾಡಲಾಗಿತ್ತು. ನಂತರ ತನ್ನ ಪ್ರಮಾದ ಅರಿತ ಫೇಸ್ ಬುಕ್ ಸಂಸ್ಥೆ ಈಗ ಅವರ ಹೆಸರನ್ನೇ ಹೋಲುತ್ತಿದ್ದ ನಕಲಿ ಖಾತೆಯನ್ನು ತೆಗೆದುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ ಬೇಕೆಂದೇ ತಮ್ಮ ವಿರೋಧಿಗಳು ಈ ಕೆಲಸ ಮಾಡಿದ್ದರೆಂದು ಆರೋಪಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿಯವರ ಹೆಸರು ಹೋಲುತ್ತಿದ್ದ ನಕಲಿ ಖಾತೆಯಲ್ಲಿ ವಿಡಂಬನಾತ್ಮ ಹಾಗೂ ಅಣಕು ಬರಹಗಳನ್ನು ಪ್ರತಿ ನಿತ್ಯ ಪ್ರಕಟಿಸಲಾಗುತ್ತಿತ್ತು.

Write A Comment